Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಅಕ್ಟೋಬರ್ 19

ಜಗಳೂರು ನ್ಯೂಸ್:-

 ಶಾಸಕರ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ 

  ನೂತನ ನ್ಯಾಯಬೆಲೆ ಅಂಗಡಿ ಹಾಗೂ ಗರಡಿ ಮನೆ ಉದ್ಗಾಟನೆ ಕಾರ್ಯಕ್ರಮಕ್ಕೆ  ಆಗಮಿಸಿದ ಹಿನ್ನೆಲೆಯಲ್ಲಿ   

ಶಾಸಕ  ‌ ಬಿ ದೇವೆಂದ್ರಪ್ಪರವರಿಗೆ ಆತ್ಮೀಯವಾಗಿ   ಸ್ವಗ್ರಾಮದಲ್ಲಿ  ಗ್ರಾಮಸ್ಥರು ಅದ್ದೂರಿ  ಸ್ವಾಗತಿಸಿದರು ನಂತರ ಬಹು ದಿನಗಳ ಕನಸಿನ ಬೇಡಿಕೆಯಾದ ನ್ಯಾಯಬೆಲೆ ಅಂಗಂಡಿ ಹಾಗೂ ವ್ಯಾಯಾಮ ಶಾಲೆ ಉದ್ಗಾಟನೆ ಮಾಡಿ ವೇದಿಕೆ ಕಾರ್ಯಕ್ರಮವನ್ನುದ್ದೆಶಿಸಿ ಶಾಸಕರು ಮಾತನಾಡಿದರು 

  ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿ ನನ್ನ ಗೆಲುವಿಗೆ ಕ್ಷೇತ್ರದ ಜನರ ಅಶಿರ್ವಾದದಿಂದ ನಾನು ಚುನಾವಣೆಯಲ್ಲಿ ಜಯಗಳಿಸಲು 

ಸಹಕಾರಿಯಾಗಿದ್ದಾರೆ ಎಂದರೆ ಅದು

ನಮ್ಮ ಊರಿನ ದೇವರುಗಳ ಅಶಿರ್ವಾದ ಈ ನೆಲದ ಶಕ್ತಿ   ಕುಗ್ರಾಮವಾದ ಚಿಕ್ಕಮ್ಮನಹಟ್ಟಿಯಲ್ಲಿ  ಜನಿಸಿ ಬಾಲ್ಯದಲ್ಲಿ ಬಡತನ ಅನುಭವಿಸಿ ನಾನು ಜೀವನ ಕಟ್ಟಿಕೊಳ್ಳಲು ಸಹಕಾರ ನೀಡಿದ ಎಲ್ಲಾ ನನ್ನ ಗ್ರಾಮದ ಹಿರಿಯರಿಗೆ   ನನ್ನ ಈ ಹಿಂದಿನ ನಿಜ ಜೀವನ ನಿಮಗೆ ತೆರೆದಿಟ್ಟ ಪುಸ್ತಕವಿದ್ದಂತೆ  ನಾನು ಹುಟ್ಟಿ ಬೆಳೆದ ಗ್ರಾಮದಲ್ಲಿ ಕಷ್ಟದ ದಿನಗಳಲ್ಲಿ ನನಗೆ ಸಹಾಯ‌ ಮಾಡಿದುಂಟು ಎಂದು ಸ್ಮರಿಸಿದರು ಶಾಸಕರು

ಇದೀಗ ನಾನು ಶಾಸಕನಾಗಿ ಆಯ್ಕೆಯಾಗಿದ್ದು ಗ್ರಾಮದಲ್ಲಿ  ಅನಗತ್ಯ ವಾಗಿ ಗೊಂದಲಗಳು ಬೇಡ ಜಾತಿ ಜಾತಿಗಳ ಮದ್ಯೆ ದ್ವಷ ಬೇಡ ಗ್ರಾಮದಲ್ಲಿ  ಸಾಮರಸ್ಯದಿಂದ ಜೀವನ ನಡೆಸಲು ಸಹಕಾರ ನೀಡುವೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಗ್ರಾಮದೇವತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕಲ್ಪಿಸಿ ಕೊಡುವೆ  ತಾಲ್ಲೂಕಿಗೆ ಉತ್ತಮ ಆಡಳಿತ ನೀಡುವ ಮೂಲಕ ಚಿಕ್ಕಮ್ಮನಹಟ್ಟಿ ಗ್ರಾಮವನ್ನ ದೊಡಮ್ಮನಹಟ್ಟಿ ಮಾಡುವ ಸಂಕಲ್ಪ ಮಾಡಲು ಬದ್ದವಾಗಿದ್ದೆನೆ  .

