ಸಹಕಾರ ಸಂಘದ ಕಾರ್ಯಧರ್ಶಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ    ಕಾನೂನು ಬಾಹಿರವಾಗಿ ಆಯ್ಕೆ ಮಾಡಿರುವುದು ಖಂಡನೀಯ ದಲಿತ ಸೇವಾ ನೌಕರ ಎ  ಟಿ ತಿಪ್ಪೇಸ್ವಾಮಿ ಹಾಗೂ ಎಮ್ ಅರ್ ತಿಪ್ಪೇಸ್ವಾಮಿ ಎಂಬ ಇಬ್ಬರು ನೌಕರರುನ್ನು  ಆಯ್ಕೆ ಮಾಡುವಂತೆ   ತಹಶೀಲ್ದಾರರವರಿಗೆ ಮನವಿ ಸಲ್ಲಿಸಿ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 20. Jlr news

ಜಗಳೂರು:ತಾಲ್ಲೂಕಿನ ದೋಣಿಹಳ್ಳಿ  ಕೃಷಿ ಪತ್ತಿನ ಸಹಕಾರ ಸಂಘಗಳ ನೇಮಕಾತಿ ಪ್ರಕ್ರಿಯೆಯನ್ನೆ ಗಾಳಿಗೆ ತೂರಿ  ಪಾರದರ್ಶಕತೆ ಮರೆತ  ದೋಣಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ  ಹಾಲಿ ಅದ್ಯಕ್ಷ ವೀರೆಶ್   ಮತ್ತು  ಆಡಳಿತ ಮಂಡಳಿಯವರ ನಡೆ ಸರಿಯಲ್ಲ  ಸಹಕಾರ ಬ್ಯಾಂಕ್  ಕಾರ್ಯಧರ್ಶಿ ಹುದ್ದೆಗೆ ತನ್ನ ಪುತ್ರ ಎಸ್ ವಿ ಮನೋಜ್ ಎಂಬುವರುನ್ನು  ಆಯ್ಕೆ ಮಾಡಿ ತನ್ನ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಆಸೆಬುರುಕುತನ ಪ್ರಧರ್ಶಿಸಿದ್ದಾರೆ.  ದಲಿತ ಸಮುದಾಯದ ಹಾಲಿ ಕಾರ್ಯನಿರ್ವಹಿಸುವ ಅದೆ ಭ್ಯಾಂಕ್ ನ ಆಟೆಂಡರ್ .ಡಿ ಗ್ರೂಪ್ ನೌಕರನಾದ  ಎ . ಟಿ ತಿಪ್ಪೇಸ್ವಾಮಿ ಮತ್ತು ಎಂ .ಆರ್ ತಿಪ್ಪೇಸ್ವಾಮಿಯವರಿಗೆ ಅನ್ಯಾಯ ವೆಸಗಲಾಗಿದೆ.ಈ  ಅನ್ಯಾಯವನ್ನ ಖಂಡಿಸಿ ಬುಧವಾರ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ತಾಲ್ಲೂಕು ಉಪಾ ತಹಶೀಲ್ದಾರ್ ಮಂಜಾನಂದರವರಿಗೆ  ಮನವಿ ಸಲ್ಲಿಸಿ ನೀಯಮ ಉಲ್ಲಂಘನೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 

