ಮುಂದಿನ ದಿನಗಳಲ್ಲಿ 57 ಕೆರೆ ತುಂಬಿಸುವ ಯೋಜನೆಯಿಂದ  ಮತ್ತೂಷ್ಟು ಮೀನು ಕೃಷಿ ಅಭಿವೃದ್ಧಿ ಸಾದ್ಯವಾಗಲಿದೆ.ಎಂದು ಸಂಗೇನಹಳ್ಳಿ ಕೆರೆಗೆ ಮೀನು ಬಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ  ಶಾಸಕ ಬಿ ದೇವೆಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Editor m rajappa vyasagondanahalli

By shukradeshenews Kannada | online news portal |Kannada news online  

By shukradeshenews | published on September 11

ಕೇಂದ್ರ ಪ್ರಧಾನ ಮಂತ್ರಿ ಮತ್ಸ್ಯಯೋಜನೆಡಿಯಲ್ಲಿ ಮೀನಗಾರಿಕೆ ಇಲಾಖೆ ಸಹಕಾರ ಸಂಘಗಳ ನೇತೃತ್ವದಲ್ಲಿ ಸೋಮವಾರ ಮೀನುಗಾರರ ಮೀನು ಉತ್ಪಾದನೆ  ಕಾರ್ಯಗಾರ ಮತ್ತು ಸಂಗೇನಹಳ್ಳಿ ಕೆರೆಗೆ ಮೀನು ಮರಿ ಬಿಡುವ ಕಾರ್ಯಕ್ರಮದಲ್ಲಿ ಶಾಸಕ ಬಿ ದೇವೆಂದ್ರಪ್ಪ ಭಾಗವಹಿಸಿ ಅವರು ಮಾತನಾಡಿದರು 

ಜಗಳೂರು ತಾಲ್ಲೂಕಿನ ಐತಿಹಾಸಿಕ ಸಂಗೇನಹಳ್ಳಿ ಕೆರೆಯನ್ನ ಅಂದಿನ ಮೈಸೂರು ಆಡಳಿತದ ಅವಧಿಯಲ್ಲಿ ದಿವಾನರಾಗಿದ್ದ ಇಮಾಮ್ ಸಾಹೇಬರು ಕಟ್ಟಿಸಿದ ಕೆರೆಗೆ ನಾನು ಶಾಸಕನಾಗಿ ಅಯ್ಕೆಯಾಗಿ ಇದೆ ಮೊದಲ ಬಾರಿಗೆ ಕೆರೆಗೆ

ನಾಲ್ಕು ಲಕ್ಷ ಮಿನು ಮರಿ ಬಿಡುವ ಕಾರ್ಯಕ್ರಮ ಹಾಗೂ ಮೀನುಗಾರರ ಗಾರ್ಯಗಾರದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷವಾಗಿದೆ.    ತಾಲ್ಲೂಕಿನ ಕೆರೆಗಳು ಕಳೆದ ಬಾರಿ ಬಿದ್ದ ಮಳೆಗೆ ಕೆರೆ ತುಂಬಿರುವುದರಿಂದ ಮೀನು ಕೃಷಿ ಹೆಚ್ಚಾಗಿದೆ.ಇನ್ನು 

ಮುಂದಿನ ದಿನಗಳಲ್ಲಿ 57 ಕೆರೆ ತುಂಬಿಸುವ ಯೋಜನೆಯಿಂದ ಮತ್ತೂಷ್ಟು ಮೀನು ಕೃಷಿ ಅಭಿವೃದ್ಧಿ ಸಾದ್ಯವಾಗಲಿದೆ .ಸಂಗೇನಹಳ್ಳಿ ಕೆರೆ 57 ಕೆರೆ ತುಂಬಿಸುವ ಯೋಜನೆಯಲ್ಲಿಲ್ಲ ಬದಲಾಗಿ ಮತ್ತೊಂದು ಮಹತ್ವದ ಅಪರ್ ಭದ್ರಾ ಯೋಜನೆಯಲ್ಲಿ ನೀರು ತುಂಬಿಸಲಾಗುವುದು .

.

