ಸುದ್ದಿ ಜಗಳೂರು

ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ಅಧ್ಯಕ್ಷರಾಗಿ ಬಿಳಿಚೋಡು ಎನ್. ಓಮಣ್ಣ ಅವಿರೋಧ ಆಯ್ಕೆ ಕಾರ್ಯಧರ್ಶಿಯಾಗಿ ತೋರಣಗಟ್ಟೆ ಎಚ್  .ರುದ್ರಮುನಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 22.

ಜಗಳೂರು ಪಟ್ಟಣದ ಆಹಾರ ನಾಗರೀಕ ಸರಬರಾಜು ಇಲಾಖೆ ವ್ಯಾಪ್ತಿಗೆ ಸೇರಿದ ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ವತಿಯಿಂದ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ  ಸರ್ವಸದಸ್ಯರುಗಳು   ಸರ್ವಾನುಮತದಿಂದ ಅದ್ಯಕ್ಷರಾಗಿ ಎನ್ .ಓಮಣ್ಣ ಕಾರ್ಯಧರ್ಶಿಯಾಗಿ ಹೆಚ್. ರುದ್ರಮುನಿಯವರನ್ನು ಆಯ್ಕೆ ಮಾಡಲಾಗಿದ್ದು .ಸಂಘದ ಗೌರವದ್ಯಕ್ಷರಾಗಿ ಸಿದ್ದಿಹಳ್ಳಿ ಧನುಂಜಯರೆಡ್ಡಿ. ಮರಿಕುಂಟೆ ಬಸವರಾಜ ಖಜಾಂಚಿಯಾಗಿ .ಮೆದಗಿನಕೆರೆ ನಾಗರಾಜ್  .ಈ ಹಿಂದೆ ಸುಮಾರು ವರ್ಷಗಳಿಂದ ಅಧ್ಯಕ್ಷರಾಗಿ ಗೌರವದ್ಯಕ್ಷರಾಗಿ ಸೇವೆ ಸಲ್ಲಿಸಿರುವ  ತೋರಣಗಟ್ಟೆ ರುದ್ರಮುನಿಯವರುನ್ನು ಈ ಬಾರಿ ಕಾರ್ಯಧರ್ಶಿ ಸ್ಥಾನಕ್ಕೆ ಆಯ್ಕೆ ಮಾಡಿದರೆ ಈ ಹಿಂದೆ ಸಂಘದಲ್ಲಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯ ಸಂಘಟಕರಾಗಿ ಕಾರ್ಯಧರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆಯನ್ನ ಗುರುತಿಸಿ ಓಮಣ್ಣರವರನ್ನು ನ್ಯಾ.ಅ.ಮಾ.ಅದ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ನ್ಯಾಯಬೆಲೆ ಅಂಗಡಿ ಮಾಲಿಕರ ಮತ್ತು ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೌಡಗೊಂಡನಹಳ್ಳಿ ಆರ್.ವಿ  ಬಸವರಾಜ್ ಕಾರ್ಯಧರ್ಶಿಯಾಗಿ ಬಿಳಿಚೋಡಿನ ಎಲ್ ಬಿ .ಚಂದ್ರಶೇಖರಪ್ಪರವರುನ್ನು ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲಿಕರ ಸರ್ವಾಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಗಿದೆ.

ಈ ವೇಳೆ ನೂತನವಾಗಿ ಆಯ್ಕೆಯಾಗಿರುವ ಅದ್ಯಕ್ಷರಾದ ಓಮಣ್ಣ ಮಾತನಾಡಿ ಪ್ರತಿ ತಿಂಗಳು ಬಿಡಿಸುವ ಸಾಗಣಿಕೆ ವೆಚ್ಚವೆ ಸ್ಥಗಿತವಾಗುವ ಅಂತಕ್ಕೆ ಬಂದಿದೆ ಸರ್ಕಾರದಿಂದ ಸರುಕು ಸಾಗಣಿಕೆ ವೆಚ್ಚವನ್ನು ಸರ್ಕಾರ ಸರಿಯಾದ ರೀತಿ ಭರಿಸುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ನಮ್ಮ ಶಾಸಕರ ಮೂಲಕ ಒತ್ತಡ ಹೇರುವ ಮೂಲಕ ವೆಚ್ಚ ಬಿಡುಗಡೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿ ಮಾಲಿಕರು ಪ್ರಸ್ತುತದಲ್ಲಿ  ಸಂಕಷ್ಟದಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ ಸಾಗಣೆ ವೆಚ್ಚ ಸರಿಯಾಗಿ ಬರುತ್ತಿಲ್ಲ ಅಲ್ಲದೆ ಅಕ್ಕಿ ವಿತರಣೆ ವೇಳೆ ಸರ್ವರ್ ಸಮಸ್ಯೆಯಿಂದ ಪಡಿತರ ಫಲಾನುಭವಿಗಳ ತಂಬು ತೆಗೆದುಕೊಳ್ಳುವುದೆ ಒಂದು ಹರಸಾಹಸವಾಗಿದೆ .ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ವಂದಿಸಿ ನಮ್ಮ ನೆರವಿಗೆ ಧಾವಿಸಬೇಕೆಂದರು 

ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿ ಮಾಲಿಕರಾದ ಯಲ್ಲಪ್ಪ ರಸ್ತೆಮಾಚಿಕೆರೆ. ರವಿಕುಮಾರ್ ಕ್ಯಾಂಪ್.. ಸಿದ್ದಪ್ಪ .ರವಿಚಂದ್ರರೆಡ್ಡಿ.ಸತ್ಯಪ್ಪ.ಅಡಿವೆಪ್ಪ‌ .ಬಸವನಗೌಡ.ಮೆದಕೆರೆನಹಳ್ಳಿ ನಾಗರಾಜ್ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!