  ಜಗಳೂರು ತಾಲ್ಲೂಕು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಛೇರಿಯವರೆಗೆ ಪ್ರತಿಭಟನಾಕಾರರು ಬೃಹತ್ ಪ್ರತಿಭಟನೆ ನಡೆಸಿ ದೋಣಿಹಳ್ಳಿ ಕೃಷಿ ಪತ್ತಿನ  ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿ ವಿರುದ್ದ ಘೊಷಣೆ ಕೂಗಿ ನೀಯಮ ಬಾಹಿರವಾಗಿ ನೇಮಕ ಮಾಡಿರುವ  ಕಾರ್ಯಧರ್ಶಿ ಹುದ್ದೆಯಿಂದ ವಜಾಗೋಳಿಸಿ ನೀಯನುಸಾರ ಸುಮಾರು 30 ವರ್ಷಗಳಿಂದ ಡಿ ಗ್ರೂಪ್ ನೌಕರರಾಗಿ ಸೇವೆ ಮಾಡಿಕೊಂಡು ಬಂದಿರುವಂತ ಎ.ಟಿ. ತಿಪ್ಪೇಸ್ವಾಮಿ.ಎಂ ಆರ್ ತಿಪ್ಪೇಸ್ವಾಮಿ ದಲಿತ ನೌಕರರುನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಸೇವಾ ಹಿರಿತನ ಪರಿಗಣಿಸದೆ  ಈ ಇಬ್ಬರು ನೌಕರರಿಗೆ ಮಾಡಿರುವ ಘನಘೋರ ಅನ್ಯಾಯವಾಗಿದೆ ಎಂದು ಪ್ರಗತಿಪರ ಮುಖಂಡ ವಕೀಲರಾದ  ಆರ್ ಒಬಳೇಶ್  ಆಕ್ರೋಶ ವ್ಯಕ್ತಪಡಿಸಿದರು .

.ಆಡಳಿತ ಮಂಡಳಿಯವರು ಅ ಹುದ್ದೆಗೆ ಅಯ್ಕೆ ಮಾಡುವ ವಿಧಾನವನ್ನ ಅನುಸರಿಸದೆ   ಯಾವುದೇ ರೀತಿ ಪತ್ರಿಕೆ ಪ್ರಕಟಣೆ ಪ್ರಕಟಿಸದೆ  ಹಾಗೂ ಸರ್ಕಾರಿ ಆದೇಶ ಪಾಲನೆ ಮಾಡದೆ ಸಂಪೂರ್ಣ ನೀಯಮವನ್ನೆ ಗಾಳಿಗೆ ತೂರಿ ಏಕ ನಿರ್ಧಾರದಂತೆ ಅವರ ಇಚ್ಚೆಗೆ ತಕ್ಕಂತೆ ಸಭೆ ನಡಾವಳಿ ಮಾಡುವ ಮೂಲಕ ಕಾರ್ಯಧರ್ಶಿ ಹುದ್ದೆ ಆಯ್ಕೆ ಪ್ರಕ್ರಿಯೆ ಹಿಂದಿರುವ ಷಡ್ಯಂತ್ರವಾಗಿದೆ .ಅದ್ದರಿಂದ ನಾವು ಬಾಹ್ಯವಾಗಿ ಹೋರಾಟ ಮಡುವುದಲ್ಲದೆ ಕಾನೂನುತ್ಮಕವಾಗಿ ಹೋರಾಟ ಮಾಡಿ ತಪಿತಸ್ಥರ ವಿರುದ್ದ ಎಸ್ಸಿ ಎಸ್ಟಿ ಮೀಸಲು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ದಲಿತ ನೌಕರರು ಸುಮಾರು 30 ವರ್ಷಗಳಿಂದ ಬ್ಯಾಂಕ್ ನಲ್ಲಿ ಅಟೆಂಡರ್ ಹುದ್ದೆಯಲ್ಲಿ

 ಸೇವೆ ಮಾಡಿಕೊಂಡು ಬಂದಿರುವಂತ ದಲಿತ ಸಮುದಾಯದ ನೌಕರರಿಗೆ ಸರ್ಕಾರಿ ನೀಯಮನುಸಾರ ಮುಂಬಡ್ತಿ ನೀಡಿ ಕಾರ್ಯಧರ್ಶಿ ಹುದ್ದೆಗೆ ಆಯ್ಕೆ ಮಾಡಬೇಕಿತ್ತು. ಕಾರ್ಯನಿರ್ಹಿಸುತ್ತಿರುವ ದಲಿತ ಸಮುದಾಯದವರು ಕೂಡ ಪಿ ಯು ಸಿ ವಿದ್ಯಾ ಅರ್ಹತೆಯಿದ್ದರು ಸಹ  ಉನ್ನತ ಹುದ್ದೆಗಳು ಉಳ್ಳವರ ಪಾಲಾಗಿ ಪಟ್ಟಭದ್ರರಿಂದ ದಲಿತ ನೌಕರರುನ್ನು ತುಳಿಯುವ ಹುನ್ನಾರವಿದೆ ಎಂದರು

.

