ಜಗಳೂರು ಸುದ್ದಿ

By shukradeshe news Kannada July 15 Editor m rajappa m Vyasagondanahalli

ಅನ್ಯ ತಾಲ್ಲೂಕು ಕೇಂದ್ರಕ್ಕೆ ಹೊಲಿಸಿದರೆ ಜಗಳೂರಿನಲ್ಲಿ ಸಾಹಿತ್ಯ ಪರಿಷತ್ ನ ಅಜೀವ ಸದಸ್ಯರ ಸಂಖ್ಯೆ ಕ್ಷೀಣಿಸುತ್ತಿದೆ . ಕಸಾಪ ಅದ್ಯಕ್ಷರು‌ ಸದಸ್ಯತ್ವ ಸಂಖ್ಯೆ ಹೆಚ್ಚು ನೊಂದಾಯಿಸಿ ಕ್ರಿಯಾಶೀಲ ಚಟುವಟಿಕೆ ಮಾಡುವಂತೆ ಮಹಾಪೋಷಕ ಕೆ ವಿ ರಾಮಕೃಷ್ಣ ಕರೆ ನೀಡಿದರು.
ತಾಲ್ಲೂಕಿನ ಕಮಂಡಲಗುಂದಿ ಗ್ರಾಮದ ಶ್ರೀ ವಾಸುದೇವರೆಡ್ಡಿ‌ ಕಾಲೇಜಿನಲ್ಲಿ ನಡೆದ ಹೊಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯಭಿರುಚಿ ಬಿತ್ತುವ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ವಿದ್ಯಾರ್ಥಿಗಳನ್ನ ಕುರಿತು ಮಾತನಾಡಿದರು

ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೆಯಾದ ಇತಿಹಾಸ ಪರಂಪರೆ ಗಾಂಭಿರ್ಯತೆಯಿದೆ.ಸಾಹಿತ್ಯಿಕವಾಗಿ ಮೌಲ್ಯಯುತವಾದ ಸಂಘಟನೆಯಾಗಿದ್ದು ಅನ್ಯ ಸಂಘ ಸಂಸ್ಥೆಗಳಿಗಿಂತ ವಿಭಿನ್ನವಾಗಿದೆ .ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ ಮತ್ತು ಅದರ ಸಾಹಿತ್ಯವನ್ನು  ಉತ್ತೇಜಿಸುವ ಸಂಸ್ಥೆಯಾಗಿದ್ದು ಭಾರತದಲ್ಲಿಯೆ ಕನ್ನಡ ಸಾಹಿತ್ಯಕ್ಕೆ ಅದಮ್ಯ ಚೈತನ್ಯವಿದೆ. ಕನ್ನಡ ಪುಸ್ತಕಗಳನ್ನು ಪ್ರಕಟಿಸುವುದು, ಸಾಹಿತ್ಯ ವಿಚಾರ ಸಂಕಿರಣಗಳನ್ನು ಆಯೋಜಿಸುವುದು ಮತ್ತು ಸಂಶೋಧನಾ ಯೋಜನೆಗಳನ್ನು ಉತ್ತೇಜಿಸುವ ಮೂಲಕ ಕನ್ನಡ ಭಾಷೆಯನ್ನು ಉತ್ತೇಜಿಸಲು ಶ್ರಮಿಸುತ್ತದೆ. ಪ್ರತಿ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಮ್ಮೇಳನವನ್ನು ಸಹ ಆಯೋಜಿಸುತ್ತದೆ. ಪರಿಷತ್ತಿನ ಹಾಲಿ ಅಧ್ಯಕ್ಷ ಡಾ.ಮಹೇಶ್ ಜೋಶಿಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಉತ್ತಮ ಸಂಘಟಕರಾಗಿ ರಾಜ್ಯದಲ್ಲಿ ಸಂಚಲನ‌ ಮೂಡಿಸುವಂತೆ ತಾವುಗಳು ಕೂಡ ತಾಲ್ಲೂಕು ಅದ್ಯಕ್ಷರು ಚುರುಕುಗೊಳ್ಳುವಂತೆ ಕಿವಿ ಮಾತು ಹೇಳಿದರು .

ಪರ ಭಾಷೆಗಳ ವ್ಯಾಮೋಹದ ಮದ್ಯೆ ಕನ್ನಡ ಭಾಷೆ ಪ್ರಸ್ತುತ ದಿನಮಾನಗಳಲ್ಲಿ ಮರೀಚಿಕೆಯಾಗುತ್ತಿದೆ ಎಂದು ಕಸಾಪ ಬಳಗದ ಮತ್ತು ಪ್ರಾಂಶುಪಾಲರಾದ ನಾಗಲಿಂಗಪ್ಪ ಕಳವಳ ವ್ಯಕ್ತಪಡಿಸಿದರು.ಕರ್ನಾಟಕದವರಾದ ನಾವು ವಿಶಾಲ ಹೃದಯವರು ಅನ್ಯಭಾಷೆಗರಿಗೆ ಸ್ಥಳಾವಕಾಶ ನೀಡಿ ಅನ್ಯಭಾಷೆಗೂ ನಾವು ಕೂಡ ಮಾರುಹೋಗುವ ಸಂಸ್ಕೃತಿ ಕೈಬಿಡಬೇಕು .ಇಲ್ಲಿ ವಾಸಿಸುವ ಪ್ರತಿಯೊಬ್ಬರು ಈ ನೆಲದ ಭಾಷೆಯನ್ನು ಗೌರವಿಸುವಂತಾಗಬೇಕು .ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡದಲ್ಲಿಯೆ ಐ ಎ ಎಸ್ ನಂತ ಉನ್ನತ ಪದವಿ ಗಳಿಸಲು ಉತ್ತಮ ವಿದ್ಯಾಬ್ಯಾಸ ಮಾಡುವ ಮೂಲಕ ಹೆತ್ತ ತಂದೆ ತಾಯಿಗಳಿಗೂ ಕಾಲೇಜಿಗೂ ಸಹ ಕೀರ್ತಿ ತರುವಂತೆ ತಿಳಿಸಿದರು.

