online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online ಆಗಸ್ಟ್ 11 _2023 jlr news

ಶಾಸಕರ ಅಮೃತ ಅಸ್ತದಿಂದ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ನೂತನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ  ವಸತಿ ನಿಲಯ ಉದ್ಗಾಟಸಿ ಹಾಸ್ಟೆಲ್ ಸೌಲಭ್ಯವನ್ನ ಸದುಪಯೋಗಪಡೆದುಕೊಳ್ಳುವಂತೆ  ಶಾಸಕ ಬಿ ದೇವೆಂದ್ರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 ತಾಲ್ಲೂಕಿನ  ಗುತ್ತಿದುರ್ಗ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ದೇವರಾಜ್ ಅರಸ್ ಹಿಂದೂಳಿದ ವರ್ಗಗಳ‌ ವಸತಿ ನಿಲಯ ಹಾಸ್ಟೆಲ್ ಉದ್ಗಾಟನೆ ಕಾರ್ಯಕ್ರಮದಲ್ಲಿ  ಸಸಿಗೆ ನೀರು ಎರೆಯುವ ಮೂಲಕ ಹಾಸ್ಟೆಲ್ ಉದ್ಗಾಟನೆ ಮಾಡಿ ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪ ರವರು ಮಾತನಾಡಿದರು

ಭಾರತ ದೇಶ  ಹಿಡಿ ಪ್ರಪಂಚಕ್ಕೆ ಸಂಸ್ಕಾರ ನೀಡಿದ ದೇಶವಾಗಿದ್ದು ನಮ್ಮ ದೇಶದಲ್ಲಿ ಇಂದಿಗೂ ಸುಸಂಸ್ಕೃತವಿದೆ. ವಿದ್ಯಾರ್ಥಿ ಎಂದರೆ ಕೇವಲ ಅಂಕ ಪಡೆಯುವುದು ಮಾತ್ರವಲ್ಲ. ಶಿಸ್ತು ಸಂವಯಮ ಗುರು ಹಿರಿಯರೊಂದಿಗೆ ಗೌರವದಿಂದ ಗುರು ಶಿಷ್ಯಪರಂಪರೆಯನ್ನು ಉಳಿಸಿ ಬೆಳೆಸಬೇಕು ಸರ್ಕಾರ ಇದೀಗ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ ಅವುಗಳನ್ನು ಸದುಪಯೋಗ ಪಡೆದುಕೊಳ್ಳಿ ತ್ರಿವಿಧಿ ದಾಸೋಹ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ .

.ವಿದ್ಯಾರ್ಥಿಗಳು ಪ್ರಸ್ತುತ ಬದಲಾದ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲು ಎದುರಿಸುವುದೂ ಅಗತ್ಯವಿದೆ.  ಉತ್ತಮ ವಿದ್ಯಾರ್ಥಿಯೆಂದಾಗ ಪಾಠದಲ್ಲಿ ಮುಂದಿದ್ದು, ಉತ್ತಮ ಅಂಕ ಗಳಿಸುವುದು ಎಂದಷ್ಟೇ ಅಲ್ಲ. ಬದಲಾಗಿ ಪಠ್ಯೇತರ ಚಟವಟಿಕೆಗಳಲ್ಲೂ ಭಾಗವಹಿಸಿ ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶಾಸಕರು ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ್ ದ ಮೂಲಕ ಪಾಠ ಹೇಳಿಕೊಟ್ಟರು. ಅದೇ ರೀತಿ ಅವರ ಬಾಲ್ಯ ಜೀವನ ವೃತ್ತಂತವನ್ನ ಬಿಚ್ಚಿಟ್ಟರು ನಾನು‌ ಕೂಡ 1979 ರಲ್ಲಿ ಹಾಸ್ಟೆಲ್ ವಿದ್ಯಾರ್ಥಿಯಾಗಿದ್ದಾಗ ಈಗಿನ ರೀತಿ ಸರ್ಕಾರಿ‌ ಸೌಲಭ್ಯಗಳಿರಲಿಲ್ಲ ಆಗ ನಾನು ಗೋಣಿಚೀಲದಲ್ಲಿಯೆ ಮಲಗುತ್ತಿದ್ದೆ ಅದೆ ನನ್ನ ಹಾಸಿಗೆ ಮತ್ತು ಹೊದಿಕೆಯಾಗಿತ್ತು ನನ್ನ ಕೈಗಳೆ ತಲೆ ದಿಂಬು ಎಂದು ಶಾಸಕರ ವಿದ್ಯಾರ್ಥಿ ಜೀವನ ಸ್ಮರಿಸಿಕೊಂಡು ಭಾವಕರಾದರು ಅಂದು ನಾನು ನಿಮ್ಮ ಹಾಗೇ ಸಾಮಾನ್ಯ ವಿದ್ಯಾರ್ಥಿ ಇದೀಗ ನಾನು ಶಾಸಕನಾಗಿ ಹಾಸ್ಟೆಲ್ ಪ್ರಾರಂಭ ಉದ್ಗಾಟನೆ ಅತೀವ ಸಂತೋಷದ ಸಂಗತಿ ಎಂದು ಮನದಾಳದ ಮಾತು ಬಿಚಿಟ್ಟರು.

ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ರವರು ಹಿಂದೂಳಿದ ವರ್ಗಕ್ಕೆ  ಅಧಿಕಾರ ಸಂಪತ್ತು ಆವಕಾಶ ನೀಡಿದ ಕೀರ್ತಿವಂತರು ಹಿಂದೂಳಿದ ವರ್ಗದ ಜನರ ಅಭಿವೃದ್ಧಿಯೆ ಅವರ ಕನಸು ಆಗಿತ್ತು ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ.ಇದೀಗ ನೂತನವಾಗಿ ಪ್ರಾರಂಭಿಸಿರುವ ಹಾಸ್ಟೆಲ್ ಈ ಗ್ರಾಮದ ವಿದ್ಯಾರ್ಥಿಗಳಿಗೆ ವರದಾನವಾಗಲಿದ್ದು ಮಕ್ಕಳ ಪೋಷಕರು ಸಿಗುವ ಸೌಲಭ್ಯಗಳನ್ನು ಪಡೆದು ತಮ್ಮ ವಿದ್ಯಾರ್ಥಿಗಳ ಉಜ್ವಲ ಭವಿಷ್ಯರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಈ    ಹಾಸ್ಟೆಲ್ ಹಗ್ಗಜಗ್ಗಾಟಕ್ಕೆ ಕಾರಣವಾಯಿತ್ತು ಗುತ್ತಿದುರ್ಗ ಗ್ರಾಮಸ್ಥರು ನಮ್ಮ ಊರಿನಲ್ಲಿ ಸ್ಥಾಪನೆ ಮಾಡಿ ಎಂದು‌ ನಮ್ಮ ಬಳಿ ಬಂದು ಒತ್ತಡ ತಂದರು ಅದೇ ರೀತಿ ಹಾಲೆಕಲ್ಲು ಗ್ರಾಮಸ್ಥರು ಸಹ ನಮ್ಮೂರಿನಲ್ಲಿ ಸ್ಥಾಪಸಿ ಎಂದು ದುಂಬಾಲು ಬಿದ್ದಿದ್ದರು ನಾನು ಬರುವ ಅವಧಿಯಲ್ಲಿ ಹಾಲೆಕಲ್ಲು ಗ್ರಾಮಕ್ಕೆ ಪ್ರತ್ಯೇಕ ಹಾಸ್ಟೆಲ್ ಮಂಜೂರು ಮಾಡಿಸುವೆ ಎಂದು ಮನವೋಲಿಸಿ ಇಲ್ಲಿ 50 ವಿದ್ಯಾರ್ಥಿಗಳು ತಂಗುವ ಹಾಸ್ಟೆಲ್ ಪ್ರಾರಂಭಿಸಲಾಗಿದೆ.ಮಕ್ಕಳು ಶಿಸ್ತಿನ ಶಿಪಾಯಿಗಳಾಗಿ ಉತ್ತಮ ಶಿಕ್ಷಣ ಪಡೆದು ಮಹನೀಯರಂತೆ ಕ್ರಾಂತಿಯಾಗಬೇಕು.

ಶಾಸಕರೆ ಖುದ್ದು  ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠ ಹೇಳಿಕೊಟ್ಟರು

.ಊಟ ಮಾಡುವ ಮುನ್ನ ವಿದ್ಯಾರ್ಥಿಗಳ ಅಸತೋಮ ಮತ್ತು ಶಾಂತಿ ಮಂತ್ರ ಹೇಳಿಕೊಟ್ಟರು. 

ಮಕ್ಕಳಿಗೆ ಶಿಸ್ತು ಕಲಿಸಿ ಮಕ್ಕಳಲ್ಲಿ ಸ್ನೇಹ ಸಂಬಂದ ಪ್ರೀತಿ ಭಾವನೆ ವಿಶ್ವಾಸಗಳುನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ಮಾಡೋಣ ಈ ಶಾಲೆಯಲ್ಲಿ ಮೂರು ದಾಸೋಹ  ಸಿಗಲಿದೆ ಶಿಕ್ಷಣ ದಾಸೋಹ ಅನ್ನದಾಸೋಹ ಅಧ್ಯಾತ್ಮಿಕ ದಾಸೋಹ ಪಡೆದುಕೊಂಡವರು ದೇಶದ ಉತ್ತಮ ಪ್ರಜೆಗಳಾಲು ಅತ್ಯಂತ‌ ಸಹಕಾರಿ ಎಂದು ಬಣ್ಷಿಸಿದರು .ನಮ್ಮ ಸರ್ಕಾರ    ಐದು ಗ್ಯಾರಂಟಿ ಯೋಜನೆಗಳ ಸಂಪೂರ್ಣವಾಗಿ ಜನತೆಗೆ ಒದಗಿಸಲು ಶ್ರಮಿಸುತ್ತಿದ್ದು ಸರ್ಕಾರದಲ್ಲಿ ಬೇರೆ ಅನುದಾನಕ್ಕೆ ಕೊರತೆಯಿದೆ ನಮ್ಮ ಕ್ಷೇತ್ರದ ಜನರು ಸಹಕರಿಸುವಂತೆ ತಿಳಿಸಿದರು.  

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ ನಾನು ಜಿಪಂ ಸದಸ್ಯರ ಅವಧಿಯಲ್ಲಿ ಗ್ರಾಮದ ಪ್ರೌಢ ಶಾಲೆಗೆ ಕೊಠಡಿಗಳಿಗೆ ಅನುದಾನ ಕಲ್ಪಿಸಲಾಗಿತ್ತು. ಕ್ಷೇತ್ರದಲ್ಲಿ ಪ್ರೌಢಶಾಲೆಗಳು  ಇರುವ ಕಡೆ ಬಿಸಿಎಂ ಹಾಸ್ಟೆಲ್ ಹಾಗೂ ಎಸ್ಸಿ ಎಸ್ಟಿ ಹಾಸ್ಟೆಲ್ ಗಳು ಅವಶ್ಯಕತೆಯಿದೆ.ಎಂದು ಅಭಿಪ್ರಾಯ ಪಟ್ಟರು.ಹಾಸ್ಟೆಲ್ ಕೊರೆತೆಯಿಂದ ವಿದ್ಯಾರ್ಥಿಗಳ ವಿದ್ಯಾಬ್ಯಾಸ ಕುಂಠಿತವಾಗಬಾರದು ಎನ್ನುವ ದೃಷ್ಠಿಯಿಂದ ಸರ್ಕಾರ ಹಾಸ್ಟೆಲ್ ಗಳುನ್ನು ಪ್ರಾರಂಭಿಸಲು ಮುಂದಾಗಿದೆ.  ನಮ್ಮ ಶಾಸಕರು ಕೂಡ ಶಿಕ್ಷಣ ಪ್ರೇಮಿಗಳಾಗಿದ್ದು ತಮ್ಮ ಮಕ್ಕಳುನ್ನು ಉತ್ತಮ ಉನ್ನತ ಅಧಿಕಾರಿಗಳನ್ನಾಗಿ ಮಾಡಿರುವ  ಶಾಸಕರೆ ನಮಗೆ ಮಾಡಲ್ ಆಗಿದ್ದಾರೆ ಎಂದು‌ ಪ್ರಶಂಸೆ ವ್ಯಕ್ತಪಡಿಸಿದರು. 