 

ದೋಣಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ವೀರೇಶ್ ರವರ ಸರ್ವಾಧಿಕಾರಿತ್ವಧೊರಣೆ

ದೋಣಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರೆಶ್ ರವರು ತನ್ನ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ತನ್ನ ಆಡಳಿತ ಮಂಡಳಿ ಸಭೆಯಲ್ಲಿ ಆಕ್ರಮವಾಗಿ ಸಭಾನಡಾವಳಿ ಮಾಡಿಕೊಂಡು ಸ್ವಾರ್ಥಲಾಲಸೆಯಿಂದ ಸಹಕಾರ ನಿಂಬಂದನೆಗಳ ನಿಯಮಗಳನ್ನು ಗಾಳಿಗೆ ತೂರಿ ತನ್ನ ಪುತ್ರನನ್ನು ಸಹಕಾರ ಸಂಘದ ಕಾರ್ಯಧರ್ಶಿ ಹುದ್ದೆಗೆ ಆಯ್ಕೆ ಮಾಡಿಕೊಂಡು . ಸಹಕಾರ ಸಂಘದಲ್ಲಿ ಅಟೆಂಡರ್ ಆಗಿ ಕಾರ್ಯನಿರ್ಹಿಸುವ ದಲಿತ ನೌಕರ .ಎಟಿ ತಿಪ್ಪೇಸ್ವಾಮಿ ಸುಮಾರು 30 ವರ್ಷಗಳ ಸೇವಾ ಅನುಭವ ಹೊಂದಿ ಪಿ ಯುಸಿ ವಿದ್ಯಾಆರ್ಹತೆ ಹೊಂದಿ ನೀಯಮನುಸಾರ ಕಾರ್ಯಧರ್ಶಿ ಹುದ್ದೆಗೆ ಇವರನ್ನೆ ನೇಮಕ ಮಾಡುವ ಬದಲು ಪಟ್ಟಭದ್ರರ ಆಯ್ಕೆ ಷಡ್ಯಂತ್ರ. ಮಾಡಿ ಹುದ್ದೆ ವಂಚಿಸಿದ್ದಾರೆ. ದಲಿತ ಮುಖಂಡ ಗೌರಿಪುರದ ಕುಬೇರಪ್ಪ ಆರೋಪ.

ದಲಿತ ಮುಖಂಡ  ಹಾಗೂ ಪವನ್ ಭರತ್  ಗ್ಯಾಸ್  ಮಾಲಿಕ ಒಬಪ್ಪ ಮಾತನಾಡಿ   ರಾಜ್ಯ ಸರ್ಕಾರ ಆದೇಶ ಉಲ್ಲಂಘನೆ ಮಾಡಿದ ಅಧಿಕಾರಿಗಳು ಸ್ಥಳಿಯ ಅದ್ಯಕ್ಷ  ಸರ್ವಸದಸ್ಯರುಗಳು ಈ ರೀತಿ ಕಾನೂನು ಬಾಹಿರವಾಗಿ ಸಭೆಯಲ್ಲಿ ಏಕಪಕ್ಷಿಯವಾಗಿ ನಿರ್ಣಯಿಸಿ ಸರ್ವಾಧಿಕಾರತ್ವಧೊರಣೆ ಮೇಲ್ನೋಟಕ್ಕೆ ಕಂಡು ಬಂದಿದೆ.  ಈಗಾಗಲೇ ಆಯ್ಕೆ ಮಾಡಿರುವ ಸಹಕಾರ ಬ್ಯಾಂಕ್  ಕಾರ್ಯಧರ್ಶಿ ಹುದ್ದೆಯಿಂದ ವಜಾಗೋಳಿಸಿ ನೀಯಮನುಸಾರವಾಗಿ ದಲಿತ ಸಮುದಾಯದ ತಿಪ್ಪೇಸ್ವಾಮಿ ಎಂಬುವವರುನ್ನು    ಆಯ್ಕೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.    

