ಸರ್ಪಗಾವಲಿನ ಮದ್ಯೆ ಅಣಬೂರು ಗ್ರಾಮ ಪಂಚಾಯಿತಿ ಚುನಾವಣೆ : ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Kannada | online news portal | Kannada news online august 5
Search
Shukradeshe suddi Kannada | online news portal | Kannada news online
Kannada | online news portal | Kannada news online
ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ನಿವೃತ್ತ ಯೋಧ ಸಿದ್ದಣ ಹಾಗೂ ಉಪಾಕ್ಷರಾಗಿ ದೇವಿರಮ್ಮ ಇಂದು ನಡೆದ ಚುನಾವಣೆಯಲ್ಲಿ ಎರಡು ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ಸಿಡಿಪಿಓ ಇಲಾಖೆ ಬೀರೆಂದ್ರಕುಮಾರ್ ಘೋಷಿಸಿದ್ದಾರೆ.
ಸಾಮಾನ್ಯ ಮೀಸಲು ಕ್ಷೇತ್ರದ ಅದ್ಯಕ್ಷ ಸ್ಥಾನಕ್ಕೆ ಮಾದೆ ಮುತ್ತೆನಹಳ್ಳಿ ನಿವೃತ್ತ ಯೋಧ ಸಿದ್ದಣ್ಣ ಹಾಗು ಎಸ್ಸಿ ಮಹಿಳಾ ಮೀಸಲು ಉಪಾದ್ಯಕ್ಷ ಸ್ಥಾನಕ್ಕೆ ದೇವಿರಮ್ಮರವರು ಇಂದು ನಡೆದ ಗುಪ್ತ ಮತದಾನದ ಚುನಾವಣೆಯಲ್ಲಿ ಶನಿವಾರ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ .
ಇಂದು ಶನಿವಾರ ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳಿಗೆ ಜಿದ್ದ ಜಿದ್ದ ಪೈಪೋಟಿಯ ಏರ್ಪಟು ಕುತೂಹಲಕಾರಿ ಮೂಡಿಸಿತ್ತು . ಅದ್ಯಕ್ಷ ಸ್ಥಾನಕ್ಕೆ ಮಾದೇಮುತ್ತೆನಹಳ್ಳಿ ನಿವೃತ್ತ ಯೋಧ ಸಿದ್ದಣ್ಣ ಸ್ವರ್ಧಿಸಿದ್ದು ಇವರ ವಿರುದ್ದ ನಾಗರಾಜ್ ಉಮೇದಾವಾರಿಕೆ ನಾಮಪತ್ರ ಸಲ್ಲಿಸಿದ್ದರು ಉಪಾದ್ಯಕ್ಷ ಸ್ಥಾನಕ್ಕೆ ದೇವಿರಮ್ಮ ನಾಮಪತ್ರ ಸಲ್ಲಿಸಿದ್ದರು ಇವರ ವಿರುದ್ದ ಮಿನಾಕ್ಷಿಬಾಯಿರವರು ನಾಮ ಪತ್ರ ಸಲ್ಲಿಸಿದ್ದರು .
ಅದ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಯೋಧ ಸಿದ್ದಣ್ಣರವರಿಗೆ 12 ಮತಗಳು ಗಿಟ್ಟಿಸಿಕೊಂಡು ಜಯಗಳಿಸಿದರೆ ಉಪಾದ್ಯಕ್ಷರಾಗಿ ಆಯ್ಕೆಯಾಗಿರುವ ದೇವಿರಮ್ಮರವರಿಗೂ ಸಹ 12 ಬಹುಮತಗಳಿಂದ ಜಯಬೇರಿ ಬಾರಿಸಿದ್ದಾರೆ
ಸೋಲು ಅನುಭವಿಸಿರುವ ಅದ್ಯಕ್ಷ ಸ್ಥಾನಕ್ಕೆ ಪ್ರತಿ ಸ್ವರ್ಧಿಯಾಗಿ ಸ್ವರ್ಧಿಸಿದ್ದ ನಾಗರಾಜ್ ರವರಿಗೆ 10 ಮತಗಳು ಲಭಿಸಿವೆ . ಉಪಾದ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿರುವ ಮಿನಾಕ್ಷಿಬಾಯಿ ರವರಿಗೂ ಸಹ 10 ಮತಗಳು ಗಳಿಕೆಯಾಗಿ ಎರಡು ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಈ ಹಿಂದೆ ಮಾಜಿ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕವಿತಾ ರೇಣುಕೇಶ್ ರವರು ನೂತನ ಆಯ್ಕೆಯಾದ ಅದ್ಯಕ್ಷರಿಗೆ ಅಧಿಕಾರ ಅಸ್ತಂತರಿಸಿದರು.ಒಟ್ಟು
22 ಜನ ಸರ್ವ ಸದಸ್ಯರು ಸಹ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಮ್ಮ ಹಕ್ಕುಗಳುನ್ನು ಚಲಾಯಿಸುವ ಮೂಲಕ
ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾದೆಮುತ್ತೆನಹಳ್ಳಿ ಸಿದ್ದಣ್ಣ ಹಾಗೂ ಉಪಧ್ಯಕ್ಷರಾಗಿ ದೇವಿರಮ್ಮ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ
ಇಂದು ನಡೆದ ಚುನಾವಣೆಯಲ್ಲಿ ನಾಮ ಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಮಾಡಲಾಯಿತು. ಅಣಬೂರು ಗ್ರಾಮ ಪಂಚಾಯಿತಿಯ 22 ಸದಸ್ಯರು ಸಭೆಗೆ ಹಾಜರಿದ್ದರು.
ಅದ್ಯಕ್ಷ ಸ್ಥಾನಕ್ಕೆ ಎರಡು ನಾಮ ಪತ್ರ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ಜರುಗಿತು.ಎರಡು ಎರಡು ಮತಗಳ ಅಂತರದಿಂದ ನೂತನವಾಗಿ ಚುನಾಯಿತರಾದ ಅದ್ಯಕ್ಷ ಉಪಾದ್ಯಕ್ಷರಿಗೆ ಚುನಾವಣೆ ಅಧಿಕಾರಿ ಹಾಗೂ ಪಂಚಾಯತಿ ಪಿಡಿಓ ಅಭಿವೃದ್ಧಿ ಅಧಿಕಾರಿ ಒಬಣ್ಣ. ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರು. ಸೇರಿದಂತೆ ಶುಭಾ ಕೋರಿದರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಸರ್ಪಗಾವಲಿನ ಮದ್ಯೆ ಅಣಬೂರು ಗ್ರಾಪಂ ಚುನಾವಣೆ ಜರುಗಿತು.ಈ ಸಂದರ್ಭದಲ್ಲಿ ಪಿ ಎಸ್ ಐ ಸಾಗರ್ .ಬಿಳಿಚೋಡು ಪೊಲೀಸ್ ಠಾಣೆ ಪಿ ಎಸ್ ಐ ಸೋಮಶೇಖರ್ ಕೆಂಚರೆಡ್ಡಿ.. ಮಾಜಿ ಗ್ರಾಪಂ ಅದ್ಯಕ್ಷರು ಹಾಲಿ ಸದಸ್ಯರಾದ ಕವಿತಾ ರೇಣುಕೇಶ್.ಮಾಜಿ ಉಪಾದ್ಯಕ್ಷರು ಹಾಲಿ ಸದಸ್ಯರಾದ ಸಣ್ಣ ನಾಗಮ್ಮ.ಸದಸ್ಯರಾದ ಬಿ .ಶಿವಣ್ಣ.ಬಿ ಮಲ್ಲಿಕಾರ್ಜುನ. ಇಂದ್ರಮ್ಮ..ಎಂ ವಿರೇಶ್.ಸುನಿತಾ.ಸೋಮಶೇಖರ್.ಶಿವಮ್ಮ.ಶಿವಲಿಂಗಮ್ಮ.ಮಿನಾಕ್ಷಿಬಾಯಿ.ಸಿದ್ದಪ್ಪ.ಜ್ಯೋತಿ.ಎಂ ಎಂ ನಾಗರಾಹ್.ಕೃಷ್ಣ ನಾಯ್ಕ್.ವನಜಾಕ್ಷಮ್ಮ.ಅಕ್ಕಮ್ಮ.ಸೋಪಿಯಕೌಸರ್.ಭೋರಪ್ಪ. ಮುಖಂಡರಾದ ಸೂರಲಿಂಗಪ್ಪ.ಮಾಜಿ ತಾಪಂ ಸದಸ್ಯ ಕುಬೇಂದ್ರಪ್ಪ. ಸೇರಿದಂತೆ ಹಾಜರಿದ್ದರು