ರಾಜ್ಯಸುದ್ದಿ :- ಚಿತ್ರದುರ್ಗ
ಚಿತ್ರದುರ್ಗ | ಅಂಬೇಡ್ಕರ್ ನಾಮಫಲಕ ಆಳವಡಿಸಿದ ಕಾರಣಕ್ಕೆ ಅಲ್ಲಿನ ಮೇಲ್ಜಾತಿಗಳಿಂದ ದಲಿತರ ಮೇಲೆ ದಾಳಿ ಮತ್ತು ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ವಿಷಪೂರಿತ ಕಲುಷಿತ ನೀರು ಪೂರೈಕೆ ಮಾಡಿ 7 ಜನ ಸಾವು ನ್ಯಾಯಕ್ಕಾಗಿ ದಸಂಸ ಪದಾಧಿಕಾರಿಗಳು ಆಕ್ರೋಶ ಹೊರಹಾಕಿ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ದಲಿತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.
Shukradeshe Media Desk
Shukradeshenews Desk
August 8, 2023
Kannada | online news portal | Kannada news online ಆಗಸ್ಟ್ 11
Search
Shukradeshe suddi Kannada | online news portal | Kannada news online
Kannada | online news portal | Kannada news online
ಜಗಳೂರು ಜಗಳೂರು:ತಾಲೂಕಿನ ಪಟ್ಟಣದಲ್ಲಿ ದಸಂಸ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ ದಲಿತ ಕೇರಿಗೆ ಕುಡಿಯುವ ನೀರಿಗೆ ವಿಷ ಹಾಕಿರುವ ಘಟನೆ ಮತ್ತು ಜಿಲ್ಲೆಯ ಅಡವಿ ರಾಮಜೋಗಿಹಳ್ಳಿಯಲ್ಲಿ ಅಂಬೇಡ್ಕರ್ ನಾಮಫಲಕವನ್ನು ಆಳವಡಿಸಿದ್ದಕ್ಕೆ ಸವರ್ಣೀಯವರಿಂದ ದಲಿತರ ಮೇಲೆ ಹಲ್ಲೆ ಖಂಡಿಸಿ ತಹಶೀಲ್ದಾರ್ ಮಂಜಾನಂದರವರಿಗೆ ಮನವಿ ಸಲ್ಲಿಸಿ ದಲಿತರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಈ ಘನಘೋರ ಅನ್ಯಾಯವನ್ನ ನಾವು ಖಂಡಿಸುತ್ತೆವೆ ಸಂತ್ರಸ್ತರ ಕುಟುಂಬಕ್ಕೆ ತಲಾ 50 ಲಕ್ಷ. ಪರಿಹಾರ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಈ ಎರಡು ಪ್ರಕರಣವನ್ನ ಸಿ ಬಿ ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ ದಸಂಸ ಸಂಚಾಲಕ ಕುಬೇಂದ್ರಪ್ಪ ಆಗ್ರಹಿಸಿದ್ದಾರೆ.
ಚಿತ್ರದುರ್ಗ ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಮಾಡಿ ಸಾವಿನ ಸಂಖ್ಯೆ 7 ಕ್ಕೆ ಏರಿದೆ.
ಕಲುಷಿತ ನೀರು ಸೇವನೆಯಿಂದ 7 ಜನ ಮೃತಪಟ್ಟಿರುತ್ತಾರೆ ಅಸ್ವಸ್ಥಗೊಂಡವರು 150 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ನೀರನ್ನು ಹಾಗೂ ಅಸ್ವಸ್ಥಗೊಂಡವರ ಆರೋಗ್ಯ ಸ್ಯಾಂಪಲ್ ಪರೀಕ್ಷಿಸಿದಾಗ ನೀರಲ್ಲಿ ಕಾಲರಾ ಮಾದರಿ ಪತ್ತೆಯಾಗಿದೆ ಎಂದು ವರದಿ ನೀಡಿರುವ ಅಧಿಕಾರಿಗಳು ಈ ಪ್ರಕರಣವನ್ನ ತಿರುಚಲು ಹೊರಟ್ಟಿದ್ಸಾರೆ ಎಂದು ದಸಂಸ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ವೇಳೆ ಅಂಬೇಡ್ಕರ್ ಪುತ್ಥಳಿ ಸಂರಕ್ಷಣಾ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ ಕವಡಿಗರಹಟ್ಟಿಯಲ್ಲಿ ಪರಿಶಿಷ್ಟರು ಹಾಗೂ ಮೇಲ್ವರ್ಗದ ಸವರ್ಣೀಯರ ಘರ್ಷಣೆಯ ವೈಷಮ್ಯವೆ ಈ ಘಟನೆಗೆ ಕಾರಣವಾಗಿದೆ. ಕುಡಿಯುವ ನೀರಿನ ಕೊಳಾಯಿ ಮೂಲಕ ನೀರಿಗೆ ವಿಷ ಬೆರೆಸಿ ಪೂರೈಸಿರುವ ಬಗ್ಗೆ ಅನುಮಾನವಿದೆ. ಆದರೆ ತನಿಖೆ ಮಾಡಬೇಕಾದ ಜಿಲ್ಲಾಡಳಿತವು ಮೇಲ್ನೋಟಕ್ಕೆ ‘ಕಾಲರಾ’ ಇರಬಹುದೆಂದು ತಿಳಿಸಿ. ಅಧಿಕಾರಿಗಳೆ ಪ್ರಕರಣ ತಿರುಚುವ ಹುನ್ನಾರವಿದೆ.ಸರ್ಕಾರ ಕಿಡಿಗಳಿಗಳಿಗೆ ಶಿಕ್ಷೆ ವಿದಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದಸಂಸ ಪದಾಧಿಕಾರಿಗಳಾದ ನಿಬಗೂರು ಮುನಿಸ್ವಾಮಿ.ಪಲ್ಲಾಗಟ್ಟೆ ರಂಗಪ್ಪ.ವೆಂಕಟೇಶ್. ನಾಗರಾಜ್.ಸಂಘಟನೆ ಸಂಚಾಲಕ ಗೌರಿಪುರದ ಸತ್ಯಮೂರ್ತಿ .ಮುಸ್ಟೂರು ನಿಂಗಪ್ಪ ಸೇರಿದಂತೆ ಹಾಜರಿದ್ದರು.