ದಾವಣಗೆರೆ ಜಿಲ್ಲೆ ಜಗಳೂರು
ತಾಲ್ಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆರಾಗಿ ವಸಂತ ಲಿಂಗರಾಜ್ ಉಪಾಧ್ಯಕ್ಷರಾಗಿ ಅರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ್ ಘೋಷಿಸಿದ್ದಾರೆ.
online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online ಆಗಸ್ಟ್ 10_ 2023
ತಾಲೂಕಿನ ಗುತ್ತಿದುರ್ಗ ಗ್ರಾ.ಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾನಸ ಲಿಂಗರಾಜ್ ಹಾಗೂ ಉಪಾಧ್ಯಕ್ಷರಾಗಿ ಅರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದು
ಗುತ್ತಿದುರ್ಗ ಗ್ರಾ.ಪಂ ಅನುಸೂಚಿತ ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಕ್ಷೇತ್ರ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿತ್ತು ಅದ್ಯಕ್ಷರ ಸ್ಥಾನಕ್ಕೆ ಮಾನಸ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜುನ್ ಒಬ್ಬರೇ ನಾಮ ಪತ್ರ ಸಲ್ಲಿಸಿ ಕಣದಲ್ಲಿದ್ದರು ಇವರ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿರಲಿಲ್ಲ ಆದ್ದರಿಂದ ಮಾನಸ ಲಿಂಗರಾಜ್ ಅಧ್ಯಕ್ಷರಾಗಿ ಹಾಗೂ ಉಪಧ್ಯಕ್ಷರಾಗಿ ಅರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಹಾಗೂ ಪಶು ಸಂಗೋಪನೆ ಇಲಾಖೆ ಸಹಾಯಕ ನೀರ್ದೇಶಕ ಲಿಂಗರಾಜ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ
ಗ್ರಾ.ಪಂ ಯಲ್ಲಿ 16 ಜನರ ಸದಸ್ಯರ ಬಲ ಹೊಂದಿದ್ದು ಸರ್ವಸದಸ್ಯರ ಬೆಂಬಲದ ಮೇರೆಗೆ ಅಧ್ಯಕ್ಷ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಗ್ರಾಪಂ ಚುನಾವಣೆಗೆ ಎರಡು ಜನ ಸದಸ್ಯರು ಗೈರಾಗಿದ್ದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಪಂ ಅದ್ಯಕ್ಷೆ ಮಾನಸ ಮಾತನಾಡಿ ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಓ ಅಧಿಕಾರಿ ಬಸವರಾಜಯ್ಯ . ಗ್ರಾಮ ಪಂಚಾಯಿತಿ ಸದಸ್ಯರಾದ ಗಾಯತ್ರಿ ಬಾಯಿ. ಟಿ ಕುಮಾರ್. ಜಾನಮ್ಮ. ಬಸವನಗೌಡ.ಕವಿತಾ ಕುಮಾರಿ. ಅನುಸೂಯಮ್ಮ. ಗಿರಿಜಮ್ಮ. ಹನುಮಕ್ಕ. ಹನುಮಂತಪ್ಪ. ನಟರಾಜ. ನಿಜಲಿಂಗಪ್ಪ. ರೇಣುಕಮ್ಮ. ಸೇರಿದಂತೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಬಸವರಾಜಯ್ಯ. ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ನೂತನವಾಗಿ ಗ್ರಾಪಂ ಅದ್ಯಕ್ಷರಾಗಿ ಆಯ್ಕೆಯಾದ ಮಾನಸ ಲಿಂಗರಾಜ್ ರವರಿಗೆ ತಾಲ್ಲೂಕು ನಾಯಕ ಸಮಾಜದ ಪದಾಧಿಕಾರಿಗಳು ಸನ್ಮಾನಿಸಿ ಶುಭಾ ಕೋರಿ ಗೌರವಿಸಿದರು ಈ ಸಂದರ್ಭದಲ್ಲಿ ಕಲ್ಲೇದೆವರಪುರ ಬಡಪ್ಪ.ವಕೀಲರಾದ ಬಸವರಾಜ್.ತಿಪ್ಪೇಸ್ವಾಮಿ.ಶಾಮಣ್ಣ.ಸೇರಿದಂತೆ ಹಾಜರಿದ್ದರು.