ಮಾಜಿ  ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ ಅಧಿಕಾರ ಶಾಶ್ವತವಲ್ಲ ಪ್ರಿತಿ ವಿಶ್ವಾಸ  ಬಹುಮುಖ್ಯ ಶಾಸಕ ಎಂಬ ಅಧಿಕಾರ ನಮ್ಮ ಮನೆಯ ಸ್ವತ್ತು ಆಲ್ಲ ಮತದಾರರು ನೀಡಿರುವ ಅಮೂಲ್ಯ ವಾದ ಪ್ರಜಾಸತ್ತಾತ್ಮಕ ಅಧಿಕಾರ  ಎಂದು ಶಾಸಕ ದೇವೆಂದ್ರಪ್ಪರವರಿಗೆ ಶುಭಾ ಕೋರಿದರು.

ಪ್ರಾಸ್ತಾವಿಕವಾಗಿ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಗಾಯಿತ್ರಿ ಮಾತನಾಡಿ ದೇವರಾಜ್ ಅರಸ್ ರವರು ಹಿಂದೂಳಿದ ವರ್ಗದವರಿಗೆ ಸಹಾಕಾರಿಯಾಗುವಂತೆ ಹಾಸ್ಟೆಲ್ ಗಳುನ್ನು ಪ್ರಾರಂಭಿಸಲಾಗಿದ್ದು ಈ ಹಾಸ್ಟೆಲ್ ಸ್ಥಾಪನೆ ಗ್ರಾಮಸ್ಥರಿಗೆ ಒಂದು ಸುದೈವ ಎಂದು ಭಾವಿಸುವೆ. ವಿದ್ಯಾರ್ಥಿಗಳು ಈ ಹಾಸ್ಟೆಲ್ ಸೌಲಭ್ಯವನ್ನ  ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಸಿದ್ದಮ್ಮನಹಳ್ಳಿ ಗ್ರಾಮದ ವಸತಿ ಶಾಲೆಯನ್ನ ಪರಿವರ್ತನೆಯಾಗಿ ಗುತ್ತಿದುರ್ಗ ಗ್ರಾಮಕ್ಕೆ ಹಿಂದೂಳಿ ಹಾಸ್ಟೆಲ್ ಸ್ಥಾಪನೆ  ಸಾರ್ಥಕ ಎಂದರು. ದಾವಣಗೆರೆ ಜಿಲ್ಲೆಯಲ್ಲಿ ಹಿಂದೂಳಿದ ಹಾಸ್ಟೆಲ್ ನಲ್ಲಿ ಒಟ್ಟು 8000 ಸಾವಿರ ವಿದ್ಯಾರ್ಥಿಗಳಿದ್ದು  ಆ ವಿದ್ಯಾರ್ಥಿಗಳಿಗೆ ಉತ್ತಮ ಊಟ ಉಪಾಚಾರದ ಜೊತೆಗೆ ಅವರ ಉತ್ತಮ ವಿದ್ಯಾಬ್ಯಾಸಕ್ಕೆ ಒತ್ತು ನೀಡಲಾಗಿದೆ ಸರ್ಕಾರದಿಂದ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಿ ನಮ್ಮ ಮಕ್ಕಳಂತೆ ಲಾಲನೆ ಪಾಲನೆ ಮಾಡುವ ಜವಾಬ್ದಾರಿಯಿದೆ ಎಂದರು .

