By shukradeshenews | online news portal | Kannada news online July 22
ಸಮಾಜ ಕಲ್ಯಾಣ ಇಲಾಖೆ ಬಿ ಮಹೇಶ್ ಹುಟ್ಟು ಹಬ್ಬದ ಅಂಗವಾಗಿ ಕಲ್ಲೇದೆವರಪುರ ಗ್ರಾಮದ ಪ್ರೌಢಶಾಲಾ ಮಕ್ಕಳಿಗೆ ಬಿಸಿಯೋಟದ ತಟ್ಟೆ ಲೋಟ ವಿತರಣೆ ಶ್ಲಾಘನೀಯ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ . ಕೆ ಪಿ ಪಾಲಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಶ್ರೀ ಕಲ್ಲೇದೆವರಪುರ ಗ್ರಾಮದಲ್ಲಿ ಶನಿವಾರ ಕಲ್ಲೇಶ್ವರ ಗ್ರಾಮಂತರ ಪ್ರೌಡಶಾಲಾ ವಿದ್ಯಾರ್ಥಿಗಳೊಂದಿಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ರವರು ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡು ಮಕ್ಕಳಿಗೆ ತಟೆ ಲೋಟ ಹಾಗೂ ಶಾಲೆಗೆ ಕಂಪೂಟರ್ ನ್ನು ಕೊಡುಗೆಯಾಗಿ ನೀಡಿದರು
ಈ ವೇಳೆ ಸರಳ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ವಿದ್ಯಾರ್ಥಿಗಳಿಗೆ ಕಂಪೂಟರ್ ಮತ್ತು ಬಿಸಿಯೋಟದ ತಟೆ ಲೋಟ ವಿತರಣೆ ಕಾರ್ಯಕ್ರಮದ ಉದ್ಗಾಟನೆ ಮಾಡಿ ನಂತರ ವಿದ್ಯಾರ್ಥಿಗಳುನ್ನ ಕುರಿತು ಮಾತನಾಡಿದರು ಗ್ರಾಮೀಣ ಬಾಗದ ವಿದ್ಯಾರ್ಥಿಗಳೆ ದೇಶಕ್ಕೆ ತನ್ನದೆಯಾದ ಕೊಡುಗೆ ನೀಡುವಲ್ಲಿ ಮುಖ್ಯಪಾತ್ರವಿದೆ. ಗ್ರಾಮೀಣ ಬಾಗದಲ್ಲಿ ಹೆಚ್ಚು ಪ್ರತಿಭೆಗಳಿವೆ ಅವರುನ್ನು ಗುರುತಿಸಿ ಆವಕಾಶ ಕಲ್ಪಿಸಿದರೆ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುವುದು. ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸಾಧನೆ ಮಾಡುವಂತ ಮಾರ್ಗದರ್ಶನ ಬಹುಮುಖ್ಯ ಎಂದರು .ಸಮಾಜ ಕಲ್ಯಾಣ ಇಲಾಖೆ ಬಿ ಮಹೇಶಣ್ಣ ಉದಾರ ಮನಸ್ಸಿನ ವ್ಯಕ್ತಿತ್ವದವರು ಅವರಂತ ಸಂಸ್ಕಾರ ಉತ್ತಮ ಅಧಿಕಾರಿ ಸಾರ್ಥಕ ಸೇವೆಗೆ ಮತ್ತೊಂದು ಹೆಸರೆ ಮಹೇಶಣ್ಣ ಎಂದು ಪ್ರಶಂಸೆಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ರವರು ವಿದ್ಯಾರ್ಥಿಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು ನಾನು ನಿಮ್ಮ ಹಾಗೆ ನೆಲದಲ್ಲಿ ಕುಳಿತು ಪಾಠ ಪ್ರವಚನ ಕೇಳಿ ಶಿಕ್ಷಣ ಕಲಿತು ಉನ್ನತ ಅಧಿಕಾರಿಯಾಗಿದ್ದೆನೆ .ನಾವು ಕಲಿಯುವ ಅವಧಿಯಲ್ಲಿ ಸರ್ಕಾರಿ ಸೌಲಭ್ಯಗಳು ಬಹಳ ವಿರಳ ನಮಗೆ ಸರಿಯಾದ ರೀತಿ ಊಟ ಸಿಗುತ್ತಿರಲಿಲ್ಲ ಇದೀಗ ಬಿಸಿಯೋಟದಂತ ಸಾಕಷ್ಟು ಸರ್ಕಾರಿ ಸೌಲಭ್ಯಗಳಿವೆ ಉತ್ತಮ ಅದ್ಯಾಪಕ ವರ್ಗವಿದೆ ಗುರುಗಳು ಹೇಳಿಕೊಟ್ಟ ಪಾಠವನ್ನು ಗಮನವಿಟ್ಟು ಕೇಳಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಿ ಮಹೇಶ್ ಣ್ಣರವರು ತಾವೇ ಚೌಟು ಹಿಡಿದು ಮಧ್ಯಾಹ್ನದ ಬಿಸಿಯೋಟ ಬಡಿಸಿದರು .ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷರ ಪತಿ ತಿಪ್ಪೇಸ್ವಾಮಿ ಮಾಜಿ ತಾಪಂ ಅದ್ಯಕ್ಷ ಸಣ್ಣಸೂರಜ್ಜ.ಮುಖಂಡ ಕೊಟ್ಟಿಗೆ ತಿಪ್ಪೇಸ್ವಾಮಿ. ನಿವೃತ್ತ ಶಿಕ್ಷಕರಾದ ಕೃಷ್ಣ ಮೂರ್ತಿ. ಶಾಲಾ ಮುಖ್ಯ ಶಿಕ್ಷಕರಾದ ರಮೇಶ ಸಿಬ್ಬಂದಿಗಳು .ಕಛೇರಿ ಸಿಬ್ಬಂದಿ ಚೈತ್ರ ಸೇರಿದಂತೆ ಹಾಜರಿದ್ದರು.