By shukradeshenews | online news portal | Kannada news online

ಯುವ ಸಮೂಹ ದುಶ್ಚಟಗಳಿಂದ ಮುಕ್ತರಾಗಿ ಸುಂದರ ಬದುಕು ಕಟ್ಟಿಕೊಳ್ಳಿ:ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ.

ಜಗಳೂರು ಸುದ್ದಿ:ಯುವ ಸಮೂಹ ಆಮಿಷೆಗೊಳಗಾಗಿ ದುಶ್ಚಟಕ್ಕೆ ಬಲಿಯಾಗದೆ ನಿತ್ಯ ಕಾಯಕದಲ್ಲಿ ತೊಡಗಿಕೊಂಡು ದುಡಿಮೆ ಹಣದಿಂದ ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಹೆಬ್ಬಾಳ್ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಜಿ ಆಶೀರ್ವಾಚನ‌ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಧರ್ಮಾಸ್ಥಳ‌ ಗ್ರಾಮಾಭಿವೃದ್ದಿ ಬಿ.ಸಿ.ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಹಣ ಹೆಂಡ ಆಮಿಷೆಯೊಡ್ಡಿ ಚುನಾವಣೆ ನಡೆಸುತ್ತಾರೆ.ಇದರಿಂದ ಯುವಸಮೂಹ ದುಡಿಮೆಯಿಂದ ವಿಮುಖಗೊಂಡು.ನಿರುದ್ಯೋಗಿ ಸೋಮಾರಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಧರ್ಮಸ್ಥಳ ಸಂಘ ಆರ್ಥಿಕ‌ಸಾಲಸೌಲಭ್ಯದ ಜೊತೆಗೆ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ.ಧರ್ಮಸ್ಥಳ ಸಂಘ ಋಷಿ ಆಶ್ರಮವಿದ್ದಂತೆ ಸುಜ್ಞಾನಿಗಳ ಸಂಘಮಾಡಿ ಮದ್ಯವ್ಯಸನಿಗಳು ಅಂಧಕಾರದ ಬದುಕಿನಿಂದ ಬೆಳಕಿನೆಡೆಗೆ ಸಾಗಬೇಕು.12 ನೇ ಶತಮಾನದ ಬಸವಣ್ಣನವರ ಅನುಭವಮಂಟಪ ಆಧುನಿಕಸಮಾಜಕ್ಕೆಮಾದರಿಯಾಗಬೇಕು.ಸಂಘಸಂಸ್ಥೆಗಳು ಲಾಭಾಂಶದಲ್ಲಿ ದೀನ ದುರ್ಬಲರಿಗೆ ನೆರವಾಗಬೇಕು ಎಂದು ಹೇಳಿದರು.

ಪ್ರತಿಯೊಬ್ಬ ಮನುಷ್ಯ ಪ್ರಕೃತಿಯಲ್ಲಿನ ಗಿಡಮರಗಳನ್ನು,ಕುಟುಂಬದವರನ್ನು ಪ್ರೀತಿಸಿ ಸನ್ನಡತೆಗೆ ದಾಸರಾಗಿ ಉತ್ತಮ ಬದುಕು ಕಟ್ಟಿಕೊಂಡಾಗ ಕಲ್ಯಾಣ ರಾಜ್ಯ ವಾಗುತ್ತದೆ.ಸನ್ಯಾಸಿಗಳಿಗಿಂತ ಸಾಂಸಾರಿಕ ಜೀವನದಲ್ಲಿ ಸ್ವರ್ಗವಿದೆ ಅನುಭವಿಸಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ,ದೇಶದಲ್ಲಿ ಯುವ ಸಮೂಹ ಹೆಚ್ಚಾಗಿದ್ದು.ಸದೃಢ ದೇಶ ನಿರ್ಮಾಣಮಾಡುವ ಯುವ ಶಕ್ತಿ ಸಬಲರಾಗಬೇಕು.ಮನುಷ್ಯ ಚಿಕ್ಕ ವಯಸ್ಸಿನಲ್ಲಿ ಮುಗ್ಧತೆಯಿಂದ ಕೂಡಿರುತ್ತಾನೆ.ಉದ್ದೇಶಪೂರ್ವಕವಾಗಿ ಯಾರೊಬ್ಬರೂ ಮದ್ಯವ್ಯಸನಿಯಾಗುವುದಿಲ್ಲ.ಕೆಲ ಪರಿಸ್ಥಿತಿಗಳ ಕೈಗೊಂಬೆಯಾಗಿ.ಸಮಾಜದಲ್ಲಿ ಸಹವಾಸ,ಸಮಸ್ಯೆಗಳಿಂದ ದುಶ್ಚಟಗಳಿಗೆ ಬಲಿಯಾಗುತ್ತಾನೆ.ಸ್ವಯಂ ಪ್ರೇರಿತರಾಗಿ ನಿಮ್ಮ‌ಜೀವನ ರೂಪಿಸಿಕೊಳ್ಳುವ ಹಾದಿಯಲ್ಲಿ ಸಾಗಬೇಕು.ಪರಮಾತ್ಮನ ಹೆಸರಿನಲ್ಲಿ ಶಿಬಿರಾರ್ಥಿಗಳಿಗೆ ಪ್ರತಿಜ್ಞೆಗೈದರು.

ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಷಡಕ್ಷರಪ್ಪ ಮಾತನಾಡಿ,ಮದ್ಯವ್ಯಸನಗಳಿಂದ ಆರ್ಥಿಕ ಸಮಸ್ಯೆಗಳು ಉದ್ಭವವಾಗಿ ಬೇರೋಬ್ಬರನ್ನು ಹಣ ಬೇಡುವ ಪರಿಸ್ಥಿತಿ ಎದುರಾಗುತ್ತವೆ.ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡರೆ ಕುಟುಂಬದಲ್ಲಿ ನೆಮ್ಮದಿ ಸಾಧ್ಯ.ಈ ಶಿಬಿರದ ಸಮಿತಿಯ ಸದಸ್ಯರ ಪರಿಶ್ರಮಕ್ಕೆ ತಾವುಗಳು ಚಿರ ಋಣಿಯಾಗಿರಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಮಾತನಾಡಿ,ಮದ್ಯವರ್ಜನ ಶಿಬಿರದಿಂದ 72 ಜನ ಶಿಬಿರಾರ್ಥಿಗಳು ನವಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆಯವರ ಆಶಯದಂತೆ ಶಿಬಿರದಿಂದ ಹೊರಬಂದಮೇಲೆ ಮತ್ತೊಬ್ಬರ ಪ್ರಚೋದನೆಗೆ ಬಲಿಯಾಗಿ ಪುನಃ ಕುಡಿತದ ಪ್ರಪಂಚದ ಕೂಪಕ್ಕೆ ಬೀಳಬೇಡಿ ಎಂದು ಶುಭಕೋರಿದರು.

ಮಾತೃದೇವೋಭವ ಎಂಬುದು ಭಾರತದ ಸಂಸ್ಕತಿ ಯಾಗಿದೆ.ಆದರೆ ಆಧುನಿಕ ಬದುಕಿನ ಭರಾಟೆಯಲ್ಲಿ ಶೋಕಿಗಾಗಿ ಹೆಣ್ಣುಮಕ್ಕಳು ಮದ್ಯಸೇವನೆಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ.ಜಾಗೃತರಾಗಬೇಕು ಎಂದು ಕರೆ ನೀಡಿದರು.

ಮದ್ಯವರ್ಜನ ಶಿಬಿರದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ,ಹವ್ಯಾಸಿ ಕುಡಿತದಿಂದ ನಾನು ಸ್ವಯಂಪ್ರೇರಿತವಾಗಿ ವರ್ಜಿಸಿರುವೆ.ಯಾರೊಬ್ಬರ ಒತ್ತಡದಿಂದ ಅಲ್ಲ ಕುಟುಂಬದಲ್ಲಿ ಪತ್ನಿ ಮಕ್ಕಳ ಸುಖಿ ಸಂಸಾರಕ್ಕಾಗಿ ಮಾತ್ರ.ಶಿಬಿರದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಬಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ನವಜೀವನಕ್ಕೆ ಕಾಲಿಟ್ಟ ದಂಪತಿಗಳಲ್ಲಿ ಮರುವಿವಾಹದ ಸಂಭ್ರಮ ಮನೆಮಾಡಿತ್ತು.

ಸಂದರ್ಭದಲ್ಲಿ ಫಾದರ್ ವಿಲಿಯಂ ಮಿರಾಂದ,ಮದ್ಯವರ್ಜನ ಶಿಬಿರದ ಗೌರವ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿರ್ದೇಶಕ ಜನಾರ್ಧನ್,ಬಿಇಓ ಸುರೇಶ್ ರೆಡ್ಡಿ,ಟಿ.ಎಚ್.ಓ ಡಾ.ನಾಗರಾಜ್,ಪ.ಪಂ‌.ಮುಖ್ಯಾಧಿಕಾರಿ,ತಾಲೂಕು ಯೋಜನಾಧಿಕಾರಿ ಗಣೇಶ್,ಶಿಬಿರಾಧಿಕಾರಿ ನಾಗರಾಜ್,
ಮದ್ಯವರ್ಜನ ಸಮಿತಿ ಸದಸ್ಯರಾದ ಬಿ.ಲೊಕೇಶ್, ಓ.ಮಂಜಣ್ಣ,ಹೊನ್ನೂರು ಸ್ವಾಮಿ,ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!