ಜೆ ಎಲ್ ಆರ್ ನ್ಯೂಸ್

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on October 2

ಜಗಳೂರು ನ್ಯೂಸ್ : ಶುಕ್ರದೆಸೆ ನ್ಯೂಸ್.

ಸಮಾಜದಲ್ಲಿ ಪೌರಕಾರ್ಮಿಕರ ಬಗ್ಗೆ ಅಸಡ್ಡೆ ಮನೋಭಾವನೆ ಬೇಡ ನಾಗರೀಕರು ಗೌರವಿಸಿ .ಒಂದು ದಿನ ಕಾರ್ಮಿಕರು ನಗರ ಸ್ವಚತೆ ನಿಲ್ಲಿಸಿದರೆ ಅನಾರೋಗ್ಯಕ್ಕೆ ತುತ್ತಾಗುತ್ತೆವೆ .ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿಯಿರಲಿ ತಹಶೀಲ್ದಾರ್

ಪಟ್ಟಣದಲ್ಲಿ ಜರುಗಿದ ಪಪಂ ಪಂಚಾಯತಿ ಸಭಾಂಗಣದಲ್ಲಿ ನಡೆದ 154 ನೇ ಗಾಂಧಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ :ತಹಶೀಲ್ದಾರ್ ಅರುಣ್ ಕಾರಗಿ ಕಿವಿ ಮಾತು ಹೇಳಿದರು.

:ಪೌರಕಾರ್ಮಿಕರು ನಿತ್ಯ ‌ನಗರ ಸ್ವಚತೆಯಲ್ಲಿ ತೊಡಗಿ ಪ್ರಮಾಣಿಕ‌ ಸೇವಾ ಕಾರ್ಯ ಅನನ್ಯವಾಗಿದೆ .

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 12 ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಪೌರ ನೌಕರರುನ್ನು ಸನ್ಮಾನಿಸಿ ವೇದಿಕೆ ಕಾರ್ಯಕ್ರಮವನ್ನ ಉದ್ಘಾಟಿಸಿ ಪೌರ ಕಾರ್ಮಿಕರು ಮತ್ತು ನಾಗರೀಕರ ನಡುವೆ ಗೌರವ ಸಂಬಂಧ ಉತ್ತಮವಾಗಿದ್ದರೆ ನಗರದ ಜನರ ಆರೋಗ್ಯ ಸೌಭಾಗ್ಯವಾಗುವುದರಲ್ಲಿ ಯಾವುದೆ ಸಂದೇಹವಿಲ್ಲ .

ಮಹಾತ್ಮಗಾಂಧಿಜಿ ಅವರು ಸತ್ಯ,ಅಹಿಂಸಾ ಮಾರ್ಗ ಪಾಲಿಸುವುದಲ್ಲದೆ.ಸ್ವಚ್ಛತೆಗೆ ಮೊದಲ ಆಧ್ಯತೆ ನೀಡಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಖ್ಯ ಪಾತ್ರರಾಗಿದ್ದರು. ಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಮಿಕರ ಸೇವೆ ಅನನ್ಯವಾಗಿದೆ ವಾಗಿದೆ.. ಸಾರ್ವಜನಿಕರು ಕಾರ್ಮಿಕರುನ್ನು ಗೌರವದಿಂದ ಕಾಣಬೇಕು.

.ಕಾರ್ಮಿಕರು ಚರಂಡಿ ಸ್ವಚತೆಗೆ‌ ಮುಂದಾಗುವ ಮುನ್ನ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲಾಖೆ ನೀಡುಯವಂತ. ಸೇಪ್ಟಿ ಕಿಟ್ ಗಳಾದ ಕೈಗೆ ಕವಚ ಕಾಲಿಗೆ ಶೂ ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೇ ನೀಡಿದರು. .ಮಾನಸಿಕ,ಕೌಟುಂಬಿಕ ನೆಮ್ಮದಿ ಜೀವನ ಜೊತೆಗೆ ಶ್ರಮದ ಹಣ ಉಳಿತಾಯ ಮಾಡಿ ಸರಕಾರದ ಸೌಲಭ್ಯಗಳ ಸದುಪಯೋಗ ಪಡೆದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳುನ್ನು ಸುಸಂಸ್ಕೃತ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿಯಿದೆ ಎಂದು ಕಿವಿ ಮಾತು ಹೇಳಿದರು..

