ತೆರೆದ ಬಾಗಿಲು ಶವಗಾರದಲ್ಲಿ ಮೃತದೇಹದ ಪೋಸ್ಟ್ ಮಾಟಂ:ಸಾರ್ವಜನಿಕರು ಆಕ್ರೋಶ
ಜಗಳೂರು ಸುದ್ದಿ:ತಾಲೂಕಿನ ಬಿಳಿಚೋಡು ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಪ್ರಾಣಿಗಿಂತ ಕಡೆಯಾಗಿ ಮೃತದೇಹದ ಪೋಸ್ಟ್ ಮಾಟಮ್ ಮಾಡುತ್ತಿರುವುದು ಸಾರ್ವಜನಿಕರ ಮೃತಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.
ಸರಕಾರಿ ಸಾರ್ವಜನಿಕರ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದ್ದರೂ ಶವಗಾರಕ್ಕೆ ಮಾತ್ರ ಕಟ್ಟಡಭಾಗ್ಯವಿಲ್ಲದೆ ಮುರಿದ ಬಾಗಿಲು,ಕಿರಿದಾದ ಕೊಠಡಿ,ಗಾಳಿಬೆಳಕಿಲ್ಲದೆ ವಸಾನೆಗೆ ತಾಳಲಾರದೆ ಕತ್ತಲಿನಲ್ಲಿ ಬಾಗಿಲು ತೆರೆದುಕೊಂಡು ಪೋಸ್ಟ್ ಮಾಟಮ್ ಮಾಡುವ ಅನಿವಾರ್ಯತೆ ಎದುರಾಗಿದೆ.ಆದರೂ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ಇತ್ತ ತಿರುಗಿ ನೋಡಿಲ್ಲ.
ಗ್ರಾಮಪಂಚಾಯಿತಿ ಅನುದಾನದಲ್ಲಿ ದ್ವಿಚಕ್ರ ವಾಹನಪಾರ್ಕಿಂಗ್,ಆಸ್ಪತ್ರೆಕಟ್ಟಡ ಬಣ್ಣ,ಇತರೆ ಅಭಿವೃದ್ದಿ ಕಾಮಗಾರಿ ನಡೆಸಲಾಗಿದೆ.ಶವಗಾರ ಕೊಠಡಿ ದುರಸ್ಥಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.