Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on October 10

ಪಟ್ಟಣದ ಪ್ರೇರಣಾ ಸಮಾಜಸೇವಾ ಸಂಸ್ಥೆ  ಸಭಾಂಗಣದಲ್ಲಿ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್.ದಾವಣಗೆರೆ.ಬ್ರೆಡ್ ಸಂಸ್ಥೆ ಬೆಂಗಳೂರು,ಸಿಎಸ್ ಯೋಜನೆ ಜಗಳೂರು,ಶಾಲಾ ಮತ್ತು ಸಾಕ್ಷರತಾ ಇಲಾಖೆ ಜಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್ ನ ಸಮಾವೇಶ ಹಾಗೂ ನಾಯಕತ್ವ ಶಿಬಿರ ತರಬೇತಿ ಕಾರ್ಯಕ್ರಮ ಜರುಗಿತು.

 ಶಿಬಿರದಲ್ಲಿ ಶಾಸಕ ಬಿ ದೇವೆಂದ್ರಪ್ಪ   ಭಾಗವಹಿಸಿ ಕಾರ್ಯಕ್ರಮವನ್ನ ವಿದ್ಯುಕ್ತವಾಗಿ  ದೀಪಾ ಬೆಳಗಿಸುವ ಮೂಲಕ ಚಾಲನೆ ನೀಡಿ  ಮಕ್ಕಳನ್ನು ಕುರಿತು  ಮಾತನಾಡಿದರು .

ಈಗಿನ ಮಕ್ಕಳೆ ಮುಂದಿನ ಪ್ರಜೆಗಳು ಶಿಕ್ಷಕರು   ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಕಲಿಸುವುದೆ ಒಂದು ಕೆಲಸವಲ್ಲ ಮಕ್ಕಳಲ್ಲಿ ವಿವಿಧ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು .ಸಮಾಜದಲ್ಲಿ  ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅತ್ಯವಶ್ಯಕ ವಾಗಿದ್ದು ಈ ಸಂಸ್ಥೆ ವತಿಯಿಂದ ಪಠ್ಯ ಪಠ್ಯೇತರ ಚಟುವಟಿಕೆಗಳುನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಮಕ್ಕಳ ಮನೋಬಲ ಆತ್ಮಸ್ಥೈರ್ಯ.ನಾಯಕತ್ವ ಗುಣಗಳನ್ನು  ತುಂಬುತ್ತಿರುವುದು  ಸಾರ್ಥಕ  . ನಾವುಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಸದಾ ಪ್ರೋತ್ಸಾಹ ನೀಡಲು ಬದ್ದ.ಸಮಾಜದಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತವಾಗದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿಗಾವಹಿಸಿ   ಬಡ ಮಕ್ಕಳುನ್ನು  ಗುರುತಿಸಿ ನಾನು ಕೈಜೋಡಿಸಿ ನನ್ನ ಕೈಲಾದ ಸೇವೆ ಮಾಡುವ ಮೂಲಕ   ಶಿಕ್ಷಣಕ್ಕೆ ಬೇಕಾಗುವ ಪರಿಕರಗಳ ಖರ್ಚು  ಭರಿಸುವೆ ಎಂದು ಸಂಘ ಸಂಸ್ಥೆ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.  ಸಮಾಜದಲ್ಲಿ  ಹೇಳುವವರ ಸಂಖ್ಯೆ ಕಡಿಮೆಯಾಗಲಿ ಮಾಡುವವರ ಸಂಖ್ಯೆ ಹೆಚ್ಚಾಗಲಿ .ಸಂಸ್ಕಾಯುತ ಶಿಕ್ಷಣದಿಂದ ವಿಧ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಕಾಳಜಿಯಿಂದ ಅಭ್ಯಾಸ ಮಾಡುವುಂತೆ ತಿಳಿಸಿದರು.