ಪಟ್ಟಣಪಂಚಾಯಿತಿ ಮಾಜಿ ಅಧ್ಯಕ್ಷ. ಆರ್ ತಿಪ್ಪೇಸ್ವಾಮಿ ಮಾತನಾಡಿ,ಪಟ್ಟಣದ ಸ್ವಚ್ಛತೆಗೆ ಕೇವಲ ಪೌರಕಾರ್ಮಿಕರನ್ನೇ ಬೆರಳು ಮಾಡಿ ತೋರಿಸುವುದಕ್ಕಿಂತ ತಮ್ಮ ಬೀದಿ ಮನೆ ಅಕ್ಕ ಪಕ್ಕದಲ್ಲಿ ತಾವೆ ಸ್ವಚೆಗೆ ನಗರದ ಜನತೆ ಕೈಜೋಡಿಸಬೇಕು.

. ನಗರದಲ್ಲಿ ಕೆಲವರು ತಮ್ಮ ಮನೆಯ ಕಸವನ್ನ ರಸ್ತೆಗೆ ಎಸೆದು ಚರಂಡಿ ಮೋರಿಗಳಿಗೆ ಬಿಸಾಡುವುದು ಸರ್ವೇಸಾಮಾನ್ಯವಾಗಿದೆ. ಚರಂಡಿ ನೈರ್ಮಲ್ಯ ಮರೀಚಿಕೆಯಾಗಿವೆ.ಚರಂಡಿಗೆ ಕಸ ಎಸೆಯುವವರಿಗೆ ನಮ್ಮ ಪಪಂ ಇಲಾಖೆಯಿಂದ ನೋಟಿಸ್ ಜಾರಿ ಮಾಡಬೇಕು.ಹಾಗೂ ಸರಕಾರದ ಆದೇಶದಂತೆ ದಶಕಗಳಿಂದ ಸೇವೆಗೈಯುತ್ತಿರುವ 7 ಜನ ಪೌರಕಾರ್ಮಿಕರಿಗೆ ನೇರ ಪಾವತಿದಾರರನ್ನಾಗಿ ಖಾಯಂ ಹುದ್ದೆಗೆ ನೇಮಕ ಮಾಡುವ ಸರಕಾರದ ಆದೇಶ ಪಾಲಿಸಬೇಕು.ಪೌರಕಾರ್ಮಿಕರು ಸಮಾಜದಲ್ಲಿ ಸಾರ್ವಜನಿಕರಿಗೆ ಸ್ಪಂದಿಸಿ ವೃತ್ತಿ ಗೌರವ ಹೊಂದಬೇಕು ಎಂದು ಸಲಹೇ ನೀಡಿದರು..

