ಜಗಳೂರು ಕ್ರೀಡಾಂಗಣಕ್ಕೆ ಕ್ರೀಡಾ ಸಚಿವರಿಂದ ಅನುದಾನ ಕಲ್ಪಿಸಿ ಸ್ಟೇಡಿಯಂ ಸುತ್ತ ಕಾಪೌಂಡ್ ಹಾಗೂ ಸಿಂಥಿಟಿಕ್ ಟ್ರ್ಯಾಕ್ .ಈಜು ಕೊಳ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಾದರಿ ಕ್ರೀಡಾಂಗಣವನ್ನಾಗಿ ಮಾಡಲಾಗುವುದು ಶಾಸಕ ಬಿ ದೇವೆಂದ್ರಪ್ಪ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 19 .
ಪಟ್ಟಣದ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಕೂಟ ಉದ್ಗಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಕ್ರೀಡೆಗೆ ಜಾತಿ ಬೇದ ಲಿಂಗ ತಾರತಮ್ಯವಿಲ್ಲ ಸದೃಡ ಆರೋಗ್ಯವಂತ ಸಮಾಜದಿಂದ ದೇಶದ ಪ್ರಗತಿ ಈಗಿನ ಮಕ್ಕಳೆ ಮುಂದಿನ ಪ್ರಜೆಗಳಾಗಿದ್ದು ಉತ್ತಮ ಪ್ರತಿಭೆಗಳಿಂದ ದೇಶಕ್ಕೆ ಉನ್ನತ ಕೀರ್ತಿ ಗಲುಸಲು ಸಾದ್ಯ ಎಂದು ಕ್ರೀಡಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ಜಗಳೂರಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಮಾಜಿ ಶಾಸಕ ಟಿ ಗುರುಸಿದ್ದನಗೌಡ ಶ್ರಮವಿದೆ ಎಂದು ಸ್ಮರಿಸಿದರು.
ತೀರ್ಪುಗಾರರು ಉತ್ತಮ ತೀರ್ಪು ನೀಡಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗಳಿಗೆ ಲೋಪವಾಗದಂತೆ ತೀರ್ಪು ನೀಡಿ ಎಂದು ಕಿವಿ ಮಾತು ಹೇಳಿದರು.
ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಸ್ಟೊಡೆಂಟ್ ಲೈಪ್ ಈಸ್ ಗೋಲ್ಡನ್ ಲೈಪ್ ಎನ್ನುವ ರೀತಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಸಾಧನೆಯಿರುತ್ತದೆ. ಯುವ ಸಮುದಾಯ ದುಶ್ಚಟಗಳಿಂದ ದೂರ ಇದ್ದು ಉತ್ತಮ ಸಾಧಕರಾಗಿ ಯುವಶಕ್ತಿಯನ್ನ ಸಾರ್ಥಕಪಡಿಸಿಕೊಳ್ಳುವಂತೆ ಸಲಹೇ ನೀಡಿದರು .
ದಾವಣಗೆರೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪಾ ನಿರ್ದೇಶಕ ಕರಿಸಿದ್ದಪ್ಪ.
ಉತ್ತಮ ಶಿಕ್ಷಣ ಮತ್ತು ಕ್ರೀಡಾ ವ್ಯವಸ್ಥೆಯನ್ನ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುವ ಜವಾಬ್ದಾರಿದೆ ನಮ್ಮಲ್ಲರ ಹೊಣೆಯಾಗಿದ್ದು
ಕ್ರೀಡಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಬೌದ್ದಿಕ ವಿಕಾಸನಗೊಳ್ಳುವ ಮೂಲಕ ಯುವ ಪ್ರತಿಭೆಗಳಿಂದ ರಾಷ್ಟ್ರದ ಪ್ರಗತಿ ಅಡಗಿದೆ. ಪ್ರಪಂಚದಲ್ಲಯೆ ಯಾರು ಖದಿಯದ ವಸ್ತು ಶಿಕ್ಷಣದ ಬುದ್ದಿಶಕ್ತಿ ಮುಂದೆ ಯಾವುದು ಇಲ್ಲ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಸಲಹೇ ನೀಡಿದರು.
ಕ್ರೀಡಾರ್ಥಿಗಳಿಗೆ ಶಾಸಕರು ವಯಕ್ತಿಕವಾಗಿ . 10.೦0೦ ಸಾವಿರ ಪ್ರೋತ್ಸಾಹ ಧನ ನೀಡಿದರು ನಂತರ ಉಪಾನ್ಯಾಸಕ ಎ ಎಲ್ ಟಿ ತಿಪ್ಪೇಸ್ವಾಮಿರವರು 10 ಸಾವಿರ ಪ್ರೋತ್ಸಾಹ ನೀಡಿದರು..
ಈ ಸಂದರ್ಭದಲ್ಲಿ ಸಿಪಿಐ ಶ್ರೀನಿವಾಸ್ ರಾವ್.ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್. ಬಿಇಓ ಹಾಲಮೂರ್ತಿ.ಉಪನ್ಯಾಸಕ ತಿಪ್ಪೇಸ್ವಾಮಿ. ಪಪಂ ಸದಸ್ಯ ರಮೇಶ್ ರೆಡ್ಡಿ.ಪಪಂ ನಾಮನಿರ್ದೇಶಿತ ಸದಸ್ಯರಾದ ಸಣ್ಣ ತಾನಜಿ ಗೋಸಾಯಿ.ಕುರಿ ಜೈಯಣ್ಣ. ಮುಖಂಡ ಹೊಮಣ್ಣ.ಚಿತ್ತಪ್ಪ.ಪ್ರಾಂಶುಪಾಲರಾದ ಮದ್ದಾಪ್ಪ.ಬಸವರಾಜ.ಷಂಷುದ್ದಿನ್.ಉಪನ್ಯಾಸಕ ಮಂಜುನಾಥರೆಡ್ಡಿ. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಮುಖಂಡ ಮಹಮದ್ ಗೌಸ್.ಸೇರಿದಂತೆ ಹಾಜರಿದ್ದರು