By shukradeshenews Kannada | online news portal |Kannada news online  September 11

By shukradeshenews | published on September 11

   ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ನಂಬಿ ಬಂದವರಿಗೆ ಸೇರ್ಪಡೆ ಮಾಡಿಕೊಳ್ಳುವೆ ಅದರೆ  ಈ ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ ದ್ರೋಹ ‌ಮಾಡಿದಂತೆ ಪಕ್ಷದ್ರೋಹ ಮಾಡಿದರೆ ನಾನು ಸಹಿಸುವುದಿಲ್ಲ ಶಾಸಕ ಬಿ ದೇವೆಂದ್ರಪ್ಪ.

ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿಯಲ್ಲಿ  ಪಕ್ಷ ತೊರೆದವರು  ಕಾಂಗ್ರೆಸ್ ಪಕ್ಷ ಮರು ಸೇರ್ಪಡೆ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಭಾವುಟ ನೀಡುವ ಮೂಲಕ  ಅವರು ಮಾತನಾಡಿದರು.

ಈ ಹಿಂದೆ  ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಬಿಟ್ಟು ಪಕ್ಷತೇರ ಅಭ್ಯರ್ಥಿ ಪರ ಬೆಂಬಲಿಸಿ  ಪುನ ಪರಿವರ್ತನೆಗೊಂಡು ಇದೀಗ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರಿಗೆ ಶಾಸಕರು ಕಡಕ್ ಆಗಿ ಸೂಚನೆ ನೀಡಿದರು. 

 .

ಕಾಂಗ್ರೆಸ್  ಪಕ್ಷ ನಂಬಿದರೆ ಕೈಬಿಡಲ್ಲ ನಾನು ಪಕ್ಷದ ಚಿಹ್ನೆ ನಂಬಿ ಗೆದ್ದಿರುವೆ     

ಪಕ್ಷ ಬಿಟ್ಟು ಹೋದವರೆಲ್ಲಾ ಜೀರೊ ಸ್ಥಿತಿಗೆ ಬಂದು ಪುನ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರ್ಪಡೆಯಾಗುತ್ತಿರುವುದು ಸಂತೋಷದ ಸಂಗತಿ ಆದರೆ.

ನಾವು ಯಾರು ಪಕ್ಷಕ್ಕೆ ಅನಿವಾರ್ಯವಲ್ಲ ನಾವು ಪಕ್ಷಕ್ಕೆ ಅನಿವಾರ್ಯ  ಕಾಂಗ್ರೆಸ್ ಪಕ್ಷ ರಭಸವಾಗಿ ಹರಿಯುವಂತ ಸಾಗರವಿದ್ದಂತೆ  ಪಕ್ಷದ ವಿರುದ್ದ ಹೋಗಿ ವಿಧಾನ ಸಬಾ ಚುನಾವಣೆಯಲ್ಲಿ ಸ್ವರ್ಧೆ ಮಾಡಿದರೆ ಯಶಸ್ಸು ಸಿಗಲಾರದು . ನನ್ನ ವಿರುದ್ದ ಬಂಡಾಯ ಅಭ್ಯರ್ಥಿಯಾಗಿರುವುದು ನನಗೆ ಬೇಜಾರು ಇಲ್ಲ  ಕೆಲವರು ನನ್ನ ಮೇಲೆ ಮತ್ತು ನನ್ನ ಸ್ವಾಭಿಮಾನಿಗೆ ದಕ್ಕೆಯಂಟು ಮಾಡಿ ಕೆಲ ವಿರೋಧಿಗಳು  ರೌಡಿ ಪಟ್ಟ ಕಟ್ಟಿದ್ದರಿಂದ ಬಹಳ  ಬೇಜಾರಾಗಿತ್ತು.

  • ಜಗಳೂರು ಕ್ಷೇತ್ರದಲ್ಲಿ  ಈ ಹಿಂದೆ ಆಡಳಿತ ನಡೆಸಿದವರು  ಯಾರು ಕೂಡ ಕಂಡರಿಯದ ಈ ರೀತಿ ಕೀಳು ಮಟ್ಟದ ರಾಜಕಾರಣ ಮಾಡಿರಲಿಲ್ಲ ಆದರೆ 

ಮೊನ್ನೆ  ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಲವರು ನನ್ನ ವಿರುದ್ದ ಕೀಳು ಮಟ್ಟದ ರಾಜಕಾರಣ ಮಾಡಿ ನನ್ನ ಮುಂದೆ ಜಿರೋ ಸ್ಥಿತಿಗೆ ತಲುಪಿರುವುದು ಸತ್ಯ ಕಣ್ಮಂದೆಯಿದೆ.

