Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 2 kanahosahalli
ಹುಚ್ಚು ನಾಯಿ ಕಡಿತ; ನಾಲ್ವರಿಗೆ ಇಲ್ಲಿನ ನಿವಾಸಿಗಳಾದ ಬಾಣತಿ ಹಾಗೂ ಮಗುವಿಗೆ, ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಹಾಗೂ ಎರಡು ಕುರಿ, ಒಂದು ಹಸುವಿಗೆ ಹುಚ್ಚುನಾಯಿ ದಾಳಿಮಾಡಿ ಓಡಾಡಿಸಿಕೊಂಡು ಕಚ್ಚಿ ಗಾಯಗೊಳಿಸಿದೆ.
ಕಾನ ಹೊಸಹಳ್ಳಿ: ಹುಚ್ಚು ನಾಯಿ ಕಡಿತದಿಂದ ನಾಲ್ಕು ಮಂದಿಗೆ ಗಾಯಗೊಂಡಿರುವ ಘಟನೆ ಕಾನ ಹೊಸಹಳ್ಳಿ ಪಟ್ಟಣದ ಕುಲುಮೆಹಟ್ಟಿ ಗಣೇಶನಗರದಲ್ಲಿ ಭಾನುವಾರ ನಡೆದಿದೆ. ಇಲ್ಲಿನ ನಿವಾಸಿಗಳಾದ ಬಾಣತಿ ಹಾಗೂ ಮಗುವಿಗೆ, ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಹಾಗೂ ಎರಡು ಕುರಿ, ಒಂದು ಹಸುವಿಗೆ ಹುಚ್ಚುನಾಯಿ ದಾಳಿಮಾಡಿ ಓಡಾಡಿಸಿಕೊಂಡು ಕಚ್ಚಿ ಗಾಯಗೊಳಿಸಿದೆ. ಕೆಲವರಿಗೆ ಕೈ, ಕಾಲು ಕಚ್ಚಿದೆ, ಸುದ್ದಿ ತಿಳಿದ ಗ್ರಾಮಸ್ಥರು ಭಯಬಿದ್ದು, ಬೀದಿಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರು. ಸುದ್ದಿ ತಿಳಿದ ತಕ್ಷಣ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಇಲಾಖೆ ಸಿಬ್ಬಂದಿ ಕೆ.ಆರ್ ಸೋಮಶೇಖರ್, ಆರ್.ಎಸ್ ರಾಘವ ರೆಡ್ಡಿ, ಎಂ.ಎಸ್ ರವಿಕುಮಾರ್, ಕೊಟ್ರೇಶ್, ಆಶಾ ಕಾರ್ಯಕರ್ತೆ ಲಕ್ಷ್ಮಿ ಭೇಟಿ ನೀಡಿ ಹುಚ್ಚುನಾಯಿ ಕಡಿತಕ್ಕೆ ಒಳಗೊಂಡ ವ್ಯಕ್ತಿಗಳಿಗೆ ಹೊಸಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಏರ್ಪಡಿಸಲಾಗಿತ್ತು.