ನ್ಯಾಯಬೆಲೆ ಪಡಿತರ ಅಕ್ಕಿ ನೀಡುತ್ತಿರುವ ಶಾಸಕರು

ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಹೆಚ್ಚು ದನ ಕರುಗಳು ಇರುವುದರಿಂದ  ‌ಪಶು ಆಸ್ಪತ್ರೆ    ಹಾಗೂ  ಅಗತ್ಯ ಮೂಲ ಸೌಲಭ್ಯಗಳ  ಅಭಿವೃದ್ಧಿ ಒತ್ತು ನೀಡುತ್ತೆನೆ ಇಲ್ಲಿ .ಎಸ್ಸಿ .ಎಸ್ಟಿ .ಬಿ ಸಿ ಎಂ. ಸಮುದಾಯಗಳು ವಾಸಿಸುವ ಕುಗ್ರಾಮದಲ್ಲಿ ಈ ಹಿಂದೆ ನ್ಯಾಬೆಲೆ ಅಂಗಡಿ ಇಲ್ಲದೆ ಕಣ್ವಕುಪ್ಪೆ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಪಡಿತರ ಅಕ್ಕಿಯನ್ನ ಎರಡು ಮೂರು ಕಿಲೋಮಿಟರ್  ಹೊತ್ತು ತರಬೇಕಾಗಿತ್ತು ನ್ಯಾಯಬೆಲೆ ಅಂಗಡಿ ಸ್ಥಾಪನೆ ಹೋರಾಟ ಬಹುದಿನದ ಹೋರಾಟ ಆದರೆ ನಾನು ಶಾಸಕನಾಗಿ ಆಯ್ಕೆಯಾಗಿ ಕೇವಲ ಮೂರು ತಿಂಗಳಲ್ಲಿಯೆ   ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒಂದು ತಿಂಗಳಲ್ಲಿ ಮಂಜೂರು ಮಾಡಿಸಿ  ನ್ಯಾಯಬೆಲೆ ಅಂಗಡಿ ಸ್ಥಾಪನೆ ಮೂಲಕ ನನಗೆ ಅದ್ದೂರಿಯಾಗಿ ಸ್ವಾಗತಿಸಿರುವುದು ನನಗೆ ಸಂತೋಷ ತಂದಿದೆ.ಈ ನ್ಯಾಯಬೆಲೆ ಅಂಗಡಿ ಮಾಲಿಕರ ಸ್ಥಾನದ ಮೀಸಲಾತಿ ಸಹ ಅಂಗವಿಕಲರಿಗೆ ಸರ್ಕಾರ  ಆದ್ಯತೆ ನೀಡಿದ್ದರಿಂದ ಗ್ರಾಮದ ವಿಶಿಷ್ಟ ಚೇತನ ರವಿ ಎಂಬ  ಯುವಕ ಪದವಿದರ ಮಾಲಿಕನಾಗಿದ್ದು  ಉತ್ತಮ ರೀತಿಯಲ್ಲಿ ಪಡಿತರ ಅಕ್ಕಿ ನೀಡುವಂತೆ ಸೂಚನೆ ನೀಡಿದರು.

ತಹಶೀಲ್ದಾರ್ ಸೈಯದ್ ಕರಿಂ ಉಲ್ ಮಾತನಾಡಿ ನಾನು ಈ ಹಿಂದೆ ಆಹಾರ ಇಲಾಖೆಯಲ್ಲಿ ಶಿರಾಸ್ತೆದಾರರಾಗಿ ಕೆಲಸ ನಿರ್ವಹಿಸಿದ ಅನುಭವವಿದ್ದು  ಸರ್ಕಾರದಿಂದ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿಸುವುದು ಸುಲಭದ ಕೆಲಸವಲ್ಲ ಶಾಸಕರ ಸತತ ಪ್ರಯತ್ನದ ಪರಿಶ್ರಮದಿಂದ ಸ್ಥಾಪನೆಯಾಗಿದ್ದು ಉತ್ತಮವಾಗಿ ಮಾಲಿಕರು ನಿರ್ವಹಣೆ ಮಾಡಿಕೊಂಡು ಹೋಗುವಂತೆ ಸಲಹೇ ನೀಡಿದರು.

