Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 24.


ಬರದಛಾಯೇ ನಡುವೆ ಭಕ್ತಿಯ ಪರಕಾಷ್ಟೇ : ಕೋಳಿ ಉಧ್ಯಮಿ ತಮಲೇಹಳ್ಳಿ ಬಿ.ಗುರುಮೂರ್ತಿ
ಜಗಳೂರು ಪಟ್ಟಣದ ಮರೇನಹಳ್ಳಿ ರಸ್ತೆ ಯಲ್ಲಿ ಅಕುರಥ ಬಾಯ್ಸ್ ರವರು ಪ್ರತಿಷ್ಠಾಪನೆ ಮಾಡಿರುವ ಗಣೇಶನ ವಿಗ್ರಹಕ್ಕೆ ವಿಶೇಷ ಪೂಜೆ ಕೈಂಕಾರ್ಯದಲ್ಲಿ ತೊಡಿಗಿ ಆರ್ಶಿವಾದ ಪಡೆದ ಕೋಳಿ ಉದ್ಯಮಿ ತಮಲೇಹಳ್ಳಿ ಗುರುಮೂರ್ತಿ ಮಾತನಾಡಿದರು

ಜಗಳೂರು ಪಟ್ಟಣದಲ್ಲಿ ನಡೆದ ಗಣೇಶ್ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಗಣಪತಿ ಸ್ಥಾಪನೆ ಮಾಡುವ ಮೂಲಕ ಸಮಾಜ ಸಮಾಜಗಳ ನಡುವೆ ಸಹೋದರತೆಯ ಪ್ರತೀಕವಾದ ಹಬ್ಬವೆನಿಸಿಕೊಂಡ ಗಣೇಶೋತ್ಸವ‌ ತಾಲ್ಲೂಕಿನಾದ್ಯಂತ ಸುಮಾರು 600 ಕ್ಕೂ ಹೆಚ್ಚು ಗಣೇಶಗಳನ್ನು ಪ್ರತಿಷ್ಠಾಪನೆ ಮಾಡಿ ಭಕ್ತಿಭಾವ ಮೆರೆದಿದ್ದಾರೆ.


ಕರ್ನಾಟಕ ರಾಜ್ಯದ ತುಂಬಾ ಬರ ಆವರಿಸಿದೆ ಅದರಲ್ಲೂ ಇಂತಹ ಉತ್ಸವಗಳಿಗೆ ನಮ್ಮ ಯುವಕರು ಕಮ್ಮಿಯಿಲ್ಲ ಕಡಿಮೆ ಖರ್ಚಿನಲ್ಲಿ ಸಣ್ಣದಾಗಿ ಉತ್ಸವ ಮಾಡುವ ಮೂಲಕ ಇನ್ನೊಬ್ಬರಿಗೆ ಆದರ್ಶ ವಾಗಬೇಕು ಎಂದರು.


ಡಿಜಿಟಲ್‌ ಯುಗದಲ್ಲಿ ಮುಂಚೂಣಿಯಿದ್ದರೂ ಸಹ ನಮ್ಮ ಕರ್ನಾಟಕದಲ್ಲಿ ಭಕ್ತಿ ಭಾವಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅಭಿಪ್ರಾಯಪಟ್ಟರು.


ಕಾಂಗ್ರೆಸ್ ಯುವ ಮುಖಂಡ ಬರಕತ್ ಅಲಿ ಮಾತನಾಡಿದರು ಭಕ್ತಿಶ್ರದ್ಧೆಗೆ ಯಾವುದೇ ಮತ ಭೇದ-ಭಾವ ವಿಲ್ಲದೇ ಎಲ್ಲಾ ಸಮಾಜದ ಯುವಕರು ಒಗ್ಗೂಡಿ ದೊಡ್ಡ ಪ್ರಮಾಣದಲ್ಲಿ ಇಂತಹ ಉತ್ಸವ ಮಾಡಿರುವುದು ಭಾವೈಕ್ಯತೆಯ ಸಂದೇಶವೆಂದರು.
ಸಮಾಜದಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡಬೇಕೆಂದರೆ ಇಂತ ಉತ್ತಮ ಕಾರ್ಯಗಳು ಶ್ಲಾಘನೀಯವಾಗಿದ್ದು ಪ್ರತಿಯೊಬ್ಬರು ಒಗ್ಗೂಡಿ ಇಂತ ಭಕ್ತಿ ಪೂಜೆ ಪುನಾಸ್ಕಾರಗಳಿಗೆ ಹೆಸರಾಗಿದ್ದು ಸಮಾಜದಲ್ಲಿ ನಾವುಗಳೆಲ್ಲರು ಮತ್ತಷ್ಟು ಸಮಾಜ ಮುಖಿ ಕೆಲಸ ಮಾಡೋಣ ಎಂದರು
ಈ ಸಂದರ್ಭದಲ್ಲಿ ಅಕುರಥ ಪ್ರತಿಷ್ಠಾಪನ ಬಳಗ ಸೇರಿದಂತೆ ಹಲವಾರು ಯುವಕರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!