 ಇದೆ ಸಂದರ್ಭದಲ್ಲಿ ಶಾಸಕರು ತಮ್ಮ ವಿದ್ಯಾರ್ಥಿ ದೆಸೆ ಜೀವನ ಸ್ಥಿತಿ ಗತಿ ತಿಳಿಸಿ ಮಕ್ಕಳಿಗೆ ನೈತಿಕ ಶಿಕ್ಷಣದ ಸ್ಪೂರ್ತಿ

ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ ಎಂಬ ಹಾಡು,ಬಸವಣ್ಣ,ಸರ್ವಜ್ಞರ ವಚನ,ಶ್ಲೋಕಗಳೊಂದಿಗೆ

ಮಕ್ಕಳಿಗೆ 40 ನಿಮಿಷಗಳ ಕಾಲ ನೈತಿಕ ಶಿಕ್ಷಣದ ಪಾಠ ಹೇಳಿಕೊಟ್ಟು ಸ್ಪೂರ್ತಿತುಂಬಿದರು.

ಜ್ಞಾನ ತರಂಗಿಣಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಎಸ್.ಅರವಿಂದನ್ ಮಾತನಾಡಿ,ಮಕ್ಕಳ‌ಹಕ್ಕುಗಳ, ಮಕ್ಕಳ ಲಾಲನೆ ,ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ನಿಷೇಧ, ಕಡ್ಡಾಯ ಮತ್ತು ಉಚಿತ ಶಿಕ್ಷಣ,ಬಾಲಕಾರ್ಮಿಕ ನಿಷೇಧ,ಮಕ್ಕಳ ರಕ್ಷಣಾ ಕಾಯ್ದೆಗಳ ಸಮಗ್ರ ಮಾಹಿತಿಗಳಿಗಾಗಿ  ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಜೇಕಬ್  ಮಾತನಾಡಿದರು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಸುರಕ್ಷತೆ ಸ್ವಚತೆ ನೈತಿಕ ಶಿಕ್ಷಣ ಮೌಲ್ಯಗಳ ಬಗ್ಗೆ ತಿಳಿಸುವ ಅತ್ಯುತ್ತಮ ಕಾರ್ಯಕ್ರಮವಾಗಿದ್ದು  ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಅತ್ಯವಶ್ಯಕ ಎಂದರು 

ಬಿಇಓ ಹಾಲಮೂರ್ತಿ ಮಾತನಾಡಿ ಮಕ್ಕಳ ಹಕ್ಕುಗಳುನ್ನು  ಸಮಾಜದಲ್ಲಿ ಉಲ್ಲಂಘನೆಯಾಗದಂತೆ ಜಾಗೃತಿ ಮಾಡುವ ಉದ್ದೇಶವೆ ಈ ಕಾರ್ಯಕ್ರಮ ಉದ್ದೇಶವಾಗಿದ್ದು  ಮಕ್ಕಳ ಪ್ರತಿಭೆ ಕಮರದಂತೆ ಸಮಾಜದಲ್ಲಿ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿ ಕೊಡುವುದು ಪ್ರತಿಯೊಬ್ಬ ಮನುಷ್ಯನ ಆದ್ಯಕರ್ತವ್ಯವಾಗಿದೆ. ಎಂದು ಅಭಿಪ್ರಾಯಪಟ್ಟರು.

  ಈ ಸಂದರ್ಭದಲ್ಲಿ ಪಿ ಎಸ್ ಐ ಸಾಗರ್  . ಪಾದರ್ ರೊನಲ್ಡ್.ವಿದೇಶಿ ಮಹಿಳೆ ಜಾನ್ . . ಪಾದರ್ ವಂದನೀಯ  ಪ್ರೇರಣಾ ಟ್ರಸ್ಟ್ ನ ಫಾದರ್ ಸಿಲ್ವೆಸ್ಟರ್,ಡಾನ್ ಬಾಸ್ಕೋ ಶಾಲೆಯ

ವಿದೇಶಿ ಯಾತ್ರಿಕ ಜಾನಾ,ದುರುಗಪ್ಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತೇಶ್,ಬಿಆರ್ ಸಿ ಡಿಡಿ ಹಾಲಪ್ಪ,ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ,ಫಾದರ್ ಎಜೆ,ರೊನಾಲ್ಡ್,ಪಿಎಸ್ ಐ ಸಾಗರ್, ಶಿಕ್ಷಕಿ ಲೋಕಮ್ಮ . ಡಾನ್ ಬಾಸ್ಕ್ ಸಂಸ್ಥೆ ಸಂಚಾಲಕರು  ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!