ಕ್ರೀಡಾರ್ಥಿಗಳು ಉದ್ವೇಗ,ಆಕ್ರೋಶದಿಂದ ಅನಗತ್ಯ ಘಟನೆಗಳಿಗೆ ಆಸ್ಪದ ಕೊಡದೆ ಶಾಂತಿಯುತವಾಗಿ ತೀರ್ಪುಗಾರರ ಅಂತಿಮ ತೀರ್ಪನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಿ ತಾಲೂಕಿಗೆ ಕೀರ್ತಿ ತರಬೇಕು ಎಂದು ಕಿವಿ ಮಾತು . ದಸರಾ ಕ್ರೀಡಾಕೂಟ ಮೈಸೂರು ಅರಸರ ಸಾಂಸ್ಕೃತಿಕ‌ ಕೊಡುಗೆಯ ಪ್ರತೀಕ:ಶಾಸಕ.ಬಿ.ದೇವೇಂದ್ರಪ್ಪ ಸ್ಮರಿಸಿದರು

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 20 jlr news.

ದಸರಾ ಕ್ರೀಡಾಕೂಟ ಮೈಸೂರು ಅರಸರ ಸಾಂಸ್ಕೃತಿಕ‌ ಕೊಡುಗೆಯ ಪ್ರತೀಕ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ

ಜಗಳೂರು ಸುದ್ದಿ:ದಸರಾ ಕ್ರೀಡಾಕೂಟ ಮೈಸೂರು ಅರಸರ ಸಾಂಸ್ಕೃತಿಕ ಕೊಡುಗೆಯ ಪ್ರತೀಕ ಶಾಸಕ‌‌ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಬೇಡರ ಕಣ್ಣಪ್ಪ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ಮಹಾರಾಜರು ನಾಡಹಬ್ಬ ದಸರಾ ವೈಭವವನ್ನು ಸಾಮ್ರಾಜ್ಯದ ಗಡಿಗ್ರಾಮಗಳವರೆಗೂ ಕ್ರೀಡೆ,ಕಲೆ ಸಂಗೀತ,ಕಲಾ ಕ್ಷೇತ್ರಗಳ ಪ್ರತಿಭೆಗಳಿಗೆ ಆದ್ಯತೆನೀಡಿದ್ದರು.ರಾಜ್ಯವ್ಯಾಪಿ ಇಂದಿಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ದಸರಾ ಹಬ್ಬದ ಅಂಗವಾಗಿ ಕ್ರೀಡಾಕೂಟಗಳ ಆಯೋಜನೆಯಿಂದ ಶಾಲಾಕಾಲೇಜುಗಳಿಂದ ಹೊರಗುಳಿದ ಕ್ರೀಡಾಪಟುಗಳಿಗೂ ಸೂಕ್ತ ವೇದಿಕೆಯಾಗಲಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು. ಶಾಸಕರು ಸ್ಮರಿಸಿದರು

ಆಟದಲ್ಲಿ ನಿರತರಾದ ವೇಳೆ ಉದ್ವೇಗ,ಆಕ್ರೋಶದಿಂದ ಅನಗತ್ಯ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ತೀರ್ಪುಗಾರರ ಅಂತಿಮ ತೀರ್ಪನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಬೇಕು.ತಾಲೂಕಿನ ಕೀರ್ತಿಗೆ ಪಾತ್ರರಾಗಬೇಕು ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ,ಕಳೆದ ದಶಕಗಳ ಸ್ಥಿತಿಗತಿ ಅವಲೋಕಿಸಿದರೆ ಕ್ರೀಡಾಪಟುಗಳಿಗೆ ಸಮವಸ್ತ್ರಗಳೂ ಇರುತ್ತಿರಲಿಲ್ಲ.ಆದರೆ ಪ್ರಸಕ್ತವಾಗಿ ದಾನಿಗಳ ಹಾಗೂ ಸರಕಾರದ ಸೌಲಭ್ಯಗಳಿಂದ ತಾಲೂಕಿನ ಕ್ರೀಡಾಪಟುಗಳಿಗೆ ಅಗತ್ಯ ಸಹಕಾರವಿದೆ.ಗ್ರಾಮೀಣ ಭಾಗದ ಕ್ರೀಡಾಪ್ರತಿಭೆಗಳಿಗೆ ಪಕ್ಷಾತೀತವಾಗಿ ಪ್ರೊತ್ಸಾಹಿಸಬೇಕು ಎಂದು ತಿಳಿಸಿದರು.

ಸಂದರ್ಭದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುನಿತಾ, ಶ್ರೀಶೈಲ,ರಾಮಲಿಂಗಪ್ಪ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ,ಮುಖ್ಯಶಿಕ್ಷಕ ಕೆ.ಈಶಪ್ಪ,ಸತೀಶ್ ,ಜಿಲ್ಲಾ ಯುವ ಪ್ರಶಸ್ತಿ ವಿಜೇತ ಟಿ.ಬಡಪ್ಪ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!