Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 24
ದೈಹಿಕ ಶಿಕ್ಷಕರಿಲ್ಲದ ಶಾಲೆಯಲ್ಲಿ ವಿಜೇತರಾಗಿ ತಾಲ್ಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಕೂಟದಲ್ಲಿ ಸಹ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ : ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ವಿದ್ಯಾರ್ಥಿಗಳಿಗೆ ಕಿವಿ ಮಾತು
ವಿದ್ಯಾರ್ಥಿ ಗಳು ಕೇವಲ ಅಂಕಗಳಿಕೆಗೆ ಅಭ್ಯಾಸ ಮಾಡುವುದಲ್ಲ ಅಂಕದ ಜೊತೆಗೆ ಕ್ರೀಡಾ ಚಟುವಟಿಕೆ ಬೌದ್ದಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಅವರು ಅಭಿಪ್ರಾಯಪಟ್ಟರು
.
ಪಟ್ಟಣದಲ್ಲಿ ನಡೆದ ದಸರ ಕ್ರೀಡಾ ಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಜನಸಂಪರ್ಕ ಕಚೇರಿಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸಮವಸ್ತ್ರ ವನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಶಾಲೆಗಳಿಂದ 426 ವಿಜೇತ ಮಕ್ಕಳನ್ನು ಕುರಿತು ಪ್ರೋತ್ಸಾಹ ನೀಡುವ ಮೂಲಕ ರಾಜ್ಯಮ ಕೊಕ್ಕೊ,ಕಬ್ಬಡಿ,ರಿಲೆ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಭಾಗವಹಿಸಿದ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುವುದು ಸಂತೋಷದ ವಿಷಯವಾಗಿದೆ. ಪುನ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಕ್ರೀಡೆಯಲ್ಲಿ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ವಿಜೇತರಾಗುವಂತೆ ಶುಭ ಹಾರೈಸಿದರು.
ಕ್ರೀಡೆ ಸಮವಸ್ತವನ್ನು ತೆಗೆದು ಕೊಳ್ಳುತ್ತಾರೆ ಒಂದೇ ತರನಾದ ಬಟ್ಟೆಗಳು ಇರುವುದಿಲ್ಲ ಆದ್ದರಿಂದ ನಾವೇ ಖುದ್ದಾಗಿ ಶಿಕ್ಷಣ ಇಲಾಖೆಯ ಜೊತೆಗೂಡಿ ಒಂದೇ ಬಣ್ಣದ ಡ್ರಸ್ ಕೋಡ್ ವಿತರಿಸಲಾಗಿದೆ ಎಂದರು..
ಕ್ರೀಡೆ ಎನ್ನುವುದು ಶಾಲಾ ಕಾಲೇಜು ಹಂತದಲ್ಲಿ ಅತಿ ಪ್ರಾಮುಖ್ಯವಾದ ಕ್ರೀಡೆ ಆ ಸಮಯವನ್ನು ವಿದ್ಯಾರ್ಥಿಗಳು ಎಂದಿಗೂ ವ್ಯರ್ಥಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಟಿಪಿಓ ಸುರೇಶ್ ರೆಡ್ಡಿ ಮಾತನಾಡಿ ತಾಲ್ಲೂಕಿನಲ್ಲಿ ಬೇಡರಕಣ್ಣಪ್ಪ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲ,ಗಡಿಮಾಕುಂಟೆ ಮತ್ತು ಕೆಳಗೋಟೆ ಶಾಲೆಗಳಲ್ಲಿಯೂ ಸಹ ದೈಹಿಕ ಶಿಕ್ಷಕರಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಪ.ಪಂ.ನಾಮನಿರ್ದೇಶನ ಸದಸ್ಯರಾದ ಗೋಸಾಯಿ, ಕಾಂಗ್ರೆಸ್ ಮುಖಂಡರಾದ ಬರಕತ್ ಅಲಿ, ಡಿ.ಆರ್.ಹನುಮಂತಪ್ಪ, ರಂಗನಾಥರೆಡ್ಡಿ,ತಮಲೇಹಳ್ಳಿ ಬಿ.ಗುರುಮೂರ್ತಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ,ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ ಸೇರಿದಂತ ಉಪನ್ಯಾಸಕರಾದ ಎ.ಎಲ್.ತಿಪ್ಪೇಸ್ವಾಮಿ, ದೈಹಿಕ ಶಿಕ್ಷಕರು,ಶಿಕ್ಷಕಿಯರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.