ಪ.ಪಂ‌ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ, ನಮ್ಮ

ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರು ಪೌರ ಕಾರ್ಮಿಕರ ಬಗ್ಗೆ ಆಪಾರ ಕಾಳಜಿ ಹೊಂದಿದ್ದು ಅವರ ಆತ್ಮಸ್ಥೈರ್ಯ ಹೆಚ್ಚಿಸಲು ಅವರೊಂದಿಗೆ ಸ್ವಚತೆ ಆಂದೋಲನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಸಗೂಡಿಸಿ ಕಾರ್ಮಿಕರ ಜೊತೆಗೆ ಊಟ ಮಾಡುವ ಮೂಲಕ ಸದಾ ಪ್ರೋತ್ಸಾಹ ನೀಡುತಾ ಬಂದಿರುತ್ತಾರೆ.ಕಾರ್ಮಿಕರಿಗೆ ದಸರಾ ಹಬ್ಬದ ಉಡುಗೊರೆಯಾಗಿ ಹಾಗೂ ಮಹಿಳಾ ಸ್ವಯಂ ಸೇವಕರಿಗೆ ವೈಯಕ್ತಿಕ ಖರ್ಚಿನಲ್ಲಿ ಬಟ್ಟೆ ವಿತರಿಸಿದ್ದು ಪೌರಕಾರ್ಮಿಕರ ಶ್ರೆಯೋಭಿವೃದ್ದಿಗೆ ಬದ್ದರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು..

ಪೌರಕಾರ್ಮಿಕರಿಗೆ ಸ್ವಂತ ನಿವೇಶನವೂ ಇಲ್ಲದೆ ವಸತಿಯೋಜನೆಗಳಿಂದ ವಂಚಿತರಾಗುತ್ತಿದ್ದು.ಪಟ್ಟಣದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ನಿವೇಶನ ಮತ್ತು ಸೂರು ಕಲ್ಪಿಸಬೇಕು

ಹಿರಿಯ ನಾಗರೀಕ ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಮಾತನಾಡಿ,ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಆಡಳಿತಾವಧಿಯಲ್ಲಿ ಮಾಜಿ ಸಚಿವ ದಿ.ಬಸವಲಿಂಗಪ್ಪ ಅವರು ಮಲಹೋರುವ ಪದ್ದತಿ ನಿಷೇಧಗೊಳಿಸಿ ಪೌರಕಾರ್ಮಿಕರ ಹಕ್ಕುಗಳನ್ನು ಜಾರಿಗೊಳಿಸಿದರು ಎಂದು ಮಾಹಿತಿ ನೀಡಿದರು.

ಪ.ಪಂ.ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಾತನಾಡಿ,ಪೌರಕಾರ್ಮಿಕರು ವೈಯಕ್ತಿಕವಾಗಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಪೌರಕಾರ್ಮಿಕರಿಗೆ ಮಾಸಿಕ ವೇತನ ಜಾರಿಗೊಳಿಸಿ ಆರ್ಥಿಕ ,ಸಾಮಾಜಿಕ ಭದ್ರತೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಪಟ್ಟಣದ ಪೌರಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿರುವುದು ಪ್ರಶಂಸನೀಯ.ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದರು.

ಪೌರಕಾರ್ಮಿಕರಿಗೆ ಹಾಗೂ ಸ್ವಯಂ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಮೆರವಣಿಗೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.

ಸಂದರ್ಭದಲ್ಲಿ ಪ.ಪಂ.ಸದಸ್ಯರಾದ ಲಲಿತಮ್ಮ,ಲುಕ್ಮಾನ್ ಖಾನ್,ಶಕೀಲ್ ಅಹ್ಮದ್,ನವೀನ್ ಕುಮಾರ್,ರಮೇಶ್ ರೆಡ್ಡಿ,ರವಿಕುಮಾರ್,ಪಾಪಲಿಂಗಪ್ಪ,ದೇವರಾಜ್,ಮಂಜುನಾಥ್,ನಾಮನಿರ್ದೆಶಿತ ಸದಸ್ಯರಾದ ಜಯ್ಯಣ್ಣ,ತಾನಾಜಿ ಗೊಸಾಯಿ,ಶಾಂತಕುಮಾರ್,ಮುಖಂಡರಾದ ಕುಬೇಂದ್ರಪ್ಪ,ರಮೇಶ್ ,ಓಬಳೇಶ್,ಇಂಜಿನಿಯರ್ ಶೃತಿ,ಆರೋಗ್ಯ ನಿರೀಕ್ಷಕ ಖಿಫಾಯತ್, ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!