ಜಗಳೂರು ಸುದ್ದಿ

shukradeshenews Kannada news | jlr online portal Kannada news

Byshukradeshe news Kannada august 30

54 ಸಾವಿರ ಕೋಟಿ ರೂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ನಮ್ಮ ಕಾಂಗ್ರೆಸ್ ಕೊಡುಗೆಯಾಗಿದೆ .  ರಾಜ್ಯಾದ್ಯಂತ ಏಕ ಕಾಲದಲ್ಲಿ ನಡೆಯುವ ಸರ್ಕಾರದ 4ನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ  ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪ ಚಾಲನೆ ನೀಡಿ ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರು ತಾಲ್ಲೂಕು ಆಡಳಿತ ಮತ್ತು ಪಪಂ ಇಲಾಖೆ ಮಹಿಳಾ ಅಭಿವೃದ್ಧಿ ಇಲಾಖೆಗಳ ವತಿಯಿಂದ ಬುಧವಾರ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನ ಹಾಗೂ ಗುರಭವನ ಮತ್ತು ಪಪಂ ಸಭಾ ಭವನದಲ್ಲಿ ಏರ್ಪಡಿಸಲಾಗಿದ   ಮಹತ್ವದ ಯೋಜನೆಯಾದ   ‘ಗೃಹಲಕ್ಷ್ಮಿ’ ಯೋಜನೆಯ ಉದ್ಗಾಟನೆ ಕಾರ್ಯಕ್ರಮದಲ್ಲಿ ಶಾಸಕರು ವಿದ್ಯುಕ್ತವಾಗಿ ದೀಪ ಬೆಳಗಿಸುವ ಮೂಲಕ  ಚಾಲನೆ ನೀಡಿ ನಂತರ  ಮೈಸೂರಿನಲ್ಲಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಕೇಂದ್ರ ವಕ್ತಾರರಾದ ಮಲ್ಲಿಕಾರ್ಜುನ ಖರ್ಗೆಯವರ ನೇತ್ರತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನ ಎಲ್ ಸಿ ಡಿ ಮೂಲಕ ವೀಕ್ಷಣೆ ನಡೆಸಿ ಸಭೆಯನ್ನುದ್ದೆಶಿಸಿ ಮಾತನಾಡಿದರು.

ನಮ್ಮ  ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಂತೆ ಇದೀಗ ಕ್ಷೇತ್ರದ ಪ್ರತಿ ಮನೆಗೆ ಅದೃಷ್ಟದ ಲಕ್ಷ್ಮಿ ಗೃಹ ಲಕ್ಷ್ಮಿ ಯೋಜನೆಡಿ ಮನೆ ಮನೆಯ ಯಜಮಾನಿ ಖಾತೆಗೆ ಹಣ ಸಂದಾಯವಾಗುವ ಸಂಭ್ರಮದ ದಿನವಾಗಿದೆ.ಸರ್ಕಾರದ 4 ನೇ ಯೋಜನೆ ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಕ್ಷೇತ್ರದಲ್ಲಿ ಈಗಾಗಲೇ ನೊಂದಾಣೆ ಮಾಡಿಕೊಂಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ  ಅಧಿಕೃತವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಹಾಗೂ ಕೇಂದ್ರ ವಕ್ತಾರರಾದ ರಾಹುಲ್ ಗಾಂಧಿ ಎಐಸಿಸಿ ಅದ್ಯಕ್ಷರಾದ ಮಲ್ಲಿಕಾರ್ಜನ್ ಮತ್ತು ಡಿ ಕೆ ಶಿವಕುಮಾರ್ ರವರ ಅಮೃತ ಅಸ್ತದಿಂದ ನೇರವಾಗಿ ಫಲಾನುಭವಿಗಳ ಖಾತೆಗೆ 2000 ಸಾವಿರ ಹಣ ಹಾಕುವ ಕಾರ್ಯಕ್ರಮವು ಇಂದು ಮೈಸೂರಿನಲ್ಲಿ ನಡೆಯುವ ಸಂಭ್ರಮ ಸಡಗರದ ದಿನವಾಗಿದೆ

.

ಜಗಳೂರು  ತಾಲ್ಲೂಕಿನಲ್ಲಿ 37 ಸಾವಿರ ಫಲಾನುಭವಿ ತಾಯಂದಿರು ಈ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ನೊಂದಾಣೆ ಮಾಡಿಕೊಂಡಿರುವ ಫಲಾನುಭವಿಗಳ ಪ್ರತಿ ಕುಟುಂಬದ ಯಜಮಾನಿಯರು ಈ ಸೌಲಭ್ಯ ಪಡೆಯಲಿದ್ದಾರೆ.

ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ  ಈ  ಯೋಜನೆ ಮಹಿಳೆಯರ ಸ್ವಾಲಂಭಿ ಬದುಕಿಗೆ ರೂಪಿಸಿದ ಯೋಜನೆಯಾಗಿದೆ .ಮಹಿಳೆಯರು ಇಂತ ಭಾಗ್ಯದ ಯೋಜನೆ ಸೌಲಭ್ಯಗಳನ್ನು ಸದುಪಯೋ ಪಡೆದುಕೊಂಡು ಸರ್ಕಾರದ ಜೊತೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.ನಾನು ಕ್ಷೇತ್ರದ ಶಾಸಕನಾಗಿ ತಮ್ಮ  ದುಖ ದುಮ್ಮಾನಗಳಿಗೆ ಸದಾ ಸ್ವಂದಿಸಿ ಕೆಲಸ ಮಾಡುವ ನಿಟ್ಟಿನಲ್ಲಿ ತಮ್ಮ ಅಗತ್ಯ ಸೇವೆಗಳನ್ನು ಒದಗಿಸುವೆ ಎಂದು ಭರವಸೆ ನೀಡಿದರು. 

 

 ಸರ್ಕಾರದ  ಐದು ಗ್ಯಾರಂಟಿ ಯೋಜನೆಗಳಾದ. ಉಚಿತ ಬಸ್ ಪ್ರಯಾಣ ಅನ್ನಭಾಗ್ಯ, ಗೃಹಜ್ಯೋತಿ . ಗೃಹಲಕ್ಷ್ಮಿ ಯೋಜನೆಗಳು ವರದಾನವಾಗಿದ್ದು ಪ್ರಸ್ತುತದಲ್ಲಿ ಜನರ ಅಗತ್ಯ ವಸ್ತಗಳು ದುಬಾರಿಯಾಗಿರುವ ಹೊತ್ತಿನಲ್ಲಿ   ಪ್ರತಿ ಕುಟುಂಬಗಳಿಗೆ ಈ ಯೋಜನೆಗಳಿಂದ  ಅತ್ಯಂತ  ಸಹಕಾರಿಯಾಗುವುದು   ಎಂದು ಅಭಿಪ್ರಾಯ ವ್ಯಕ್ತಪಡಿಸಿದರು..

ಗೃಹ ಲಕ್ಷ್ಮಿ ಯೋಜನೆ ಪ್ರತಿ ಫಲಾನುಭವಿಗಳಿಗೆ ಶುಭಾ ಕೋರಿದರು ಈ ಸಂದರ್ಭದಲ್ಲಿ ಮಹಿಳಾ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರಶಂಸೆಪಟ್ಟರು

ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ನಮ್ಮ ಪಕ್ಷದ  ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಕೆಪಿಸಿಸಿ ರಾಜ್ಯದ್ಯಕ್ಷರಾದ ಡಿ ಕೆ ಶಿವಕುಮಾರ ಮತ್ತು ಕೇಂದ್ರ ವರಿಷ್ಠರು ದೂರ ದೃಷ್ಠಿ ಚಿಂತನೆ ಮೇರೆಗೆ  ಜನಪರವಾದ ಯೋಜನೆಗಳನ್ನು ಜಾರಿಗೆ ತರಲು ಸಹಕಾರ ನೀಡಿ ಇದೀಗ ರಾಜ್ಯಾದ್ಯಂತ ಏಕ ಕಾಲದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂತ ಬೃಹತ್ ಯೋಜನೆಗಳು ನಾಡಿನ ಜನರ ಮನೆ ಬಾಗಿಲಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಒದಗಿಸುವ ಮಹತ್ವದ ಕಾರ್ಯವಾಗಿದೆ..ಕೇಂದ್ರ ಸರ್ಕಾರ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸೆತ್ತುಹೋದ ಜನತೆಗೆ ನಮ್ಮ ಪಕ್ಷದ ಸರ್ಕಾರದ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಸಹಕಾರಿಯಾಗಿವೆ ಎಂದು ಹೇಳಿದರು.

ತಹಶೀಲ್ದಾರ್ ಅರುಣ್ ಕಾರಗಿ ಮಾತನಾಡಿ,ತಾಲೂಕಿನಲ್ಲಿ 42000 ಬಿಪಿಎಲ್ ಕಾರ್ಡ್ ದಾರ ಫಲಾನುಭವಿಗಳಿದ್ದು ಶೇ.87 ರಷ್ಟು ಮಹಿಳೆಯರು ನೊಂದಣಿ ಮಾಡಿಕೊಂಡಿರುವ ಫಲಾನುಭವಿಗಳಿಗೆ ಈ 2೦0೦ ಸಾವಿರ ಹಣ ಸಂದಾಯವಾಗಲಿದೆ.  ಇನ್ನುಳಿದವರು ಶೀಘ್ರ ಆನ್ ಲೈನ್ ನೊಂದಣೆ ಮಾಡಿಕೊಳ್ಳುವ ಮೂಲಕ ಈ ಸೌಲಭ್ಯ ಪಡೆಯುವಂತೆ ತಿಳಿಸಿದರು. 

ಸಂದರ್ಭದಲ್ಲಿ ಪಪಂ ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ್. ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಸಿಡಿಪಿಓ ಇಲಾಖೆ ಅಧಿಕಾರಿ ಬೀರೆಂದ್ರಕುಮಾರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಲಲಿತಮ್ಮ,ಮಂಜಮ್ಮ,ದೇವರಾಜ್,ಲುಕ್ಮಾನ್ ಖಾನ್,ಶಕೀಲ್ ಅಹಮ್ಮದ್,ಪಾಪಲಿಂಗಪ್ಪ,ಮುಖಂಡರಾದ ಸಿ.ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ಪ್ರಕಾಶ್ ರೆಡ್ಡಿ,ಮಂಜುನಾಥ್,ಮಹಮ್ಮದ್ ಅಲಿ ಮುಖಂಡರಾದ ಪ್ರಕಾಶ್ವರೆಡ್ಡಿ.ಗುರುಮೂರ್ತಿ.ಪಪಂ ನಾಮನಿರ್ದೇಶಿತ ಸದಸ್ಯರಾದ ಸಣ್ಣ ತಾನಾಜಿ ಗೋಸಾಯಿ ,ಸೇರಿದಂತೆ ಮುಂತಾದವರು ಇದ್ದರು.

.

Leave a Reply

Your email address will not be published. Required fields are marked *

You missed

error: Content is protected !!