ತಾಲ್ಲೂಕಿನ ಗಂಗಾ ಮತಸ್ತ ಸಮಾಜ ಹಾಗೂ ಗೋಸಾಯಿ ಜನಾಂಗದವರು ಮೀನು ಹಿಡಿಯವ ವೃತ್ತಿಯಲ್ಲಿಯೆ ತಮ್ಮ ಬದುಕುನ್ನು ಕಟ್ಟಿಕೊಂಡಿದ್ದಾರೆ.ತಾವುಗಳು ತಮ್ಮ ಮಕ್ಕಳಿಗೆ ಕೇವಲ ಮೀನು ತಿನ್ನುವುದು ಕಲಿಸಿದರೆ ಸಾಲದು ಮೀನು ಹಿಡಿಯುವುದನ್ನ ಕಲಿಸಬೇಕು . ಈ ವತ್ತಿಯಿಂದ ನಿಮ್ಮ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ.  ಮೀನಿನ ಅಹಾರ ಸದೃಡ ಆರೋಗ್ಯಕ್ಕೆ ಅತ್ಯಂತ ಉಪಯೋಗವಾಗುವುದು.. ಮಂಗಳೂರು ಬಾಗದ ಜನರು ಅತಿ ಹೆಚ್ಚಾಗಿ ಮೀನಿನ ಮಾಂಸದ ಆಹಾರ ಸೇವಿಸುವುದರಿಂದ ಬುದ್ದಿವಂತರ ನಾಡು ಎಂದೆ ಖ್ಯಾತಿಯಾಗಿದೆ .ಇಲಾಖೆ ಅಧಿಕಾರಿಗಳು ಮೀನುಗಾರರಿಗೆ ಸಿಗುವ   ಸರ್ಕಾರಿ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಒದಗಿಸಿ ಕೊಡುವಂತೆ ಸೂಚನೆ ನೀಡಿದರು .

ಮೀನುಗಾರಿಕೆ ಇಲಾಖೆ ಜಿಲ್ಲಾ ಉಪಾ ನಿರ್ದೇಶಕ ಅಣ್ಣಪ್ಪಸ್ವಾಮಿ ಮಾತನಾಡಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಮಿನಾಗಾರರ ಕುಟುಂಬಗಳಿಗೆ ಮತ್ತು ಸಹಕಾರ ಸಂಘದ ಮೂಲಕ ಪ್ರತಿ ವರ್ಷ ಕಿಸಾನ್ ಕ್ರಡಿಟ್ ಕಾರ್ಡ ವಿತರಿಸಲಾಗುವುದು.

ಮೀನಾಗಾರರು ಸಹಕಾರ ಸಂಘದ ಸದಸ್ಯರುಗಳಿಗೆ  ಲೀಡ್ ಬ್ಯಾಂಕ್  ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು .ಮೀನುಗಾರರಿಗೆ ವಸತಿ ಯೋಜನೆ ಟು ವಿಲ್ ರ್ ಬೈಕ್ ವಿತರಣೆ ಹಾಗೂ ಕೃಷಿ ಹೊಂಡಗಳಲ್ಲಿ  ಮೀನು ಸಾಕಣಿದಾರರಿಗೆ ಮೀನು ಮರಿ ವಿತರಣೆ ಮತ್ತು ಮೀನು ಹಿಡಿಯುವವರಿಗೆ ಮಿನು ಬಲೆ ನೀಡಲಾಗುವುದು.ಎಂದು ಇಲಾಖೆ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ .ಪಪಂ ಸದಸ್ಯ ರಮೇಶ್ ರೆಡ್ಡಿ .ಮಾಜಿ ತಾಪಂ ಅದ್ಯಕ್ಷ ಸಣ್ಣಸೂರಜ್ಜ.ಪಪಂ ನಾಮನಿರ್ದೇಶಿತ ಸದಸ್ಯರಾದ ಸಣ್ಣತಾನಜಿ ಗೊಸಾಯಿ.ಕುರಿ ಜೈಯಣ್ಣ.ಗ್ರಾಪಂ ಸದಸ್ಯ ಅನೂಪರೆಡ್ಡಿ..ಸಹಾಯಕ ಮೀನುಗಾರಿಕೆ ಇಲಾಖೆ ನಿರ್ದೇಶಕ ಮಂಜುನಾಥ. ಮಹಮದ್ ಆಲಿ.ಪ್ರಕಾಶ.ಗೋಪಿ.ಮಹಮದ್ ಗೌಸ್..ಜೈಯಣ್ಣ.ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ..ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!