Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 24.

 

  ತಾಲ್ಲೂಕಿನ ತಿಮ್ಮಲಾಪುರ ಗ್ರಾಮದ ವ್ಯಕ್ತಿಯೋರ್ವನು ಬೆಂಕಿ ಅವಘಡದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬದವರ ಮನೆಗೆ  ಶಾಸಕ ಬಿ ದೇವೆಂದ್ರಪ್ಪ  ಭೇಟಿ ನೀಡಿ  ವೈಯಕ್ತಿಕವಾಗಿ  25 ಸಾವಿರ ರೂಗಳ ಧನಸಹಾಯ ನೀಡಿ ಸಾಂತ್ವನ ಹೇಳಿದರು

ಜಗಳೂರು ತಾಲ್ಲೂಕಿನ  ತಿಮ್ಮಲಾಪುರ ಗ್ರಾಮದಲ್ಲಿ ಕೆಲ ದಿನಗಳಲ್ಲಿ ಬೆಂಕಿ ಅವಘಡದಲ್ಲಿ ಕರಿಬಸಪ್ಪ ಎಂಬುವರು ಮೃತಪಟ್ಟ ಹಿನ್ನೆಲೆಯಲ್ಲಿ ಆ ಕುಟುಂಬದ  ಮನೆಗೆ ಭೇಟಿ ನೀಡಿ ಶಾಸಕರು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು.ಮೃತ ಕರಿಬಸಪ್ಪನಿಗೆ ಸೇರಿದ ಗೂಡ ಅಂಗಡಿಯಲ್ಲಿ ಕಾಣಿಸಿಕೊಂಡ   ಆಕಸ್ಮಿಕವಾಗಿ 

ಬೆಂಕಿಗೆ ಬಲಿಯಾದ  ಕರಿಬಸಪ್ಪ ಸ್ವಾಬಿಮಾನದ ಬದುಕು ಸಾಗಿಸಿಕೊಂಡು ಹೋಗುತ್ತಿದ್ದ ಎಂದು ಗ್ರಾಮದವರಿಂದ ತಿಳಿದಿದ್ದು   ವಿಧಿಯಾಟ ಸಾವು ಎನ್ನುವುದು ಯಾವ ರೂಪದಲ್ಲಿ ಬರುತ್ತದೆ ಎಂಬುವುದು ಗೊತ್ತಿಲ್ಲ ! ನಿಮ್ಮ 

ಮನೆಯ ಒಡೆಯ ಮೃತಪಟ್ಟಿರುವುದು ನಮಗೂ ಸಹ ತುಂಬಾ ನೋವು ತಂದಿದೆ ನಿಮಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಕೊಡಿಸುವಂತ ಪ್ರಯತ್ನ ಮಾಡುತ್ತೆನೆ ಎಂದು ಆತ್ಮಸ್ಥೈರ್ಯ ತುಂಬಿದರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೋಡಿಸುವಂತೆ ಶಾಸಕರು ಸಲಹೇ ನೀಡಿದರು.

ಈ ಸಂದರ್ಭದಲ್ಲಿ ವಕೀಲರಾದ ಲಕ್ಷ್ಮಣ, ಡಿ.ಪಿ.ಜಗಳೂರಯ್ಯ, ಕಾಂಗ್ರೆಸ್ ಮುಖಂಡರಾದ ತಮಲೇಹಳ್ಳಿ ಬಿ.ಗುರುಮೂರ್ತಿ,ನಿವೃತ ಅಧಿಕಾರಿ ಪ್ರಹ್ಲಾದ. ಉಪಾನ್ಯಾಸಕರಾದ ಎ ಎಲ್.ತಿಪ್ಪೇಸ್ವಾಮಿ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್.  ಬರಕತ್ ಅಲಿ, ಶಾಸಕರ ಆಪ್ತ ಕಾರ್ಯದರ್ಶಿ ಮಹಮದ್ ಗೌಸ್.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಸೇರಿದಂತೆ ಕಾರ್ಯಕರ್ತರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!