Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 11
ಜಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ K T ಕರಿಬಸಪ್ಪ. ಅಧಿಕಾರ ಸ್ವೀಕಾರ
ಈ ಹಿಂದೆ ನ್ಯಾಮತಿ ತಾಲ್ಲೂಕು ಪಂಚಾಯತ್ ಇಓ ಆಗಿ ಕಾರ್ಯನಿರ್ವಹಿಸಿ ಮತ್ತು ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಸೇವೆ ಸಲ್ಲಿಸಿ ಇದೀಗ ಸರ್ಕಾರಿ ಆದೇಶದಂತೆ ಜಗಳೂರು ತಾಪಂ ಕಛೇರಿಯಲ್ಲಿ ಪ್ರಭಾರೆ ಇಓ ಅಧಿಕಾರಿಯಾಗಿ ಕೆ ಟಿ ಕರಿಬಸಪ್ಪ ಸೋಮವಾರ ತಾಪಂ ಕಛೇರಿಯಲ್ಲಿ ಅಧಿಕಾರ ಸ್ವಿಕಾರ ಮಾಡಿಕೊಂಡಿದ್ದಾರೆ.ಈ ಹಿಂದೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ವೈ ಎಚ್ ಚಂದ್ರಶೇಖರ್ ರವರು ಮೂಲ ಸ್ಥಾನವಾದ ನರೇಗಾ ಸಹಾಯಕ ನಿರ್ದೇಶಕರಾಗಿ ಸೇವೆಯಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ನೂತನವಾಗಿ ತಾಪಂ ಇಓ ಆಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ಪ್ರಭಾರ ಇಓ ಕೆ ಟಿ ಕರಿಬಸಪ್ಪ ರವರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ವಾಗತ ಕೋರಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಣಬೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಒಬಯ್ಯ.ಹಿರೆಮಲ್ಲನಹೊಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅರವಿಂದ್.ಅಭಿವೃದ್ಧಿ ಅಧಿಕಾರಿ ಕೊಟ್ರೇಶ್.ಅಭಿವೃದ್ಧಿ ಅಧಿಕಾರಿ ವಾಸು .ಕಛೇರಿ ಸಿಬ್ಬಂದಿಗಳಾದ ಚೌಡಪ್ಪ.ನಂದೀಶ್. ಸೇರಿದಂತೆ ಹಾಜರಿದ್ದರು.