ಕಲ್ಲೇದೆವರಪುರ ಗ್ರಾಮ ಪಂಚಾಯತಿ ಅಧ್ಯಕ್ಷೆರಾಗಿ ವಸಂತಕುಮಾರಿ ಡಿ ತಿಪ್ಪೇಸ್ವಾಮಿ (ಕೊಟ್ಟಿಗೆ) ಉಪಾಧ್ಯಕ್ಷರಾಗಿ ಅನುಸುಯಮ್ಮ. ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಾಪಂ ಇಓ ಚಂದ್ರಶೇಖರ್ ಘೋಷಿಸಿದ್ದಾರೆ.
Kannada | online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online August 5
ಜಗಳೂರು ಸುದ್ದಿ
ತಾಲ್ಲೂಕಿನ ಕಲ್ಲೇದೆವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವಸಂತಕುಮಾರಿ ತಿಪ್ಪೇಸ್ವಾಮಿ (ಕೊಟ್ಟಿಗೆ) ಹಾಗೂ ಉಪಧ್ಯಕ್ಷರಾಗಿ ಅನಸೂಯಮ್ಮ ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಪಂ ಇಓ ಚಂದ್ರಶೇಖರ್ ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದರು.
ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಲ್ಲೇದೆವರಪುರ ಗ್ರಾಪಂ ಸಾಮಾನ್ಯ ಮೀಸಲು ಕ್ಷೇತ್ರದ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ವಸಂತಕುಮಾರಿ ಡಿ ತಿಪ್ಪೇಸ್ವಾಮಿ (ಕೊಟ್ಟಿಗೆ) ಆಯ್ಕೆಯಾಗಿದ್ದು . ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಪ ಜಾ ಸಾಮಾನ್ಯ ಅನುಸೂಯಮ್ಮ ಆಯ್ಕೆಯಾಗಿದ್ದಾರೆ ಇವರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ ಕಣದಲ್ಲಿ ಅದ್ಯಕ್ಷ ಸ್ಥಾನಕ್ಕೆ ವಸಂತಕುಮಾರಿ ಒಬ್ಬರೆ ನಾಮ ಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಸಹ ಅನುಸೂಯಮ್ಮ ರವರು ಒಬ್ಬರೆ ಕಣದಲ್ಲಿದ್ದು ಎಲ್ಲಾ ಸರ್ವಸದಸ್ಯರ ಬಹುಮತದೊಂದಿಗೆ ಅದ್ಯಕ್ಷ ಉಪಾದ್ಯಕ್ಷರುನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ..
ಕಲೇದೇವರಪುರ ಗ್ರಾಮ ಪಂಚಾಯಿತಿಯಲ್ಲಿ 13 ಜನ ಸದಸ್ಯರಿದ್ದು ಸರ್ವಸದಸ್ಯರ ಬೆಂಬಲ ವ್ಯಕ್ತಪಡಿಸಿದ್ದರಿಂದ ವಸಂತಕುಮಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿ.
ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯಮ್ಮ ಆಯ್ಕೆ ಮಾಡಲಾಗಿದೆ.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಅಸ್ತಾಂತರ ಮಾಡಲಾಯಿತು.
ನೂತನ ಅದ್ಯಕ್ಷರಾದ ವಸಂತಕುಮಾರಿ ಮಾತನಾಡಿ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನೂತನ ಅದ್ಯಕ್ಷ ಉಪಾದ್ಯಕ್ಷರಿಗೆ ವಿವಿಧ ಮುಖಂಡರು ಹಾರ ಹಾಕಿ ಶುಭಾ ಕೋರಿದರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪಿಡಿಓ ಅಧಿಕಾರಿ ರಾಜೇಶ್ವರಿ ಮಾಜಿ ಅದ್ಯಕ್ಷರು ಹಾಗೂ ಹಾಲಿ ಸದಸ್ಯರಾದ ನಾಗಮ್ಮ.ಚಂದ್ರಮ್ಮ.ವಿಮಲಾಕ್ಷಿ.ಶೃತಿ ಕೆ ಎನ್.ಕೆ ಟಿ ಬಡಯ್ಯ.ನಿಜಲಿಂಗಪ್ಪ.ಮಧುಮಾಲ.ಡಿ ಶಿವಣ್ಣ.ಜಿ ಹೆಚ್ ಅಜ್ಜಯ್ಯ.ಸವಿತಾ.ಚನ್ನಕೇಶವ.ಮುಖಂಡರಾದ ತಿಪ್ಪೇಸ್ವಾಮಿ. ಮಹಾಂತೇಶ್.ವಕೀಲರಾದ ಒಬಣ್ಣ.ನಾಗಲಿಂಗಪ್ಪ.ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.