ಡಾ ಬಿ ಆರ್ ಅಂಬೇಡ್ಕರ್ ನಿರ್ವಹಣೆ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ ಮಾತನಾಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಹುದ್ದೆಯನ್ನ ಆಕ್ರಮವಾಗಿ ನೆಮಕ ಮಾಡಿ ದಲಿತ ನೌಕರನಿಗೆ ವಂಚಿರುವುದಲ್ಲದೆ ಆರ್ಹರಿಗೆ ಮಾಡಿದ  ಆಪಮಾನ ಅವರ ಸೇವಾ ಹಿರಿತನ ಪರಿಗಣಿಸದೆ ಕೆವಲ ಅಟೆಂಡರ್ ಹುದ್ದೆಗೆ ಸಿಮೀತ ಮಾಡಿರುವ ದಲಿತ ನೌಕರ ತಿಪ್ಪೇಸ್ವಾಮಿಯವರುನ್ನು ಕಡೆಗಣಿಸಲಾಗಿದೆ ಈ ಕಾನೂನು ಬಾಹಿರ ಆಯ್ಕೆ ಅಲ್ಲಿನ ಆಡಳಿತ ಮಂಡಳಿಯೆ ಹೊಣೆಗಾರರೆಂದು ಪರಿಗಣಿಸಿ  ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣ ದಾಖಳಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ದಸಂಸ ಸಂಚಾಲಕ ಸೂರಗೊಂಡನಹಳ್ಳಿ ಕುಬೇಂದ್ರಪ್ಪ ಮಾತನಾಡಿ ಈ ಹುದ್ದೆ ಬಗ್ಗೆ ಅಧಿಕಾರಿಗಳುನ್ನು ಪ್ರಶ್ನಿಸಿದರೆ ಉಡಾಪೆ ಉತ್ತರ ಸರಿಯಲ್ಲ ಈ  ಸಂಬಂಧವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕಿಳಿಯಲಾಗುವುದು ಎಂದು ಎಚ್ಚರಿಸಿದರು.

 ದಸಂಸ ಮುಖಂಡ ಸತೀಶ್‌ ಮಲೆ ಮಾಚಿಕೆರೆ ಮಾತನಾಡಿ   ತಾಲೂಕಿನ ದೊಣ್ಣೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪದೋನ್ನತಿ ವಿಚಾರವಾಗಿ ನಡೆದಿರುವ ಅಕ್ರಮವನ್ನು ಹಾಗೂ ದಲಿತ ನೌಕರನಿಗೆ ವಂಚಿಸಿರುವುದನ್ನ ನಮ್ಮ  ಪ್ರಗತಿಪರ ಸಂಘಟನೆಗಳ ಮೂಲಕ ನ್ಯಾಯ ಒದಗಿಸಿ ಕೊಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ತಹಶೀಲ್ದಾರ್ ಮುಖಾಂತರ ಸಹಾಯಕ ನಿಬಂಧಕರು ಜಿಲ್ಲಾ ಕೃಷಿ ಪತ್ತಿನ ಸಹಕಾರ ಸಂಘ .ದಾವಣಗೆರೆ ಇವರಿಗೆ ಮನವಿ ನೀಡಿದ್ದೆವೆ ಈಗಾಗಲೇ ಆಯ್ಕೆ ಮಾಡಿದ ಹುದ್ದೆಯನ್ನ  ವಜಾಗೋಳಿಸಿ ದಲಿತ ಸಮುದಾಯದ ತಿಪ್ಪೇಸ್ವಾಮಿ ನೇಮಕ ಮಾಡಬೇಕೆಂದು ಮನವಿ ಮಾಡಿಕೊಂಡರು.

