ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕ ಕಛೇರಿ ಆವರಣದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮ ಮತ್ತು ಡಾ ಬಾಬುಜಗಜೀವನ್ ರಾಮ್ ನಿಗಮಗಳ ವತಿಯಿಂದ ಆರ್ಹಫಲಾನುಭವಿಗಳಿಗೆ ನೀಡುತ್ತಿರುವ ದ್ವಿಚಕ್ರ ವಾಹನ ಸರಕು ಸಾಗಾಣಿಕೆ ವಿತರಣೆ ಕಾರ್ಯಕ್ರಮ ಜರುಗಿತು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಅಕ್ಟೋಬರ್ 19
ಕಾರ್ಯಕ್ರಮದಲ್ಲಿ ಆರ್ಹ ಫಲಾನುಭವಿಗಳಿಗೆ ದ್ವಿಚಕ್ರವಾಹನ ಬೈಕ್ ವಿತರಣೆ ಮಾಡಿ ಶಾಸಕ ಬಿ ದೇವೆಂದ್ರಪ್ಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು ಎಸ್ಸಿ ಎಸ್ಟಿ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಷ್ಠರ ಕಲ್ಯಾಣಕ್ಕಾಗಿ ಇಂತ ಹಲವು ಯೋಜನೆಗಳ ಮೂಲಕ ಹಿಂದೂಳಿದಿರುವ ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರಗಳು ಶ್ರಮಿಸುತ್ತಿವೆ. ಫಲಾನುಭವಿಗಳು ಸರ್ಕಾರಿ ಸೌಲಭ್ಯಗಳನ್ನು
ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು.ಇದೀಗ ನಿಗಮದ ಸೌಲಭ್ಯದಿಂದ ನೀವು ಪಡೆದ ಬೈಕ್ ಸವಾರರು ನೀಯಮ ಉಲ್ಲಂಘನೆ ಮಾಡದಂತೆ ಡ್ರೈವಿಂಗ್ ಲೇಸ್ ನ್ಸ್ ಹಾಗೂ ಇನ್ನಿತರೆ ದಾಖಲೆ ಹೊಂದಬೇಕು ಆನಾಹುತ ಸಂಬಂಧಿಸಿದ ಸಂದರ್ಭದಲ್ಲಿ ನಿಮಗೆ ಸಿಗುವ ವಿಮಾ ಸೌಲಭ್ಯಗಳಿಗೆ ಅತ್ಯಂತ ಸಹಕಾರಿಯಾಗಲಿದೆ.
ಮುಂಗಾರು ಮಳೆ ಕೊರತೆಯಿಂದ ಹಿಂಗಾರು ಕೈಕೊಟ್ಟಿದೆ ತಾಲೂಕಿನಲ್ಲಿ ಬರ ತಾಂಡವಾಡುತ್ತಿದೆ.ಇದ್ದುದ್ದರಲ್ಲಿಯೆ ಸರಳ ಜೀವನ ಸಾಗಿಸೋಣ ಸರಕಾರದ ಯೋಜನೆಗಳು ಕುಟುಂಬ ನಿರ್ವಹಣೆಗೆ ಪೂರಕವಾಗಲಿವೆ.ಅಧಿಕಾರಿಗಳು ಮಾಡುವ ಕೆಲಸ ವಿಳಂಬವಾದರೆ ಅದು ಒಂದು ಭ್ರಷ್ಟಾಚಾರವಾದಂತೆ ಇನ್ನೊಂದು ಮುಖ ಕರ್ತವ್ಯ ಪಾಲಿಸಬೇಕು. ಶಾಸಕ ಬಿ ದೇವೆಂದ್ರಪ್ಪ
ಕೆಲವರು ನನ್ನ ಮೇಲೆ ವಿನಾಕಾರಣ ಸುಳ್ಳು ಸೃಷ್ಠಿಸಿ ಅಪಪ್ರಚಾರ ಮಾಡುವವರಿದ್ದಾರೆ.ನಾನು ಸೌಮ್ಯ ಸ್ವಭಾವದವನು ಅಧಿಕಾರಿಗಳಿಗೆ ನಾನು ಮನುಷ್ಯ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಇದೆ.ನನ್ನ ಬಗ್ಗೆ ಅಪಪ್ರಚಾರ ಮಾಡಬೇಡಿ ನಮಗೆ ಸಲಹೆ ಸೂಚನೆ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ತಿಳಿಸಿದರು..
ವಾಲ್ಮೀಕಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಮಹಾವೀರ ಸಜ್ಜನ್ ಮಾತನಾಡಿ ಮಹರ್ಷಿ ವಾಲ್ಮೀಕಿ ಇಲಾಖೆಯಿಂದ 14 ಲಕ್ಷದ 80.೦೦೦ ಸಾವಿರ ರೂಗಳಲ್ಲಿ
ಕ್ಷೇತ್ರದ 25 ಫಲಾನುಭವಿಗಳಿಗೆ ದ್ವಿಚಕ್ರವಾಹನ ವಿತರಿಸಲಾಗಿದೆ.
ಶಾಸಕರಿಂದ ಮಹರ್ಷಿ ವಾಲ್ಮೀಕಿ ಹಾಗೂ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ
ನಿಗಮದಿಂದ ಮಹಿಳಾ ಉದ್ಯಮಶೀಲಾ ₹2ಲಕ್ಷ ಸಾಲಸೌಲಭ್ಯ,ಸಾರಥಿ ಯೋಜನೆ,ಎಂಸಿಎಫ್ ₹ 2.5ಲಕ್ಷ ಗಂಗಾಕಲ್ಯಾಣ ಯೋಜನೆಯಡಿ ₹.3.5 ಲಕ್ಷ ವೆಚ್ಚಭರಿಸಲಿದೆ.ಭೂ ಒಡೆತನ ಯೋಜನೆಯಡಿ 20ಲಕ್ಷ ವೆಚ್ಚದಲ್ಲಿ 1ಎಕರೆ 10 ಲಕ್ಷ ಸಬ್ಸಿಡಿ ಇದೆ ಅಭಿವೃದ್ಧಿ ನಿಗಮ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು..
ತಹಶೀಲ್ದಾರ್ ಸಯ್ಯದ್ ಖಲೀಮ್ ಮಾತನಾಡಿ,ಶಾಸಕರ ನಿರ್ದೇಶನದಂತೆ ಸರಕಾರದ ಆದೇಶಗಳನ್ನು ಅಧಿಕಾರಿಗಳು ಪಾಲಿಸಬೇಕು.ನಿಗದಿತ ಅವಧಿಯಲ್ಲಿ ಸೌಲಭ್ಯ ಗಳನ್ನು ಸಮರ್ಪಕವಾಗಿ ಒದಗಿಸಲು ಮುಂದಾಗಬೇಕು ಎಂದರು.
ಸಂದರ್ಭದಲ್ಲಿ ಕಣ್ಣಕುಪ್ಪೆ ಸಿದ್ದಣ್ಣ
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಸಮಾಜಕಲ್ಯಾಣ ಇಲಾಖೆಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ,ಪಿಎಸ್ ಐ ಸಾಗರ್,ಅಹ್ಮದ್ ಅಲಿ,ಟಿಡಿಓ ನಾಗೇಂದ್ರಪ್ಪ. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ,ಸೇರಿದಂತೆ ಇದ್ದರು.