Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 22.
ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಗಳ ವಶ:ತಹಶೀಲ್ದಾರ್ ಭೇಟಿ
ಜಗಳೂರು ಸುದ್ದಿ:ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಗ್ರಾಮಸ್ಥರು ವಶಪಡಿಸಿಕೊಂಡು ತಹಶೀಲ್ದಾರ್ ಗೆ ಒಪ್ಪಿಸಿದ್ದಾರೆ.
ತಾಲೂಕಿನ ಚಿಕ್ಕಬಂಟನಹಳ್ಳಿ ಗ್ರಾಮದ ಬಳಿ ಇರುವ ಹಳ್ಳದಲ್ಲಿ ಭೀಮಕ್ಕ ಹಂದಿ ಹುಳಿಯಾರ್ ಬಸಪ್ಪ ಎಂಬುವವರಿಗೆ ಸೇರಿದ ಸರ್ವೆನಂಬರ್ 9/1a ಮತ್ತು 9/1a ಸೇರಿದ 3ಎಕರೆ ಮತ್ತು 4 ಎಕರೆ ಜಮೀನುಗಳ ಮಾರ್ಗದಲ್ಲಿ ಕಳೆದ ವಾರದಿಂದ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವುದನ್ನು ಕಂಡ ಗ್ರಾಮಸ್ಥರು ಮಧ್ಯರಾತ್ರಿ ಮರಳು ತುಂಬಿದ ಟ್ರ್ಯಾಕ್ಟ್ ರ್ ಗಳನ್ನು
ಮರಳು ಸಾಗಾಣಿಕೆ ಮಾಡಿರುವ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಾಸಿಲ್ದಾರ್ ಅರುಣ್ ಖರ್ಗೆ ಹೇಳಿದರು ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕ ಬಂಟನಹಳ್ಳಿ ಗ್ರಾಮದ ಹತ್ತಿರ ಬರುವ ಹಳ್ಳದ ದಲ್ಲಿ ಮರಳು ಸಾಗಣಿಕೆ ಯಾಗಿದ್ದು ಸರ್ವೆ ನಂಬರ್ 9/1a 3 ಎಕ್ರೆ 22ಗುಂಟೆ ಸರ್ವೆ ನಂಬರ್ 9/1b 4 ಎಕ್ರೆ 22ಗುಂಟೆ ಜಮೀನು ಭೀಮಕ್ಕ ಹಂದಿ ಹುಳಿಯಾರ್ ಬಸಪ್ಪ ಇವರ ಜಮೀನಿನ ಹತ್ತಿರ ಸುಮಾರು ದಿನಗಳಿಂದ ಮರಳು ಸಾಗಣಿಕೆ ಯಾಗಿರುವುದು ಗ್ರಾಮಸ್ಥರ ಕಂಡುಬಂದಿದ್ದು ದಿನಾಂಕ 21 -9- 2023 ರಂದು ಮದ್ಯ ರಾತ್ರಿ 11:00 ಸುಮಾರಿಗೆ ಮರುಳ ಸಾಗಣಿಕೆ ಮಾಡುತ್ತಿದ್ದ ಕೆಎ 17 ಜೆಡಿ 43 81 ಸೇರಿದಂತೆ ಎರಡು ಟ್ರ್ಯಾಕ್ಟರ್ ಗಳನ್ನು ಹಿಡಿದು ನಂತರ ನಾಡಕಛೇರಿ ಮುಂಬಾಗ ಧರಣಿ ನಡೆಸಿದರು.
ಸ್ಥಳಕ್ಕೆ ತಹಶೀಲ್ದಾರ್ ಅರುಣ್ ಕುಮಾರ್ ಕಾರಗಿ ಭೇಟಿ ನೀಡಿ,ಹಳ್ಳದ ಸುತ್ತ ಎರಡು ಕಿಮೀ ವ್ಯಾಪ್ತಿ ಸರ್ವೆ ಮಾಡಿ ಹದ್ದುಬಸ್ತು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.ನಂತರ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗಳಿಗೆ ಕ್ರಮಗೈಗೊಳ್ಳಲಾಗುವುದು.ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಡಿವೈಎಸ್ ಪಿ ಗಳ ಜೊತೆ ಚರ್ಚೆ ನಡೆಸಲಾಗಿದೆ.ಅಲ್ಲದೆ ರೈತರು ಓಡಾಡಲು ರಸ್ತೆಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಕಂದಾಯ ನಿರೀಕ್ಷಕಿ ಕೀರ್ತಿ,ಗ್ರಾಮಲೆಕ್ಕಾಧಿಕಾರಿ ಸುರೇಶ್,ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.