ಪ್ರಗತಿಪರ ಮುಖಂಡ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ. 

 ಆಡಳಿತ ಮಂಡಳಿಗಳು ತಮಗೆ ಬೇಕಾದವರಿಗೆ ನೀಯಮ ಬಾಹಿರವಾಗಿ ನೇಮಕ ಮಾಡುತ್ತಿರುವುದನ್ನ  ಕಡಿವಾಣ ಹಾಕಲು ಸಹಕಾರ ಸಂಘಗಳ ಕಾಯ್ಕೆ 1959ರ ಕಲಂ 30(ಬಿ)ಗೆ ತಿದ್ದುಪಡಿ ತಂದು ನೇಮಕಾತಿ ನಿಯಮಗಳನ್ನು ಬದಲಿಸಲಾಗಿದ್ದರು ನೀಯಮ ಉಲ್ಲಂಘನೆಯಾಗಿದೆ  ಎಂದು ಕಿಡಿಕಾರಿದರು.

  ದಲಿತ ಮುಖಂಡ ಗೌರಿಪುರದ ಸತ್ಯಮೂರ್ತಿ ಮಾತನಾಡಿ ಸಹಕಾರ ಸಂಘದ ಅದ್ಯಕ್ಷ ಸೇರಿದಂತೆ ಸರ್ವಸದಸ್ಯರುಗಳು ಅಧಿಕಾರದ ದರ್ಪದಿಂದ ಕೆಳಗಿನ ನೌಕರರ ಮೇಲೆ ದಬ್ಬಾಳಿಕೆ ಗದಾಪ್ರಹಾರ ನಾವು ಸಹಿಸುವುದಿಲ್ಲ ಎಂದರು 

ಈ ಸಂದರ್ಭದಲ್ಲಿ 

 ದಸಂಸ ಮುಖಂಡ ಗೌರಿಪುರ ಕುಬೇರಪ್ಪ.ಮುಖಂಡ ಮಹಾಲಿಂಗಪ್ಪ. ರೈತ ಸಂಘದ ಮುಖಂಡ ಭರಸಮುದ್ರ ಕುಮಾರ್.ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ದೋಣಿಹಳ್ಳಿ ಬಸವರಾಜ್‌.ದಲಿಪರ ಸಂಘಟನೆ ಪದಾಧಿಕಾರಿಗಳಾದ ಕ್ಯಾಸೆನಹಳ್ಳಿ ಹನುಮಂತಪ್ಪ.ಮೆದಗಿನಕೆರೆ ಹನುಮಂತಪ್ಪ. ಮಂಜುನಾಥ .ಪಲ್ಲಾಗಟ್ಟೆ ರವಿ. ತಿಮ್ಮಣ್ಣ.ಕ್ಯಾಂಪ್ ಕರಿಬಸಪ್ಪ.ಗೋಡೆ ದುರುಗಣ್ಣ.ಮುಖಂಡ ರಾಜಶೇಖರ.ದೋಣಿಹಳ್ಳಿ ಗ್ರಾಮಸ್ಥರಾದ  ಮಹಾಂತೇಶ್ .ಕಣ್ಣಪ್ಪ. ಮೈಲಾರಪ್ಪ.ಏಕಾಂತಪ್ಪ .ದುರುಗಪ್ಪ.ರುದ್ರಪ್ಪ.ಮಾರುತಿ.ಪ್ರಸನ್ನ.ಪವನ್.ಗಣೇಶ್..ಮಂಜುನಾಥ.ಏಕಾಂತಮ್ಮ ದುರುಗಮ್ಮ.ರತ್ನಮ್ಮ.ಮಂಜಮ್ಮ.ನಿಂಗಪ್ಪ ಮುಸ್ಟೂರು.ದಂಡ್ಯಪ್ಪ…ಸೇರಿದಂತೆ ಹಾಜರಿದ್ದರು ‌

Leave a Reply

Your email address will not be published. Required fields are marked *

You missed

error: Content is protected !!