By shukradeshe news Kannada July 13 Editor m rajappa m Vyasagondanahalli
ಬೆಂಗಳೂರು , ವಿಧಾನಸಭಾ ಸಭಾ ಕಲಾಪದಲ್ಲಿ ಹಿಂದೂಳಿದ ಜಗಳೂರು ಕ್ಷೇತ್ರದ ಸ್ಥಿತಿಗತಿ ಬಗ್ಗೆ ಶಾಸಕ ಬಿ ದೇವೆಂದ್ರಪ್ಪ ರವರು ಸಭಾ ಅದ್ಯಕ್ಷರಾದ ಟಿ ಖಾದರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಗಮನಕ್ಕೆ ವಿಷಯ ಪ್ರಸ್ತಾಪ ಮಾಡುವ ಮೂಲಕ ಕ್ಷೇತ್ರದ ಬಗ್ಗೆ ದ್ವನಿ ಎತ್ತಿದ್ದಾರೆ.
ಜಗಳೂರು ಪ್ರದೇಶ ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿ ಅತಿ ಹಿಂದೂಳಿದ ಪ್ರದೇಶವಾಗಿದೆ . ಇಲ್ಲಿ ಅತಿ ಹೆಚ್ಚು ರೈತರು ಒಣ ಬೇಸಾಯದ ಮೇಲೆ ಜೀವನ ಅವಲಂಭಿತವಾಗಿದೆ ಆದ್ದರಿಂದ ಶೀಘ್ರವೆ 57 ಕೆರೆ ತುಂಬಿಸುವ ಯೋಜನೆಡಿಯಲ್ಲಿ ಕ್ಷೇತ್ರಕ್ಕೆ ನೀರು ಬಿಡುವ ಅಗತ್ಯವಿದೆ.ಈಗಾಗಲೇ ಈ ಯೋಜನೆ ಪ್ರಾರಂಭವಾಗಿ 5 ವರ್ಷಗಳ ಕಾಲಾವಧಿ ಕಂಡು ಎರಡು ಶಾಸಕರು ಆಡಳಿತವು ಕಳೆದುಹೋದರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಬಿಡಲಾಗಿದೆ ಹೊರೆತು ಇನ್ನುಳಿದ ಬಹುಪಾಲು ಕೆರೆಗಳಿಗೆ ನೀರು ಹರಿಸಿರುವುದಿಲ್ಲ ನೀರಾವರಿ ನಿಗಮದ ಅಧಿಕಾರಿಗಳು ನೀರು ಬಿಡು ಎಂದರೆ ರೈಲು ಬಿಡುತ್ತಾರೆ ಸುಳ್ಳು ಹೇಳುವರು ಎಂದು ಸಭೆಯಲ್ಲಿ ಶಾಸಕರು ದ್ವನಿ ಎತ್ತಿದ್ದಾರೆ.2018 ರಲ್ಲಿ ಸಿರಿಗೆರೆ ಶ್ರೀಗಳ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿ ಎಂ ಸಿದ್ದರಾಮಯ್ಯ ರವರಿಂದ ಚಾಲನೆಯಾದ 57 ಕೆರೆ ತುಂಬಿಸುವ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ.
ಇದೀಗ ಶೀಘ್ರವೆ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೋಳಿಸಿ ನೀರು ಕೆರೆಗೆ ಹರಿಸುವಂತೆ ಸಭೆ ಗಮನಕ್ಕೆ ತಂದು ಮನವಿ ಮಾಡಿಕೊಂಡಿದ್ದಾರೆ.
ನಾನು ಸಾಮಾನ್ಯ ಜವಾನನಾಗಿ ಸೇವೆ ಸಲ್ಲಿಸಿರುವ ನನಗೆ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದಾರೆ ಜನರ ಋಣ ತೀರಿಸಲು ಪ್ರಮಾಣಿಕ ಸೇವೆ ಮಾಡುವೆ ನಂಬಿದ ಜನತಗೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುವೆ
ಶಾಸಕ ಬಿ. ದೇವೆಂದ್ರಪ್ಪ