Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on October 14

ಸ್ಮಶಾನದಲ್ಲಿ ಬಿರಿಯಾನಿ ಊಟ ಸವಿದ ಪ್ರಗತಿಪರರು ಜನರಲ್ಲಿರುವ ಗೊಡ್ಡು ಸಂಪ್ರದಾಯಕ್ಕೆ ತೆರೆ ಎಳೆದು ವೈಜ್ಞಾನಿಕ ವೈಚಾರಿಕತೆ ಸಾರುವ ಹಿತಾದೃಷ್ಠಿಯಿಂದ ಜಗಳೂರಿನಲ್ಲಿ ಆಮಾವಾಸ್ಯೆ ದಿನದಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗ್ರಾಪಂ ಸದಸ್ಯರಾದ ಆಕನೂರು ಜೆಯ್ಯಣ್ಣ

ಜಗಳೂರು ಪಟ್ಟಣದ ರುದ್ರಭೂಮಿ ( ಸ್ಮಶಾನದಲ್ಲಿ) ಇಂದು ಮಾನವ ಬಂದುತ್ವ ವೇದಿಕೆ ಹಾಗು ಪ್ರಗತಿಪರ ಸಂಘಟನೆ ನೇತೃತ್ವದಲ್ಲಿ ಮೌಡ್ಯ ವಿರೋಧಿ ಕಾರ್ಯಕ್ರಮ‌ ಅಮವಾಸೆ ಹಾಗು ಗ್ರಹಣ ಬಗ್ಗೆ ಇರುವ ಕೀಳಿರಿಮೆ‌ ಮತ್ತು ಮೌಡ್ಯ ಮುಕ್ತ ಸಮಾಜಕ್ಕಾಗಿ ಜಾಗೃತಿ ಮೂಡಿಸಲು ಇಂದು ಸ್ಮಶಾನದಲ್ಲಿ ಆಹಾರ ಸೇವಿಸಿ ವಾಸ್ತವ್ಯ ಹೂಡಿ ವಿನೂತನ ಆಚರಣೆಗೆ ಸಾಕ್ಷಿಯಾಗಿದ್ದಾರೆ.

ಮಾನವ ಬಂಧುತ್ವ ವೇದಿಕೆ ವತಿಯಿಂದ ಸುಮಾರು 10 ವರ್ಷಗಳಿಂದ ಮೌಡ್ಯಮುಕ್ತ ಸಮಾಜ ನಿರ್ಮಾಣ‌ ಮಾಡಲು ಸಚಿವ ಜಾರಕಿಹೊಳಿ ನೇತೃತ್ವದಲ್ಲಿ ಈ ರೀತಿಯ ಹತ್ತು ಹಲವು ಕಾರ್ಯಕ್ರಮಗಳುನ್ನು ಆಯೋಜನೆ ಮಾಡುವ ಮೂಲಕ ಸಮಾಜದಲ್ಲಿರುವ ಗೊಡ್ಡು ಸಂಪ್ರದಾಯಗಳುನ್ನು ಹೋಗಲಾಡಿಸಿ ಭಯಮುಕ್ತವಾಗಿ ಜೀವನ ನಡೆಸಲು ಇಂತ ಕಾರ್ಯಕ್ರಮಗಳ ಮೂಲಕ ಜಾಗೃತಿ ಗೋಳಿಸುತ್ತಿರುವುದು ಶ್ಲಾಘನೀಯ ಎಂದು ಮಾನವ ಬಂಧುತ್ವ ವೇದಿಕೆ ಕಾನೂನು ಸಲಹೇಗಾರ ಮರೆನಹಳ್ಳಿ ಬಸವರಾಜ್ ತಿಳಿಸಿದರು.

ಪ್ರಾಂಶುಪಾಲರಾದ ಪ್ರಗತಿಪರ ಮುಖಂಡ ಎಡಿ ನಾಗಲಿಂಗಪ್ಪ ಮಾತನಾಡಿ ಆಮವಾಸ್ಯೆ‌ದಿನದಂದು ಮಸಣದಲ್ಲಿ ಹೋದರೆ ಆಪಶಕುನ ಎಂಬ ಮೌಡ್ಯತೆ ಕಂದಾಚಾರಗಳುನ್ನು ಕೆಲವರು ಬಿಂಬಿಸಿ ಸಮಾಜವನ್ನ ಭಯಗ್ರಸ್ಥ ವಾತವರಣ ಸೃಷ್ಠಿಸಿ ವೈಜ್ಞಾನಿಕತೆ ಕಾಲಮಾನದಿಂದ ಅನಾದಿ ಕಾಲದತ್ತ ಕೊಂಡುಯ್ಯುವ ಅನಾಗರೀಕ ಜನರಿಂದ ದೂರವಿದ್ದು ಪ್ರಪಂಚದ ವೈಜ್ಞಾನಿಕ ವಿಚಾರಗಳುನ್ನು ಅರಿಯುವ ಮೂಲಕ ಸಮಾಜದಲ್ಲಿ ನಡೆಯುವ ಗೊಡ್ಡು ಸಂಪ್ರಾದಾಯಗಳಿಗೆ ತೆರೆ ಎಳೆದು ವೈಜ್ಞಾನಿಕ ವೈಚಾರಿಕತೆ ಸಾರುವ ನಿಟ್ಟಿನಲ್ಲಿ ಇಂತ ಕಾರ್ಯಕ್ರಮಗಳು ಸಾಕ್ಷಿಯಾಗಲಿವೆ. ಎಂದರು

ಪ್ರಗತಿಪರ ಪರ ಮುಖಂಡರಾದ ಮಾಜಿ ತಾ.ಪಂ.ಸದಸ್ಯ ಮರೇನಹಳ್ಳಿ ಬಸವರಾಜ್ , ಪ್ರಾಂಶುಪಾಲರು ನಾಗಲಿಂಗಪ್ಪ , ನಿಂಗಪ್ಪ , ಆಕನೂರು ಗ್ರಾ.ಪಂ.ಸದಸ್ಯ ಜಯ್ಯಣ್ಣ ಗೌರಿಪುರ ರಾಜಣ್ಣ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸತೀಶ್ ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್ , ಮುಖಂಡ ದಿಬ್ಬದಹಳ್ಳಿ ನೂರ್ ಅಹಮದ್ ,ಸೇರಿದಂತೆ ಹಲವರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!