ಇದೀಗ ಪ್ರೌಡಾ ಶಾಲಾ ಒಂದು ಕೋಠಡಿಯನ್ನೆ ಹಾಸ್ಟೆಲ್ ಸ್ಥಾಪನೆ ಮಾಡಲು ಶಿಕ್ಷಣ ಇಲಾಖೆ ಸಹಕಾರ ನೀಡಿದೆ  ಆದರೆ 50 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಸ್ಥಳವಕಾಶ ಸಾಲುವುದಿಲ್ಲ   ಗ್ರಾಮದಲ್ಲಿ ಜನರು ಸಹಾಸ್ತ ಚಾಚಿದರೆ ಉತ್ತಮ ಸುಸಜ್ಜಿತವಾದ 100 ವಿದ್ಯಾರ್ಥಿಗಳ ತಂಗುವಂತ ಹಾಸ್ಟೆಲ್ ನಿರ್ಮಿಸಲು ಕೈಜೋಡಿಸಿ ಹಿಂದೂಳಿದ ವರ್ಗಗಳ ಇಲಾಖೆ ಜಿಲ್ಲಾಧಿಕಾರಿ ಗಾಯಿತ್ರಿ ಗ್ರಾಮಸ್ಥರಿಗೆ ಮನವಿ ಮಾಡಿಕೊಂಡರು

.ಈ ಸಂದರ್ಭದಲ್ಲಿ 

ಪ್ರಭಾರೆ ಬಿಇಓ ಸುರೇಶ್ ರೆಡ್ಡಿ.ಮಾಜಿ ತಾಪಂ‌ ಅದ್ಯಕ್ಷರು ಸಣ್ಣಸೂರುಜ್ಜ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಮಹೇಶ್.ಮುಖಂಡ ಪ್ರಕಾಶರೆಡ್ಡಿ. ಮುಖ್ಯಶಿಕ್ಷಕಿ ಶಿವಮ್ಮ.ಗ್ರಾಮದ ಮುಖಂಡ ಸಿದ್ದಜ್ಜ . ಉಪಾನ್ಯಾಸಕ ಷಂಷದ್ದಿನ್ .ಜಿ ಕಲ್ಲೇಶ್ ಎಸ್ ಡಿ‌ಕಲ್ಲೇಶ. ಗ್ರಾಪಂ ಅದ್ಯಕ್ಷರು ಮಾನಸ. ಗ್ರಾಪಂ  ಉಪಾದ್ಯಕ್ಷ ಅರ್ಜುನ್. ಪಟೇಲ್ .ಹಿಂದೂಳಿದ ವರ್ಗಗಳ ಇಲಾಖೆ ಕಲ್ಯಾಣ ವಿಸ್ತಾರಣ ಅಧಿಕಾರಿ‌ ಅಸಮಾಭಾನು. ನಿಲಯ ಪಾಲಕ ದೇವೆಂದ್ರಪ್ಪ. ಗ್ರಾಮದ ಮುಖಂಡ ಶಿವಣ್ಣ.ಗ್ರಾಮದ ಮುಖಂಡ. ಪಲ್ಲಾಗಟ್ಟೆ ಶೇಖರಪ್ಪ.  ಸಿದ್ದಣ್ಣ.ರೇವಣ್ಣ.ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯಧರ್ಶಿ ರುದ್ರೇಶ್.ಅಲ್ಪಸಂಖ್ಯಾತ ಘಟಕದ ತಿಪ್ಪೇಸ್ವಾಮಿ.ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!