online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online ಆಗಸ್ಟ್ 10._2023

ಹಿರೇಮಲ್ಲನಹೊಳೆ ಗ್ರಾ.ಪಂ ಅಧ್ಯಕ್ಷರಾಗಿ ಟಿ.ಓ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಎ.ಬೇಬಿ ಆಯ್ಕೆ.

ಜಗಳೂರು ಸುದ್ದಿ:ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಟಿ.ಓ.ಶ್ರೀನಿವಾಸ ಉಪಾಧ್ಯಕ್ಷರಾಗಿ ಎ.ಬೇಬಿ ಆಯ್ಕೆಯಾದರು.

ಒಟ್ಟು 20 ಜನ ಸದಸ್ಯರಿದ್ದು‌.ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಟಿ.ಓ.ಶ್ರೀನಿವಾಸ್ , ಜೆ.ಎಂ.ಶಾಂತಮ್ಮ,ಎಂ.ವೀಣಾ ಅವರು ನಾಮಪತ್ರ ಸಲ್ಲಿಸಿದ್ದರು.ಕೊನೆಗೆ ವೀಣಾ ಅವರು ನಾಮಪತ್ರ ಹಿಂಪಡೆದರು.ಕಣದಲ್ಲಿ ಉಳಿದ ಇಬ್ಬರ ನಾಮಪತ್ರಗಳು ಊರ್ಜಿತವಾಗಿದ್ದು ಕೊನೆಯಲ್ಲಿ ಇಬ್ಬರು ಸ್ಪರ್ಧಿಗಳಿಗೆ ನಡೆದ ಚುನಾವಣೆಯಲ್ಲಿ ಜೆ.ಎಂ.ಶಾಂತಮ್ಮ ಅವರು 9 ಮತಗಳನ್ನು ಪಡೆದು ಪರಾಭವಗೊಂಡರೆ. ಟಿ.ಓ.ಶ್ರೀನಿವಾಸ್ 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು.ಎಸ್ ಸಿ ಮಹಿಳಾ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಎ.ಬೇಬಿ ಹಾಗೂ ವಿಶಾಲಮ್ಮ ಇಬ್ಬರು ನಾಮಪತ್ರಸಲ್ಲಿಸಿದ್ದರು.ವಿಶಾಲಮ್ಮ ಅವರು 9 ಮತಗಳನ್ನು ಪಡೆದು ಪರಾಭವಗೊಂಡರೆ.ಎ.ಬೇಬಿ 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತೋಟಗಾರಿಕೆ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ರಾಜೇಶ್ ಘೋಷಿಸಿದರು.

ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಜಿಯಾಬಿ,ಬಿ.ಸುರೇಶ್,ಎಂ.ಈರಮ್ಮ,ಎ.ಎಸ್.ತಿಪ್ಪೇಸ್ವಾಮಿ,ಪದ್ಮಕ್ಕ,ಮಾರಪ್ಪ,ಜಿ.ಆರ್‌.ನಾರಾಯಣರೆಡ್ಡಿ,ಎಂ.ವೀಣಾ,ರಂಗಪ್ಪ,ಎನ್.ಸಿ.ನಾಗರಾಜಯ್ಯ,ದ್ಯಾಮಕ್ಕ,ಆರ್.ಶಿವಣ್ಣ,ಶಿವರುದ್ರಮ್ಮ,ರೇಣುಕಮ್ಮ,ಅನೂಪ್ ಎಲ್.ರಾಯಪಾಟಿ,ಶರಣಪ್ಪ ಪಿಡಿಓ ಅರವಿಂದ್ ಸೇರಿದಂತೆ ಗ್ರಾಮದ ಮುಖಂಡರುಗಳು ಗ್ರಾಮಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!