By shukradeshe news Kannada July 19 Editor m rajappa m Vyasagondanahalli
ಇಂದು ಜಗಳೂರು ತಾಲೂಕು ಹಿರೆಮಲ್ಲನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಅಕ್ಷರ ದಾಸೋಹ ಇಲಾಖೆಯ ಅಧಿಕಾರಿ ದುರಗಪ್ಪ ಕೇತ್ರ ಶೀಕ್ಷಣಾಧಿಕಾರಿ ಸುರೇಶ್ ರೆಡ್ಡಿ ಬೇಟಿ ಪರಿಶೀಲನೆ ನಡೆಸಿದರು.
ಬಹುದಿನಗಳಿಂದ ಹಿರೆಮಲ್ಲನಹೊಳೆ ಶಾಲೆಯಲ್ಲಿ ಅಡುಗೆ ತಾಯಾರಕರು ಅಡುಗೆ ಸರಿಯಾಗಿ ಮಾಡದೆ ನಿರ್ಲಕ್ಷ್ಯ ಮಾಡಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ನೀಡುತ್ತಿರುವ ಬಿಸಿಯೋಟದಲ್ಲಿ ಕೂದಲು ಸೇರಿದಂತೆ ಸರಿಯಾದ ರೀರಿ ಬಿಸಿಯೋಟದ ಅಡುಗೆ ಕೆಲಸಗಾರರು ತಯಾರಿಸುತ್ತಿಲ್ಲ ಎಂದು ಗ್ರಾಮದ ಮುಖಂಡ ಮಹಾಲಿಂಗಪ್ಪ ಆರೋಪಿಸಿದ್ದರು ಈ ಹಿನ್ನಲೆಯಲ್ಲಿ ಗ್ರಾಮದ ಶಾಲೆಗೆ ಜಿಲ್ಲಾ ಮಟ್ಟದ ಅಕ್ಷರ ದಾಸೋಹ ಅಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಣ ಅಧಿಕಾರಿ ಅಕ್ಷರದಾಸೋಹ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿ ಗಳು ಶಾಲೆಯಲ್ಲಿ ತಾಯಾರಿಸಿದ ಮದ್ಯಾಹ್ನದ ಬಿಸಿಯೂಟ ಊಟ ಮಾಡದೆ ಮನೆಯಿಂದ ಬುತ್ತಿಯನ್ನು ಕಟ್ಟಿಕೊಂಡು ಬಂದು ಶಾಲೆಯಲ್ಲಿ ಊಟ ಮಾಡುವುದನ್ನ ಗಮನಿಸಿದ ಅಧಿಕಾರಿಗಳು ಇಂದು ಶಾಲೆಗೆ ಆಗಮಿಸಿ ಈ ಕೂಡಲೆ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ತಿಳಿಸಿದರು
ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗೆ ಬೇಟಿಕೊಟ್ಟರು ಸಹ ಶಾಲೆಗೆ ಬರಲಿಲ್ಲ ಅಡುಗೆ ತಯಾರಾಕರು
ಬಿಸಿಯೋಟದ ಅಡುಗೆವರಿಂದ ತಯಾರಕರ ಎಡವಟ್ಟಿನಿಂದ ಈ ರೀತಿಯಾಗಿದೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಖುದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಲೆಗೆ ಬಂದು ಸಮಸ್ಯೆಗಳನ್ನು ಆಲಿಸಿ ಶಾಲೆಯಲ್ಲಿ ಅಡುಗೆ ಮಾಡುವ ತಯಾರಕರು ಶಾಲೆಗೆ ಬಂದಿಲ್ಲ ಇದನ್ನ ಮನಗಂಡ ತಾಲೂಕು ಕ್ಷೇತ್ರಶೀಕ್ಷಣಾಧಿಕಾರಿಗಳು ಈ ಹಿಂದೆ ಅಡುಗೆ ಮಾಡುತ್ತಿದ್ದ ಅಡುಗೆ ಸಹಾಯಕರನ್ನು ತೆಗೆದು ಹಾಕಿ ಹೋಸದಾಗಿ ನೇಮಕ ಮಾಡಿಕೊಳ್ಳಿ ಈ ಹಿಂದೆ ಯಾವ ಮಾನದಂಡಗಳ ಮೇಲೆ ಆಯ್ಕೆ ಮಾಡಿಕೊಂಡಿದ್ದಿರಿ ಯಾವ ಸಮುದಾಯದ ಅಡುಗೆಯವರು ಕೇಲಸ ಮಾಡುತ್ತಿದ್ದರೊ ಅದೆ ಸುಮುದಾಯದವರಿಗೆ ಅವಕಾಶ ಮಾಡಿಕೊಡಿ ಎಂದು ಮುಖ್ಯ ಶಿಕ್ಷಕರಿಗೆ ಹಾಗೂ ಎಸ್ ಡಿ ಎಮ್ ಸಿ ಅದ್ಯಕ್ಷರಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು ಇದಕ್ಕೆ ಒಪ್ಪಿದ ಗ್ರಾಮದ ಮುಖಂಡರು ಹಾಗೂ ಎಸ್ ಡಿ ಎಮ್ ಸಿ ಯವರು ಸರ್ವರು ಒಪ್ಪಿಗೆ ನಿಡಿದರು
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರವಿಂದ್ ಸಿ ಆರ್ ಪಿ ರವಿಪ್ರಕಾಶ್ ಇ ಸಿ ಒ ಹನುಮಂತಪ್ಪ ತಾಲೂಕು ಅಕ್ಷರದಾಸೋಹ ಅಧಿಕಾರಿ ಶ್ರೀನಿವಾಸ ಗೌಡ ಕರುನಾಡ ನವ ನಿರ್ಮಾಣ ವೇಧಿಕೆ ರಾಜ್ಯ ಅದ್ಯಕ್ಷ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ಮುಖಂಡರಾದ ಚೆನ್ನಬಸಣ್ಣ ಗೌಡ ಬಾಣೇಶ್ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಸುರೇಶ್ ಬಾಬು ತಳವಾರ್ ರಾಜು ಆರ್ ವಿ ಹೇಮಾರೆಡ್ಡಿ ಪ್ರಭು ತಾಳಿಕೇರಪ್ಪರ ಮಂಜಣ್ಣ ಸರ್ಕಾರಿ ಪ್ರೌಡಶಾಲಾ ಮುಖ್ಯಶಿಕ್ಷಕರಾದ ಪ್ರಕಾಶ್ ತಿರುಮಲ್ಲೇಶ್ವರ ಪ್ರೌಡಶಾಲೆ ಮುಖ್ಯಶಿಕ್ಷಕರಾದ ಪಾಲಯ್ಯ ಬಸವರಾಜ್ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತಿಯಿದ್ದರು