filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

1008 ರೈತ ಮಕ್ಕಳ ಕಲ್ಯಾಣ ಮಹೋತ್ಸವಕ್ಕೆ ಪಣ ತೊಟ್ಟ ಚಂದ್ರಶೇಖರ್ ರವರ ಹೋರಾಟಕ್ಕೆ ರಾಜ್ಯದ್ಯಂತ ಜನಮೆಚ್ಚುಗೆ

1008 ಮಕ್ಕಳ ಯುವ ಜೋಡಿಗಳ ಮದುವೆ ಕಲ್ಯಾಣ ಮಾಡಲು ಪಣ ತೊಟ್ಟ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಘದ ರಾಜ್ಯಾದ್ಯಕ್ಷ‌ ಚಂದ್ರಶೇಖರ್ ರವರು ಹಗಲಿರುಳು ಹೋರಾಟದ ತುಡಿತ ಇವರ ಚಿಂತನೆ ಮಿಗಿಲಾದದ್ದು
ಸಮಾಜದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡದೆ ತಾರತಮ್ಯದೊರಣೆಯಿಂದ ನೋಡುವ ಈ ಕಾಲಘಟ್ಟದಲ್ಲಿ ರೈತರ ಬಗ್ಗೆ ಇರುವ ಅಸಡ್ಡೆ ಮನೋಭಾವನೆಯನ್ನ ಹೋಗಲಾಡಿಸಲು ಸಮಾಜದಲ್ಲಿ ಜನಜಾಗೃತಿ ಮೂಡಿಸಲು ರೈತ‌ಮಕ್ಕಳ 1008 ನವ ಜೋಡಿಗಳ ಮದುವೆ ಕಲ್ಯಾಣ ಮಹೋತ್ಸವಕ್ಕಾಗಿ ರಾಜ್ಯದ ಅನೇಕ ದಾನಿಗಳ ನೆರವು ಕೇಳಿ ದೇಶವೆ ತಿರುಗಿ ನೋಡುವಂತ ವಿಶಿಷ್ಠ ಬಾರತೀಯ ಸಂಸ್ಕೃತಿ ಆಚಾರ ವಿಚಾರಗಳ ಮೂಲಕ ಭಾರತೀಯ ಪರಂಪರೆ ಸಾರುವ ನಿಟ್ಟಿನಲ್ಲಿ ಮುನ್ನುಡಿಯಾಗಿದ್ದಾರೆ. ರೈತರ ಅನೇಕ ಸಮಸ್ಯೆ ಸವಾಲುಗಳ ವಿಚಾರಗೋಷ್ಠಿ ಮೂಲಕ ಕಲ್ಯಾಣ ಕಾರ್ಯಕ್ಕೆ ಮುಂದಾಗಿರುವ ಚಂದ್ರಶೇಖರ ರೈತರ ಒಡಲಾಳದ ನೋವಿಗೆ ಮನಮಿಡಿಯುವರು ರೈತರು ಈ ದೇಶದ ಬೆನ್ನೆಲುಬು, ದೇಶದ ಜನರಿಗೆ ಅನ್ನ ನೀಡುವ ಕಾಯಕಯೋಗಿ ಸುಖವಾಗಿದ್ದರೆ ದೇಶ ಸುಖವಾಗಿರುತ್ತೆ ಎಂಬ ಮಾತಿನ ಮೂಲಕ ಮಾತನಾಡುವ ಇವರ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಶರಣು .

ಇನ್ನು ರಾಜ್ಯದಲ್ಲಿ ಅನ್ನದಾತರ ಕಷ್ಟಗಳ ಪರಿಹರಿಸಲು ಅನೇಕ ರೈತ ಸಂಘಟನೆ ಮುಖಂಡರುಗಳು ಸಹ ಹೋರಾಟ ನಡೆಸುತಾ ಬರುತ್ತಿದ್ದಾರೆ ಅದೇ ರೀತಿ ಇಲ್ಲೊಬ್ಬ ಯುವ ಉತ್ಸಾಹಿ ಹೋರಾಟಗಾರ ಚಂದ್ರಶೇಖರ ನಿತ್ಯ ರೈತರ ಸಂಕಷ್ಟಗಳಿಗೆ ಸ್ವಂದಿಸುವ ಮೂಲಕ ರೈತರ ಬದುಕು ಅಸನಾಗಬೇಕು ಆದರೆ ಇತ್ತಿಚಿನ ದಿನಮಾನಗಳಲ್ಲಿ ರೈತ ಕುಟುಂಬದ ಮನೆ ಮಕ್ಕಳಿಗೆ ಕನ್ಯ ಕೊಡದೆ ಸಮಾಜದಲ್ಲಿ ನಿರ್ಲಕ್ಷ್ತಿಸುವ ಸಮಾಜವನ್ನ ಎಚ್ಚರಿಕೆ ಮತ್ತು ಜಾಗೃತಿಗೋಳಿಸುವ ನಿಟ್ಟಿನಲ್ಲಿ ರೈತ ಮಕ್ಕಳಿಗೆ 1008 ಮದುವೆ ಮಾಡಿಸುವ ಕಲ್ಯಾಣೊತ್ಸವಕ್ಕೆ ಹೋರಾಟ ನಡೆಸುತ್ತಿರುವುದು ಒಂದು ಹೋರಾಟ ಎಂದು ಭಾವಿಸುವೆ ಏಕೆಂದರೆ ರೈತರು ಸಹ ಕಡಿಮೆಯಿಲ್ಲ ಅವರನ್ನ ಕೀಳಾಗಿ ಕಾಣಬೇಡಿ ರೈತ ಬೆಳೆದರೆ ದೇಶ ಭಾಷೆ ಧರ್ಮ ಎಲ್ಲಾವು ರೈತ ಬೆಳೆ ಬೆಳೆಯದೆ ಹೋದರೆ ದೇಶವೇ ಅಲ್ಲೊಲಾ ಕಲ್ಲೊಲವಾಗುವುದು ಎಂಬುದನ್ನ ಯಾರು ಮರೆಯುವಂತಿಲ್ಲ ರೈತ ಹುತ್ತಿ ಬಿತ್ತಿ ಬೆಳೆದರೆ ಆಹಾರ ಪರಿಸ್ಥಿತಿ ಸುಧಾರಿಸಲು ಸಾದ್ಯ ಮನುಷ್ಯ ಅದೇಷ್ಟೆ ಶ್ರೀಮಂತನಾಗಿದ್ದರು ಚಿನ್ನ‌ ತಿನ್ನಲು ಸಾದ್ಯವಿಲ್ಲ ಅನ್ನ ತಿನಬೇಕೆ ಹೊರೆತು ಬೇರೆ ತಿನ್ನಲು ಸಾದ್ಯವಿಲ್ಲ ಎಂಬುದನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂಬ ಜನಜಾಗೃತಿ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ , ಇಂತ‌ ಸಾಮಾಜಿಕ ಕಳಕಳಿಯ ಹೋರಾಟಕ್ಕೆ ರಾಜ್ಯದ್ಯಂತ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಅನ್ನದಾತರ ಸಂಕಷ್ಟಗಳನ್ನ ಪರಿಹರಿಸಲು ಸರಕಾರಗಳು ಮುಂದಾಗಬೇಕು ಎಂದು ಗುಡುಗಿದ್ದಾರೆ.
ಆಧುನಿಕತೆ ಎಷ್ಟೆ ಬೆಳೆದರೂ ಏನೇ ಸಂಶೋಧನೆ ಬಂದರೂ ಅನ್ನದಾತ ರೈತರನ್ನು ಮೀರಿ ಯಾರು ಏನೇ ಮಾಡಲು ಸಾದ್ಯವಿಲ್ಲ

ಸರಕಾರಗಳು ರೈತರ ಪರಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ಮನದಾಳದ ಮಾತಿನ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ …

ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

Leave a Reply

Your email address will not be published. Required fields are marked *

You missed

error: Content is protected !!