ಕನ್ನಡ ಅಧ್ಯಾಪಕರಾದ ಲಂಕೇಶ್ . ಮಾತನಾಡಿದರು . ಕನಕದಾಸರ ಸಾಹಿತ್ಯ ‌ ದಾಸ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದೆ.ಈ ಆಧುನಿಕ ಅಧ್ಯಯನ ಪದ್ದತಿಯಲ್ಲಿಯು ಕೂಡ ಕನಕದಾಸರ ಸಾಹಿತ್ಯ ವಿಶಿಷ್ಟಾತ್ಮಕವಾಗಿದೆ .ಆದರೆ ಅವರ ವಿಚಾರ ಧಾರೆಗಳುನ್ನು ಕೇವಲ ಒಂದು ತಾಸಿನಲ್ಲಿ ಹೇಳಲು ಕಷ್ಟ ಸಾದ್ಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹೊಬಳಿ ಘಟಕದ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಅದ್ಯಕ್ಷರಾಗಿ ಕನ್ನಡ ಶಾಲು ಹಾಕಿಕೊಂಡು ಅಧಿಕಾರ ಸ್ವಿಕಾರ .ಕಾರ್ಯಧರ್ಶಿಯಾಗಿ ಬಡಪ್ಪ ತೋರಣಗಟ್ಟೆ ವಹಿಸಿಕೊಂಡರು .ರೇವಣ್ಣ ಸದಸ್ಯರಾಗಿ ಸ್ವಿಕರಿಸಿದರು ಈ ಸಂದರ್ಭದಲ್ಲಿ ತಾ.ಕ.ಸಾ.ಪ ಅದ್ಯಕ್ಷೆ ಸುಜಾತಮ್ಮ. ಪ್ರಾಂಶುಪಾಲರಾದ. ಮದ್ದಪ್ಪ. ಕಸಾಪ ಬಳಗದ ಪದಾಧಿಕಾರಿಗಳಾದ ಗೀತಾಮ್ಮ .ಕಾರ್ಯಧರ್ಶಿ ಮಾರಪ್ಪ. ನಿವೃತ್ತ ಉಪನ್ಯಾಸಕ ವಸಂತರಾಜ್.ನಿವೃತ್ತ ಶಿಕ್ಷಕರಾದ ರಂಗಣ್ಣ .ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.

ವಿದ್ಯಾರ್ಥಿಗಳಿಗೆ ಕೊಠಡಿಯಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿಲ್ಲದೆ ಹೊರಗಡೆ ಕುಳಿತುಕೊಂಡ ಪರಿಸ್ಥಿತಿ ಎದುರಾಯಿತು . ವಿದ್ಯಾರ್ಥಿಗಳುನ್ನು ಹೊರಗಿಟ್ಟ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು ಮತ್ತು ಕಾಲೇಜು ಸಿಬ್ಬಂದಿಗಳು ಒಟ್ಟಾರೆ ಕಾಟಚಾರಕ್ಕೆ ಸಭೆ ಎನ್ನುವಂತೆ ಕಂಡು ಬಂದಿತು.

ಮಕ್ಕಳಲ್ಲಿ ಸಾಹಿತ್ಯ ಚಟುವಟಿಕೆ ಅಭಿರುಚಿ ಬೆಳೆಸಲು ಕಾಲೇಜು ಆವರಣದಲ್ಲಿ ವ್ಯವಸ್ಥೆತವಾಗಿ ಸಾಹಿತ್ಯ ಪರಿಷತ್ ಬಳಗ ಕಾರ್ಯಕ್ರಮ ಆಯೋಜಿಸಬೇಕಿತ್ತು ಆದರೆ ಮೇಲ್ನೋಟಕ್ಕೆ ತರತುರಿಯಲ್ಲಿ ದತ್ತಿ ಉಪನ್ಯಾಸ ಹಾಗೂ ಪದಾಧಿಕಾರಿಗಳು ಪದಗ್ರಹಣ ವಿವಿಧ ಕಾರ್ಯಕ್ರಮಗಳ ಪಟ್ಟಿ ಹೆಚ್ಚಿತ್ತು ಆದರೆ ಕಾರ್ಯಕ್ರಮ ನಿರಸ ಪ್ರತಿಕ್ರಿಯೆ ಮೂಡುವಂತಿತ್ತು .

Leave a Reply

Your email address will not be published. Required fields are marked *

You missed

error: Content is protected !!