By shukradeshe news Kannada July 16 Editor m rajappa m Vyasagondanahalli

ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಕಳೆದ ತಿಂಗಳುಗಳ ಹಿಂದೆ ಚರಂಡಿ ಸ್ವಚತೆ ಮಾಡುವ ವೇಳೆ ದಲಿತ ಕುಟುಂಬದ ಮೈಲಪ್ಪ ಸತ್ಯಪ್ಪ ಎಂಬುವರು ಕಲುಷಿತ ವಿಷಗಾಳಿ ಸೇವನೆಯಿಂದ ಮೃತಪಟ್ಟಿದ್ದರು.
ಮೃತರ ಕುಟುಂಬದ ಮಕ್ಕಳಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದರು


ನಂತರ ಸಪಾಯಿ ಕರ್ಮಚಾರಿ ನಿಗಮದಿಂದ ಮಂಜೂರಾದ ತಲಾ ಒಂದು ಲಕ್ಷ ಪರಿಹಾರದ ಚೆಕ್ ನ್ನು ತಾಲ್ಲೂಕು ಆಡಳಿತದ ಮೂಲಕ ಕ್ಷೇತ್ರದ ಶಾಸಕರಾದ ಚಿಕ್ಕಮ್ಮನಹಟ್ಟಿ ‌ಬಿ ದೇವೆಂದ್ರಪ್ಪ ಸಂತ್ರಸ್ತರ ಕುಟುಂಬದ‌ ಮನೆಗೆ ಭೇಟಿ ನೀಡಿ ಚೆಕ್ ವಿತರಣೆ ಮಾಡಿದರು .
ಮನೆಯ ಜವಾಬ್ದಾರಿ ಹೊತ್ತ ಕುಟುಂಬದ ಯಜಮಾನ ಕಳೆದುಕೊಂಡಿರುವ ಎರಡು ಕುಟುಂಬಗಳಿಗೂ ಅಧಿಕಾರಿಗಳ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಒದಗಿಸಿಕೊಡುವೆ ಎಂದು ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು .

ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಮೇಶ್.ತಹಶೀಲ್ದಾರ್ ಜಿ ಸಂತೋಷಕುಮಾರ್. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ .ತಾಪಂ ಇಓ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜೋತಿಲಿಂಗಪ್ಪ, ಪಿಡಿಓ ಬಸವರಾಜಪ್ಪ, ಸಿಪಿಐ ಸೋಮಶೇಖರ್‌ ಕೆಂಚರೆಡ್ಡಿ, ಗ್ರಾಪಂ ಸದಸ್ಯರು ಬೀಮಪ್ಪ, ಪ್ರಕಾಶ್. ಮುಖಂಡರಾದ.ಮಹಮ್ಮದ್ ಗೌಸ್. ಪಲ್ಲಾಗಟ್ಟೆ ಶೇಖರಪ್ಪ. ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!