shukradeshenews | Kannada portal by shukradeshe news august 29
jlr news
ಜಗಳೂರು : ಶಿಕ್ಷಣ ಎಂಬುದು ಸಾದಕರ ಸ್ವತ್ತು ಎಂಬುದು ಸಾದಿಸಿದವರಿಗೆ ಮಾತ್ರ ತಿಳಿಯಲಿದೆ ಈ ನಿಟ್ಟಿನಲ್ಲಿ ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನಾಯಕ ಸಮಾಜದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್ ಹೇಳಿದರು
ಪಟ್ಟಣದ ಉದಯ್ ಬುಕ್ ಸ್ಟೋರ್ ನಲ್ಲಿ ಮಂಗಳವಾರ ಪ್ರಥಮ ಹಂತದಲ್ಲಿ ಮೆಡಿಕಲ್ ಸೀಟ್ ಪಡೆದ ಯುವ ಪ್ರತಿಭೆ ವಿದ್ಯಾರ್ಥಿ ಮಂಜುನಾಥ್ ಗೆ ಅವರಿಗೆ ಸನ್ಮಾನಿಸಿ ಮಾತನಾಡಿದರು
ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಸಾವಿತ್ರಮ್ಮ ಮಕ್ಕಳನ್ನ ಪರಿಶ್ರಮದಿಂದ ಹಲವು ಸವಾಲುಗಳ ನಡುವೆ ವಿದ್ಯಾಭ್ಯಾಸ ಮಾಡಿಸಿದ್ದಾರೆ ಅವರ ಮಗನ ಮೂಲಕ ಭವಿಷ್ಯದ ಕನಸ್ಸು ನೆರವೇರಲಿ ಮೆಡಿಕಲ್ ಕೋರ್ಸ್ ಸಮರ್ಥವಾಗಿ ಅಭ್ಯಾಸಮಾಡಿ ಭವಿಷ್ಯದಲ್ಲಿ ಉತ್ತಮ ಡಾಕ್ಟರ್ ಆಗಲಿ ಎಂದು ಹಾರೈಸಿದರು
ಪತ್ರಕರ್ತರ ಚಿಕ್ಕಮ್ಮನಹಟ್ಟಿ ಮಂಜಣ್ಣ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಮೆಡಿಕಲ್ ,ಇಂಜಿನಿಯರ್ ನಂತಹ ಹುದ್ದೆಗಳಿಗೆ ಹೋಗುವುದು ಉತ್ತಮ ಬೆಳವಣಿಗೆಯಾಗಿದೆ ಇದರ ಜೊತೆಗೆ ಐ.ಎ.ಎಸ್.ಕೆ.ಎ.ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸುವ ಮೂಲಕ ಸಮಾಜಕ್ಕೆ ಅವರ ಸೇವೆ ಸಮಾಜಕ್ಕೆ ಸಿಗುವಂತಾಗಲಿ ಎಂದರು
ಡಿ.ಎಸ್.ಎಸ್.ಸಂಚಾಲಕ. ಮಲೆ ಮಾಚಿಕೆರೆ ಬಿ.ಸತೀಶ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿದಾನದಿಂದಲೇ ಇಂತಹ ಸ್ಥಾನಗಳು ಇಂದು ಎಲ್ಲಾ ವರ್ಗದ ಜನರಿಗೆ ಸಮಾನವಾಗಿ ಸಿಗಲು ಕಾರಣವಾಗಿದೆ ಭವಿಷ್ಯದ ಡಾಕ್ಟರ್ ,ಇಂಜಿನಿಯರ್ , ಶಿಕ್ಷಕರು ಸೇರಿದಂತೆ ಯಾವುದೇ ಹುದ್ದೆ ಪಡೆಯುವವರು ವೈಜ್ಞಾನಿಕವಾಗಿ ಆಲೋಚನೆ ಮತ್ತು ಸಾಮಾಜಿಕನ್ಯಾಯ ಎತ್ತಿಹಿಡಿಯುವಂತಾಗಬೇಕು ಆಗ ಮಾತ್ರ ಸಂವಿಧಾನಕ್ಕೆ ಗೌರವ ಸಿಗಲಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಉಪನ್ಯಾಸಕ ರಂಗಪ್ಪ ಮುಖಂಡರಾದ ಪಿ.ರೇವಣ್ಣ ,ಹೊನ್ನೂರು ಸ್ವಾಮಿ , ಧನ್ಯಕುಮಾರ್ , ತಿಪ್ಪೇಸ್ವಾಮಿ ,ಜೀವನ್ , ಸೇರಿದಂತೆ ಹಲವರು ಇದ್ದರು