  •  ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಜನರು ಬೇಕಾದರು ಬಂದು ಸೇರ್ಪಡೆಯಾಗಲಿ ಆದರೆ ಪ್ರಮಾಣಿಕ ನಿಷ್ಟೆರಲಿ ಕಾಂಗ್ರೆಸ್ ತಾಯಿ ಸೇವೆ ಮಾಡುತ್ತೆವೆ ಎಂದು ಬರಲಿ ಆದರೆ ಹಳೆ ಕಥೆ ನನ್ನ ಅತ್ತಿರ ನಡೆಯುವುದಿಲ್ಲ  ಎಂದು ನೂತನವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಸೂಚ್ಯವಾಗಿ ತಿರುಗೇಟು ನೀಡಿದರು.
  • ನಮ್ಮ ಕಣ್ಮುಂದೆ ಸವಾಲುಗಳಿವೆ ದೇಶದಲ್ಲಿ ಸಂವಿಧಾನ ಉಳಿವಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಆದ್ದರಿಂದ   
  • ಮುಂಬರುವ ಲೋಕಸಬಾ.ಹಾಗೂ ಜಿಪಂ ತಾಪಂ   .ಚುನಾವಣೆ ಹಿನ್ನೆಲೆಯಲ್ಲಿ  
  • ಕಾಂಗ್ರೆಸ್ ಶಕ್ತಿ ಬಲಪಡಿಸಲು ಕಂಕಣಬದ್ದರಾಗುವಂತೆ ತಿಳಿಸಿದರು. 

ಕೆ.ಪಿ.ಪಾಲಯ್ಯ ತ್ಯಾಗಮಯಿ ಶಿಸ್ತಿನ ಸಿಪಾಯಿ:ಕಾಂಗ್ರೆಸ್ ಪಕ್ಷದಿಂದ ಮೂರು ಜನ ಆಕಾಂಕ್ಷಿಗಳಿದ್ದೆವು.ಜೊತೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಟಿಕೇಟ್ ಗೆ ಪೈಪೋಟಿ ನಡೆಯಿತು.ಆದರೆ ಅದೃಷ್ಠ ಶ್ರಮದ ಫಲವಾಗಿ ನನಗೆ ಬಿಫಾರಂ ನೀಡಿದರು.ಎಲ್ಲರೂ ಪಕ್ಷ ತೊರೆದು ಹೋದರೂ ಕೆ.ಪಿ.ಪಾಲಯ್ಯ ಅವರು ತ್ಯಾಗಮಯಿಯಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅವಿರತ ಶ್ರಮವಹಿಸಿದರು.ನಿಜಕ್ಕೂ ಚಿರ ಋಣಿಯಾಗಿರುವೆ ಎಂದು ಪ್ರಶಂಸಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ,ಷರತ್ತುರಹಿತವಾಗಿ ಪಕ್ಕಕ್ಕೆ ಮರು ಸೇರ್ಪಡೆಗೊಂಡಿರುವ ಕಾರ್ಯಕರ್ತರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿ.ತಮ್ಮ ಸ್ವಾರ್ಥಕ್ಕಾಗಿ ದ್ರೋಹ ಮಾಡದೆ ಪಕ್ಷ ನಿಷ್ಠೆಯಿಂದ ಆಗಮಿಸುವವರಿಗೆ ಆಹ್ವಾನವಿದೆ.ಆಂತರಿಕ ವೈಮನಸ್ಸು ತೊರೆದು ಸಲಹೆ ಸಹಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ತಾಲೂಕಿನಲ್ಲಿ ಕೆಲ ಹಿರಿಯರು ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಪಡೆದಿದ್ದರೂ ಸಹ ತಾತ್ಕಾಲಿಕವಾಗಿ  ಚುನಾವಣೆಯಲ್ಲಿ ವ್ಯಕ್ತಿಗತವಾಗಿ ಬೆಂಬಲಿಸಲು ಪಕ್ಷೇತರ ಅಭ್ಯರ್ಥಿ ಪರವಾಗಿ ಪಕ್ಷ ತೊರೆದು ತೆರಳಿದ್ದರು.ಇದೀಗ ಮರುಸೇರ್ಪಡೆ ಸಂತಸ ತಂದಿದೆ ಮುಂದಿನ ಲೋಕಸಭಾ,ಜಿ.ಪಂ.ತಾ.ಪಂ‌ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಕಲ್ಪಗೈಯಬೇಕು ಎಂದು ಕರೆ ನೀಡಿದರು.

ಇದೆ ವೇಳೆ ಜಿ.ಪಂ‌ ಮಾಜಿ ಸದಸ್ಯ ಎಸ್.ಕೆ. ರಾಮರೆಡ್ಡಿ,ತಾ.ಪಂ‌.ಮಾಜಿ ಸದಸ್ಯ ಚಿತ್ತಪ್ಪ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಪ್ರಹ್ಲಾದ್ ರೆಡ್ಡಿ,ಹುಚ್ಚವ್ವನಹಳ್ಳಿ ನಾಗರಾಜ್,ಸೇರಿದಂತೆ ವಿವಿಧ ಕಾರ್ಯಕರ್ತರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಪ.ಪಂ‌ ಸದಸ್ಯರಾದ ರಮೇಶ್ ರೆಡ್ಡಿ,ರವಿಕುಮಾರ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ,ತಿಮ್ಮಾರೆಡ್ಡಿ,ಷಂಷುದ್ದೀನ್,ಮಾಳಮ್ಮನಹಳ್ಳಿ ವೆಂಕಟೇಶ್,ಪ್ರಕಾಶ್ ರೆಡ್ಡಿ,ವಿಜಯ್ ಕೆಂಚೋಳ್,ಅನೂಪ್ ರೆಡ್ಡಿ,ಬಸವನಗೌಡ,ಗೌಸ್ ಪೀರ್,ನಾಗರಾಜ್,ಶಿವಣ್ಣ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!