online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online

Byshukradeshenews iPublished on August 13. 2023

ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿದ ಸಿದ್ದಮ್ಮನಹಳ್ಳಿ ಗ್ರಾಮಸ್ಥರು!

:.ಮದ್ಯ ಕರ್ನಾಟ ಭಾಗದ ಅನ್ನದಾತರು ವರುಣನಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಮಳೆಗಾಗಿ ಹಿಂದಿನ ನಂಬಿಕೆಯಂತೆ ಕಪ್ಪೆಗಳಿಗೆ, ಮದುವೆ ಮಾಡುವ ಪದ್ಧತಿಯಂತೆ ಅಂದಿನ ಕಾಲಘಟ್ಟದಿಂದ ಒಂದು ಸಂಪ್ರದಾಯ. ಆಚರಣೆಯಾಗಿದೆ ಕಪ್ಪೆಗಳಿಗೆ ಮತ್ತು ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುವುದು ಎಂಬ ಗ್ರಾಮೀಣ ಬಾಗದ ಜನರ ನಂಬಿಕೆಯಂತೆ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಗಾಳಿ ಮಾರಮ್ಮ ದೇವಾಸ್ಥಾನದ ಬಳಿ ಒಂದು ಹೆಣ್ಣು ಕಪ್ಪೆ ಮತ್ತು ಗಂಡು ಕಪ್ಪೆಗಳನ್ನ ಹಿಡಿದು ತಂದು
ಅವುಗಳಿಗೆ ಬಟ್ಟೆ ತೋಡಿಸಿ ಕಂಕಣ ಕಟ್ಟಿ ಅರಿಶಿನ ಶಾಸ್ತ್ರ, ಮಾಡಿ ತಾಳಿ ಕಟ್ಟಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿ ವಿಶೇಷ ಆಚರಣೆಗೆ ಸಾಕ್ಷಿಯಾಗಿದ್ದಾರೆ. ಗ್ರಾಮದ ಹಿರಿಯರು ಮಹಿಳೆಯರು ಮಕ್ಕಳು ಯುವಕರು ಈ ಮದುವೆಯಲ್ಲಿ ಭಾಗಿಯಾಗಿ ಮಳೆರಾಯನ ಕುರಿತು ಸೋಭಾನೆ ಪದ ಹಾಡುವ ಮೂಲಕ ಊರು ತುಂಬಾ
ಮೆರವಣಿಗೆ ಮೂಲಕ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ.

ವರುಣ ದೇವರ ಕುರಿತು‌ ಸೋಬಾನೆ ಪದದಲ್ಲಿ ಮಳೆಯಿಲ್ಲದೆ ಬಿತ್ತಿದ ಬೆಳೆಗಳು ಒಣಗುತ್ತಿವೆ ಎಂದು ಮಳೆರಾಯ ಬಾ ಬಾ ಎಂದು ಕರೆಯುವರು. ಈ ಬಾರಿ ಮುಂಗಾರು ಮಳೆ ಸಹ ಸರಿಯಾದ ರೀತಿ ಬಿಳದೆ ವಿಳಂಬವಾಗಿ ಬಿದ್ದ ಹಿನ್ನಲೆಯಲ್ಲಿ ಇದೀಗ. ಅನ್ನದಾತರು ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಾದ ಮೆಕ್ಕೆಜೋಳ. ಶೇಂಗಾ ರಾಗಿ ಇನ್ನಿತರೆ ಬೆಳೆಗಳು ಒಣಗುತ್ತಿವೆ ಎಂದು ಗ್ರಾಮದ ಮಹಿಳೆಯರು ಮಕ್ಕಳು ವಿದ್ಯಾರ್ಥಿಗಳು ಯುವಕರು ಅನ್ನದಾತರು ಪ್ರಾರ್ಥನೆ ಮಾಡಿ
ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುವುದು ಎಂಬ ವಾಡಿಕೆಯಂತೆ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನನ್ನು ನೆನೆದು ವಿಶೇಷವಾಗಿ ಗಮನ ಸೆಳೆದ ಗ್ರಾಮಸ್ಥರು.ಮದುವೆ ಮಾಡಿಸಿ ಕಪ್ಪೆಗಳುನ್ನು ಬಾವಿಗೆ ಬಿಟ್ಟ ಗ್ರಾಮಸ್ಥರು

ಮಳೆರಾಯ ಬಾರಪ್ಪ ಮಳೆರಾಯ ಅಂತಾ ಕೈ ಮುಗಿದು ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ವಿಶೇಷ ಆಚರಣೆಗೆ ಸಾಕ್ಷಿಯಾಗಿದ್ದಾರೆ. ಮಳೆರಾಯನ ಆಗಮನಕ್ಕೆ ಜನ ಕಾಯುತ್ತಿದ್ದಾರೆ.

ಗ್ರಾಮದ ದೇವಸ್ಥಾನಕ್ಕೆ ತೆರಳಿ ಮುತ್ತೈದೆಯರೆಲ್ಲರೂ ಉಡಿ ತುಂಬಿಕೊಂಡು ಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೇರೆದು, ಅಕ್ಕಿಕಾಳು ಹಾಕಿ.ಪೂಜಿಸಿ, ಕಪ್ಪೆಗಳಿಗೆ ತಾಳಿ ಕಟ್ಟಿಸಿ ಮದುವೆ ಮಾಡುವುದರ ಜೊತೆಗೆ ಬಂದ ಭಕ್ತರಿಗೆ ಅನ್ನ ಪ್ರಸಾದವನ್ನ ವಿತರಿಸಿ ಮಳೆರಾಯ ಬೇಗ ಬಾ ಅಂತಾ ವಿಶೇಷ ನಮನವನ್ನ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ .ಬಾಗ್ಯಮ್ಮ ಕಮಲಮ್ಮ.ಲಕ್ಷ್ಮಮ್ಮ.ಮಹದೇವಮ್ಮ.ಗಗನ.ಮಹಾಂತೇಶ್ ಸೇರಿದಂತೆ ಮುಂತಾದ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!