Latest news today jagalur

ಶುಕ್ರದೆಸೆ ವರದಿ ಇಂಪ್ಯಾಕ್ಟ್

ಶುಕ್ರದೆಸೆ ಫಲ ಶೃತಿ

By shukradeshe news Kannada July 25 Editor m rajappa Vyasagondanahalli


ಶುಕ್ರದೆಸೆ ವರದಿಗೆ ಎಚ್ಚೆತ್ತ ಅಧಿಕಾರಿಗಳು ಸೋರುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಓ ಅಧಿಕಾರಿ ಬೀರೆಂದ್ರಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರ ಸ್ಥಳಾಂತರ ಮಾಡಲು ಸೂಚನೆ ನೀಡಿದ್ದಾರೆ.

ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದ ಬಾಲವಾಡಿ ಮಕ್ಕಳ
ಅಂಗನವಾಡಿ ಕಟ್ಟಡ ಶಿಥಿಲಗೊಂಡು ಸೊರುತ್ತಿದೆ ಸೋರುವ ಕಟ್ಟಡದಲ್ಲಿಯೇ ಬಾಲವಾಡಿ ಮಕ್ಕಳ ಪಾಠ ಪ್ರವಚನ ಸಹಾಯಕರು ಆಹಾರ ತಯಾರಿಸುವುದೆ ಒಂದು ದುಸ್ತರವೆಂದು ಶುಕ್ರದೆಸೆ ವೆಬ್ ನ್ಯೂಸ್ ವರದಿ ಮಾಡಿ ಅಧಿಕಾರಿಗಳು ಸೇರಿದಂತೆ ಕ್ಷೇತ್ರದ ಶಾಸಕರ ಗಮನ ಸೆಳೆಯಲಾಗಿತ್ತು ವರದಿ ಪ್ರಸಾರವಾಗಿದೆ ತಡ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಡಿಪಿಓ ಅಧಿಕಾರಿ ಬೀರೆಂದ್ರಕುಮಾರ್ ಹಾಗೂ ವ್ಯಾಪ್ತಿಯ ಸೂಪರ್ ವೈಜರ್ ವ್ಯಾಸಗೊಂಡನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೋರುತ್ತಿರುವ ಅಂಗನವಾಡಿ ಕಟ್ಟಡವನ್ನ ಸ್ಥಳಾಂತರಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

.ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿದ ಸಿಡಿಪಿಓ ಅಧಿಕಾರಿ
ಗ್ರಾಮದಲ್ಲಿ ಯಾವುದಾದರು ಬಾಡಿಗೆ ಕಟ್ಟಡ ಸಿಗುವುದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ನಮ್ಮ ಇಲಾಖೆಯಿಂದ ಪ್ರತಿ ತಿಂಗಳು ಬಾಡಿಗೆ ನೀಡಲಾಗುವುದು ಎಂದು ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕ ಸಿಬ್ಬಂದಿಗಳೊಂದಿಗೆ ಸೇರಿದಂತೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಸೋರುತ್ತಿರುವ ಕೇಂದ್ರದಿಂದ ತಾತ್ಕಾಲಿಕವಾಗಿ ಗ್ರಾಮದಲ್ಲಿರುವ ಸಮುದಾಯ ಭವನ ಖಾಲಿಯಿದ್ದರೆ ಅಲ್ಲಿಗೆ ಸ್ಥಳಾಂತರಿಸಲಾಗುವುದು ನಂತರ ಅಂಗನವಾಡಿ ಕೇಂದ್ರ ದುರುಸ್ತೆ ಮಾಡಲು ನಮ್ಮ ಜಿಪಂ ತಾಪಂ .ಸಿಡಿಪಿಓ ಜಂಟಿ ಇಲಾಖೆ‌ಯೊಂದಿಗೆ ದುರಸ್ತೆ ರಿಪೇರಿಗೆ ಆವಕಾಶ ಕಲ್ಪಿಸಲಾಗುವುದು

ಸಿಡಿಪಿಓ ಬೀರೆಂದ್ರಕುಮಾರ್..

Leave a Reply

Your email address will not be published. Required fields are marked *

You missed

error: Content is protected !!