ಮೈಸೂರು ಸುದ್ದಿ
ಲೇಖಕಿ ಸುಮಲತಾ ಹೆಚ್. ಎನ್ ಬನ್ನೂರು ರವರ ಅರುಣೋದಯ ಕಾದಂಬರಿ ಲೋಕಾರ್ಪಣೆ
ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್
ಇವರ
ಸಂಯುಕ್ತ ಆಶ್ರಯದಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಂಗೀತ ಕಲಾನಿಧಿ ಶ್ರೀ ಮೈಸೂರು ವಾಸುದೇವಾಚಾರ್ಯರ ಸಂಸ್ಮರಣಾರ್ಥ ಸಂಗೀತ,ನೃತ್ಯೋತ್ಸವ , ಉದಯೋನ್ಮುಖ ಲೇಖಕರ ಕೃತಿಗಳ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ ೨೯-೦೬-೨೦೨೫ ರ ಭಾನುವಾರದಂದು ಮೈಸೂರಿನ ಕುವೆಂಪು ನಗರದಲ್ಲಿ ಇರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಘಂಟೆಯವರೆಗೆ ಯಶಸ್ವಿಯಾಗಿ ನಡೆಯಿತು.
ಈ ನಡುವೆ ವೇದಿಕೆಯಲ್ಲಿ ಹೆಮ್ಮೆಯ ಸಾಂಸ್ಕೃತಿಕ ನಗರಿಯ ಉದಯೋನ್ಮುಖ ಸಾಹಿತ್ಯ ಪ್ರತಿಭೆಗಳಾದ ಶ್ರೀಮತಿ ಸುಮಲತಾ ಹೆಚ್. ಎನ್ ರವರ ಅರುಣೋದಯ ಕಾದಂಬರಿ ಲೋಕಾರ್ಪಣೆ ಗೊಂಡಿದ್ದು ಪುಸ್ತಕ ಪರಿಚಯವನ್ನು ಡಾ ll ಸಿ. ಪಿ. ಲಾವಣ್ಯ ರವರು ಮಾಡಿದರು, ಶ್ರೀಮತಿ ಮಮತಾ ಕೆ ಎಸ್ ತುರಗನೂರು ಇವರ ಚೊಚ್ಚಲ ಗಝಲ್ ಸಂಕಲನ ಚೈತ್ರ ಚಿತ್ತಾರ ಬಿಡುಗಡೆ ಕೃತಿಯ ಪರಿಚಯ ಮಾಡಿದ ಹಾ ಮಾ ಸತೀಶ್ ಹಾಗೂ ಮಂಡ್ಯ ದವರಾದ ಪುಷ್ಪ ಹೆಚ್ ಡಿ ಅವರ ಚಂದನ ಪುಷ್ಪ ಕೃತಿ ಪರಿಚಯ ಸತೀಶ್ ಜವರೇಗೌಡರು ಮಾಡಿದ್ದಾರೆ ಪುಸ್ತಕ ಬಿಡುಗಡೆ ಆಗಿರುವುದು ಹೆಮ್ಮೆಯ ಸಂಗತಿ , ಇದೇ ಸಮಯದಲ್ಲಿ ಸುಜಾತ ರವೀಶ್ ಅವರ ಮುಖವಾಡ ಕೃತಿ ಕುರಿತು ಚಂಪ ಚಿನಿವಾರ್, ತಾರ ನಂಜುoಡ ಶಾಸ್ತ್ರಿ ಅವರ ತಾರ ದನಿ ಕುರಿತು ಚಂದನ್ ಕೃಷ್ಣ, ಪೂರ್ಣಿಮ ರಾಜೇಶ್ ಅವರ ದಿವ್ಯ ಯೋಗಿನಿ ಕುರಿತು ರುಕ್ಮಿಣಿ ನಾಯರ್, ಪೂರ್ಣಿಮಾ ರಾಜೇಶ್ ರವರ ಅವಲೋಕನ ಕುರಿತು ಉಷಾರಾಣಿ, ಕುರಿತು ಮಾತನಾಡಿದ್ದಾರೆ ಹೀಗೆ ಲೇಖಕಿಯರ ವಿವಿಧ ಅತ್ಯುತ್ತಮ ಸಾಹಿತ್ಯ ಪ್ರಕಾರಗಳ ಸಂಕಲನಗಳು ಹೊರ ಬಂದವು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಉಳಿದ ಕೃತಿಕಾರರನ್ನೂ ಮತ್ತು ಕೃತಿ ಪರಿಚಯಕಾರರನ್ನು ವೇದಿಕೆಯಿಂದ ಸನ್ಮಾನಿಸಿದರು.
ಸಾಹಿತಿ ಶ್ರೀ ಎಸ್ ಸೋಮಶೇಖರ್, ವಿದ್ವಾನ್ ಡಾ ಚಿಂತನಾ ಪಲ್ಲಿ, ವಿ ಶ್ರೀನಿವಾಸ್ ವಿಧೂಷಿ ಗೀತಾ ಭಕ್ತದ್ ಸಮಾಜ ಸೇವಕ ಧರ್ಮ ರಾಜತಾಂ ಕರಿಯಪ್ಪ, ವೇದಿಕೆಯ ಗೌರವ ಪೋಷಕ ಮಂದಗೆರೆ ವಾಸು, ವ್ಯವಸ್ಥಾಪಕ ಟ್ರಸ್ಟಿ ಮಂದಗೆರೆ ರಾಮ್ ಕುಮಾರ್, ಪುಷ್ಕರ ಪ್ರಿಂಟ್ ಅಂಡ್ ಪಬ್ಲಿಷರ್ಸ್ ಪ್ರಕಾಶಕಿ ಅನಿತಾ ಪಿ. ಕೆ ಹಾಗೂ ಕನ್ನಡ ಪರಿಚಾರಕ ವೈಕುಂಠಯ್ಯ ಇದ್ದರು ಹಿರಿಯ ಸಾಹಿತಿಗಳು ಇವರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಜರುಗಿತು.ಭಾಗವಹಿಸಿದ ಎಲ್ಲಾ ಕವಿಗಳನ್ನು ಗೌರವಿಸಲಾಯಿತು.