ಗ್ರಾಮದ ಮುಖಂಡ ಹಾಗೂ ಶಾಸಕರ ಬಾಲ್ಯದ ಗೆಳೆಯ ಹನುಮಂತಪ್ಪ ಮಾತನಾಡಿ ನಾವುಗಳು ಅಂದು ಪದವಿ ಪಡೆದು ಕೂಲಿ ನಾಲಿ ಮಾಡಿಕೊಂಡು ಜೀವನ ಕಟ್ಟಿಕೊಳ್ಳಲು ಹರಸಾಹಸ ಪಟ್ಟ ದಿನಗಳಲ್ಲಿ ನಮ್ಮೂರಿನಲ್ಲಿ ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ ಜೀವನ ನಡೆಸುತಾ ಬಂದಿದ್ದೆವೆ. ನಮಗೆ ಅಂದಿನ ದಿನಗಳಲ್ಲಿ ನಮ್ಮ ಜೀವನಕ್ಕೆ ದಾರಿದೀಪಾವಾಗಿ ದಿ ಡಾ ತಿಪ್ಪೇಸ್ವಾಮಿ ಯವರ ನಾಲಂದ ಕಾಲೇಜು ನಮಗೆ ಆಶ್ರಯ ನೀಡಿದರ ಫಲವಾಗಿ ಡಿ ಗ್ರೂಪ್ ನೌಕರಿ ಸೇರಿದ ದಿನಗಳಲ್ಲಿಯು ಸಹ ನಾನು ಮತ್ತು ಶಾಸಕ‌ ದೇವೆಂದ್ರಪ್ಪ ರವರು  ಸೈಕಲ್ ನಲ್ಲಿ ನಮ್ಮೂರಿಂದ ಅಂದು ತೆರಳುವ ಸಂದರ್ಭದಲ್ಲಿ ಸೈಕಲ್ ಪಂಚರಾಗಿತ್ತು ನಂತರ ನಡೆದುಹೋದೆವು ನಮ್ಮ ಪರಿಶ್ರಮದ ಹಾದಿಯ ಕಥಾನ  ಸ್ಮರಿಸಿಕೊಂಡರು.

ನ್ಯಾಯಬೆಲೆ ಅಂಗಂಡಿ ಮಾಲಿಕರ ಸಂಘದ ಅಧ್ಯಕ್ಷ ಓಮಣ್ಣ ಮಾತನಾಡಿದರು   ಈ ಸಂದರ್ಭದಲ್ಲಿ  ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ‌ಮಹೇಶ್.ಗ್ರಾಪಂ ಅದ್ಯಕ್ಷ ಕಾಟಪ್ಪ.ಕಾಂಗ್ರೆಸ್ ಮುಖಂಡ ಕಲ್ಲೇಶ್ ರಾಜ್ ಪಟೇಲ್.ಗ್ರಾಪಂ ಸದಸ್ಯ ಮಂಜುನಾಥ.ಪುಡ್ ಶಿರಾಸ್ತೆದಾರರಾದ ಅಜ್ಜಪ್ಪ ಪತ್ರೆ .ಶಿವಪ್ರಕಾಶ್.ಮಾಜಿ ತಾಪಂ ಅದ್ಯಕ್ಷ ಸಣ್ಣಸೂರಜ್ಜ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಕಾಂಗ್ರೆಸ್ ‌ಮುಖಂಡರಾದ ಗುರುಮೂರ್ತಿ.ಜಗಳೂರುಯ್ಯ.ಪಿಡಿಓ ವಾಸು. ಶಿವುಕುಮಾರ್ ಗ್ರಾಮಸ್ಥರಾದ ಕಾಟಪ್ಪ.ಎಕೆ ರಂಗಪ್ಪ. ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!