Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 2
ಜಗಳೂರು : ಕರ್ನಾಟಕ ರಾಜ್ಯ ಮುಸ್ಲಿಂ ಸಂಘ ಜಗಳೂರು ತಾಲ್ಲೂಕು ನೂತನ ಅಧ್ಯಕ್ಷರಾಗಿ ಜಿ.ಕೆ.ಅನ್ವರ್ ಆಲಿ ಅವರು ಆಯ್ಕೆಯಾಗಿದ್ದಾರೆ
ತಾಲ್ಲೂಕಿನ ಗೋಗುದ್ದು ಗ್ರಾಮದ ಜಿ.ಕೆ.ಅನ್ವರ್ ಆಲಿ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅಬಿವೃದ್ದಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಜೊತೆಗೆ ತಾಲ್ಲೂಕಿನ ಹಲವು ಸಾಮಾಜಿಕ ಮತ್ತು ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ ಇವರ ಸೇವೆ ಮತ್ತಷ್ಟು ವಿಸ್ತರಿಸಲು ಕರ್ನಾಟಕ ಮುಸ್ಲಿಂ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಎಲ್.ಎಸ್.ಬಷೀರ್ ಅಹಮದ್ ಹೇಳಿದರು
ಆದೇಶ ಪ್ರತಿ ವಿತರಿಸಿ ಮಾತನಾಡದ ಅವರು ತಾಲ್ಲೂಕಿನ ಮುಸ್ಲಿಂ ಸಮಾಜದ ಶೈಕ್ಷಣಿಕ ,ಧಾರ್ಮಿಕ , ರಾಜಕೀಯ , ಸಾಮಾಜಿಕ ಅಬಿವೃದ್ದಿ ಹೊಂದಲು ವಿವಿದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮುದಾಯದ ಏಳಿಗೆಗೆ ಶ್ರಮಿಸಬೇಕು ಮುಸ್ಲಿಂ ಸಮುದಾಯದ ಹಲವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅಂತವರಿಗೆ ಜಾಗೃತಿ ಮೂಡಿಸಿ ತಿಳಿಹೇಳಬೇಕು ಎಂದರು
ಗೋಗುದ್ದು ಜಿ.ಕೆ.ಅನ್ವರ್ ಮಾತನಾಡಿ ಸಂಘವು ನೀಡಿರುವ ಜವಾಬ್ದಾರಿಯನ್ನು ಆತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಮುಸ್ಲಿಂ ಸಮಾಜದ ಅಭಿವೃದ್ಧಿ ಗೆ ಶ್ರಮಿಸುತ್ತೇನೆ ಹಿರಿಯರು ಮತ್ತು ಕಿರಿಯರ ಸಹಕಾರ ಪಡೆದು ನೊಂದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು