online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished on August 13 , 2023
ಮನುಷ್ಯನ ಆರೋಗ್ಯ ರಕ್ಷಣೆಗೆ ಪರಿಸರ ಸ್ವಚ್ಚತೆ ಅತ್ಯವಶ್ಯಕ:ಶಾಸಕ ಬಿ.ದೆವೇಂದ್ರಪ್ಪ ಅಭಿಮತ
ಜಗಳೂರು ಸುದ್ದಿ:ಮನುಷ್ಯನ ಆರೋಗ್ಯ ರಕ್ಷಣೆಗೆ ಪರಿಸರ ಸ್ವಚ್ಛತೆ ಅತ್ಯವಶ್ಯಕ ಎಂದು ಶಾಸಕ ಬಿ.ದೆವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.
ಪ್ರಸ್ತುತವಾಗಿ ಪ್ರತಿಯೊಬ್ಬರೂ ಪ್ರಕೃತಿ ಆರಾಧಕರಾಗಬೇಕಿದೆ.ಸನಾತನ ಶಿಲಾಯುಗದಲ್ಲಿ ಪ್ರಕೃತಿ ಆರಾಧಕರಾಗಿದ್ದುಕೊಂಡು ಉತ್ತಮ ಆರೋಗ್ಯ ಸಂಪತ್ತು ಗಳಿಸಿ ಶತಾಯುಷಿಗಳಾಗಿದ್ದರು.ಆದರೆ ಇಂದು ದೇಶದಲ್ಲಿ ಆಧುನಿಕ ನಾಗಾಲೋಟದಲ್ಲಿ ಜನಸಂಖ್ಯೆ ಹೆಚ್ಚಳ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ ಆದರೆ ಪ್ರಕೃತಿ ಸಂಪತ್ತು ವಿನಾಶದತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಅರಿತುಕೊಂಡಿದ್ದನ್ನು ದೇಶದ ಜನತೆ ಮರೆಯುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಸರ ಸ್ವಚ್ಛತೆಯ ಜಾಗೃತಿಮೂಡಿಸುವ ಕಾರ್ಯಕ್ರಮಗಳು ಕೇವಲ ಸರಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗದೆ.ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಜನಜಾಗೃತಿ ಆಂದೋಲನವಾಗಬೇಕು,ವೃಕ್ಷ ರಕ್ಷಿತೋ ರಕ್ಷಿತಃ ಎಂದು ತಿಳಿಸಿದರು.
ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಸರಕಾರದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಸ್ವಚ್ಛತೆಯ ಕಾರ್ಯವೈಖರಿಯ ಪರಿಮಿತಿಯ ಮಾಹಿತಿಗಾಗಿ ದೇಶದಲ್ಲಿ ಆ್ಯಪ್ ಮುಖಾಂತರ ಸ್ಥಳಿಯ ಸ್ವಚ್ಛತೆಯ ಮಾಹಿತಿ ಅಪ್ ಲೋಡ್ ಗೆ ಕೆಲಪ್ರಶ್ನಾವಳಿ ನೀಡಿದ್ದು.ಸಾರ್ವಜನಿಕರು ಮಾಹಿತಿ ಅಪ್ ಲೋಡ್ ಮಾಡಬೇಕು ಇಲಾಖೆಯ ಜವಾಬ್ದಾರಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಸಂದರ್ಭದಲ್ಲಿ ಪ.ಪಂ ಸದಸ್ಯರಾದ ರವಿಕುಮಾರ್,ರಮೇಶ್ ರೆಡ್ಡಿ,ರವಿಕುಮಾರ್, ಮಂಜಣ್ಣ,
ಶಕೀಲ್ ಅಹಮ್ಮದ್, ಪ್ರಭಾರಿ ಬಿಇಓ ಸುರೇಶ್ ರೆಡ್ಡಿ,ಎನ್ ಎಂಕೆ ಶಾಲೆಯ ಲೊಕೇಶ್,ಆರೋಗ್ಯ ಇಲಾಖೆ ನಿರೀಕ್ಷಕ ಖಿಫಾಯತ್,ಮುಖಂಡರಾದ ಗೌಸ್ ಪೀರ್,ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಇದ್ದರು.