Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 15
ಸುದ್ದಿ ಜಗಳೂರು:
ಜಗಳೂರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಭಾನುಬಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ದಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಮತ್ತು ನೂತನ ಜಿಲ್ಲಾ ಜನಜಾಗೃತಿ ವೇದಿಕೆ ಅದ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ದೀಪಾ ಬೆಳಗಿಸುವ ಮೂಲಕ ಶಾಸಕ ಬಿ ದೇವೆಂದ್ರಪ್ಪ ಚಾಲನೆ ನೀಡಿ ನಂತರ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು
ಗಾಂಧಿಜಿಯವರು ರಾಮರಾಜ್ಯದ ಪರಿಕಲ್ಪನೆ ಪ್ರತೀಕವಾಗಿ ಗ್ರಾಮಸ್ವರಾಜ್ಯ ಇಂಡಿಯಾ .ಸ್ವದೇಶಿ ವಸ್ತುಗಳ ಬಳಕೆ .ಸ್ವಚತೆ ಗ್ರಾಮಿಣ ಬಾಗಗಳಲ್ಲಿ ರಸ್ತೆ ಅಭಿವೃದ್ಧಿಯಂತ ಮೂಲ ಸೌಕರ್ಯಗಳನ್ನು ಒದಗಿಸಿ ರಾಮ ರಾಜ್ಯದ ಕನುಸು ಕಂಡಿದ್ದರ ಫಲವಾಗಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯತಾ ದಾಪುಗಾಲು ಹಾಕುತ್ತಿರುವುದು ಶ್ಲಾಘನೀಯ ಆದರೆ ಇನ್ನು ಕೂಡ ಪರಿಣಾಮಕಾರಿಯಾಗಿ ಅಭಿವೃದ್ಧಿ ಯೋಜನೆಗಳು ತಲುಪಬೇಕಿದೆ ಎಂದು ಅಭಿಪ್ರಾಯಪಟ್ಟರು .. ಸರ್ಕಾರಗಳ ಜೊತೆಗೆ ಇಂತ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸಂಸ್ಥೆಗಳು ಗಾಂಧಿಜಿಯವರ ಕನುಸು ನೆನಸು ಮಾಡುವ ಸಂಕಲ್ಪದೊಂದಿಗೆ ಹತ್ತು ಹಲವು ಕಾರ್ಯಕ್ರಮ ನೀಡುವ ಮೂಲಕ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ಶಾಸಕರು ಸ್ಮರಿಸಿದರು.
ಗಾಂಧಿಜಿಯವರು ಸ್ವಾತಂತ್ರ್ಯ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ದೇಶಕ್ಕೆ ತನ್ನದೆಯಾದ ಅವರ ಕೊಡುಗೆ ಆಪಾರ ಅವರ ಸ್ಮರಣೆ ನಿತ್ಯ ಮಾಡಿದರು ಸಾಲದು ಎಂದು ತಿಳಿಸಿದರು. ನಮ್ಮ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಗೃಹ ಲಕ್ಚ್ಮೀ 2000 ಸಾವಿರ ರೂಗಳುನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಿದ್ದು ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಿದೆ. ಗೃಹ ಜ್ಯೋತಿ ಯೋಜನೆಗಳಂತ ವಿವಿಧ ಯೋಜನೆಗಳು ಜನಪರವಾಗಿವೆ ಆದ್ದರಿಂದ ಕೊಡುಗೆ ನೀಡಿರುವ ಸರ್ಕಾರಗಳುನ್ನು ಮಹಿಳೆಯರು ಸ್ಮರಿಸಬೇಕು.
ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸಮಾಜದಲ್ಲಿ ಅರಿವು ಮತ್ತು ಅಭಿವೃದ್ಧಿಗೆ ಸಮಾಜ ಪರಿವರ್ತನೆಯಾಗಲು ಹಲವು ಕಾರ್ಯಗಳುನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ .ಕುಟುಂಬದ ಆದಾರ ಸ್ತಂಭವಾಗಿದ್ದ ವ್ಯಕ್ತಿಗಳು ಮದ್ಯಪಾನ ಮಾಡುವುದರಿಂದ ಅನೇಕ ಕುಟುಂಬಗಳು ಬೀದಿಗೆ ಬರದಂತೆ ಕುಡಿತದ ಚಟ ಬಿಡಿಸಿ ಮದ್ಯವ್ಯಸನಮುಕ್ತ ಕಾರ್ಯ ಸಾರ್ಥಕ .
ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಮಹಿಳಾ ಸಬಲಿಕರಣ .ವಿವಿಧ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿದ್ದು ಮಹಿಳೆಯರು ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು ಉತ್ತಮ ಮತ್ತು ನೆಮ್ಮದಿ ಜೀವನ ಸಾಗಿಸುವಂತೆ ಕಿವಿ ಮಾತು ಹೇಳಿದರು.
ಧರ್ಮಸ್ಥಳ ಗ್ರಾಮ ಅಭಿವೃದ್ದಿ ಜಿಲ್ಲಾ ನಿರ್ದೇಶಕ ಎಸ್ .ಜನರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿದರು ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ ಅಂಗವಾಗಿ ನಮ್ಮ ಸಂಸ್ಥೆ ವತಿಯಿಂದ ಪಟ್ಟಣದಲ್ಲಿ ಮಹಾತ್ಮ ಗಾಂಧಿ ವೃತ್ತದಿಂದ ಗಾಂಧಿ ಭಾವಚಿತ್ರ ಮಹಿಳೆಯರ ಕುಂಭಮೇಳದೊಂದಿಗೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ಜಾಥ ತೆರಳುವ ಮೂಲಕ ವಿಶೇಷವಾಗಿ ಕಾರ್ಯಕ್ರಮ ಆಯೋಜನೆಗೆ ಸಾಕ್ಷಿಯಾಗಿದ್ದೆವೆ.
ಗಾಂಧಿಜಿ ಕಂಡ ಕನಸು ಗ್ರಾಮಗಳ ಉದ್ದಾರ ಎಂಬ ಕನಸು ಆಗಿತ್ತು .ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ಜನರು ಆರ್ಥಿಕವಾಗಿ ಅಭಿವೃದ್ಧಿಯಾಗಲು ನಮ್ಮ ಸಂಸ್ಥೆ ಸಾಲ ಸೌಲಭ್ಯ ನೀಡುವ ಮೂಲಕ ವಿವಿಧ ಸ್ವಯಂ ಉದ್ಯೋಗ ಕಲ್ಪಿಸಿ ಮಹಿಳೆಯರು ಕುಟುಂಬದ ನಿರ್ವಹಣೆ ಜವಾಬ್ದಾರಿಯೊಂದಿಗೆ ಜನರ ಆರ್ಥಿಕ ಮಟ್ಟ ಸುಧಾರಿಸಲು ಪ್ರಯತ್ನಿಸುತಾ ಬಂದಿದ್ದು ಸ್ವಾಸ್ಥ್ಯ ಸಮಾಜಕ್ಕಾಗಿ ಶ್ರಮಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೆದಿಕೆ ಅಧ್ಯಕ್ಷ ಸ್ಥಾನಕ್ಕೆ ನೂತನ ಅದ್ಯಕ್ಷರಾಗಿ ಪಿ ಎಸ್ ಅರವಿಂದನ್ ರವರಿಗೆ ಸಂಸ್ಥೆಯ ಮುಖ್ಥರಿಂದ ಹಾಗೂ ಕ್ಷೇತ್ರದ ಶಾಸಕರಿಂದ ಅಧಿಕಾರ ಅಸ್ತಂತರಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಜನಜಾಗೃತಿ ವೇದಿಕೆ ಅಧ್ಯಕ್ಷ ಪಿ ಎಸ್ ಅರವಿಂದನ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೆದಿಕೆ ರಾಜ್ಯ ಅದ್ಯಕ್ಷರಾದ ಷಡಕ್ಷರಪ್ಪ. ಪ್ರಾದೇಶಿಕ ನಿರ್ದೇಶಕಿ ಗೀತಾ .ವೃತ್ತ ನಿರೀಕ್ಷಕರಾದ ಶ್ರೀನಿವಾಸ್ .ನಿವೃತ್ತ ಪ್ರಾಂಶುಪಾಲ ಪ್ರಭಾಕರ್ ಲಕ್ಕೊಳ್.ಗೌರವ ಸಲಹೇ ಗಾರರಾದ ವಿಲಿಯಂದ್ ಮಿರಾಂದ್.ನೂತನ ಉಪಾಧ್ಯಕ್ಷ ಮಂಜುನಾಥ ಗುಂಡಗತ್ತಿ.ಸೇರಿದಂತೆ ಹಾಜರಿದ್ದರು.