ಶುಕ್ರದೆಸೆ ನ್ಯೂಸ್
ಶಾಸಕರಿಂದ ಅಮೃತ ಕಳಸ ಯಾತ್ರೆಗೆ ಚಾಲನೆ ಮಣ್ಣು ಪಂಚಭೂತಗಳಲ್ಲಿ ಶ್ರೇಷ್ಠವಾದದ್ದು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಿದೆ:ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಜಗಳೂರು ಸುದ್ದಿ:
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 19
ಪಟ್ಟಣದಲ್ಲಿರು ಶಾಸಕರ ನಿವಾಸದ ಬಳಿ ತಾಲೂಕು ಆಡಳಿತ ಮತ್ತು,ಪಟ್ಟಣ ಪಂಚಾಯಿತಿ ಕಾರ್ಯಾಲಯ,ನೆಹರು ಯುವ ಕೇಂದ್ರ,ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನನ್ನ ಮಣ್ಣು,ನನ್ನ ದೇಶ ಅಭಿಯಾನ ಅಮೃತ ಕಳಸ ಯಾತ್ರೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ವಿಧಿ ಸ್ವಿಕರಿಸಿ ಕಾರ್ಯಕ್ರಮವನ್ನದ್ದೇಶಿಸಿ ಶಾಸಕರು ಮಾತನಾಡಿದರು
ದೇಶ ಕಾಯುವ ಯೋಧರು ಮತ್ತು ದೇಶದ ಬೆನ್ನೆಲುಬು ನಮ್ಮ ರೈತರಿಗೆ ಗೌರವ ಸಂಖೇತದ ನನ್ನ ದೇಶ ನನ್ನ ಮಣ್ಣು ಎಂಬ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ವಾಗಿದೆ .
ರೈತರ ಜಮೀನಿನಲ್ಲಿ ಫಲವತ್ತತೆಯ ಮಣ್ಣಿನಿಂದ ಅನೇಕ ಕೃಷಿ .ಪ್ರಕೃತಿಯಲ್ಲಿ ಗಿಡಮರಗಳು ಫಲ ಪುಷ್ಪಗಳನ್ನು ಸಮಾಜಕ್ಕೆ ನೀಡುವಂತೆ.ಮನುಷ್ಯ ಪರೋಪಕಾರಿಯಾಗಬೇಕು ಮತ್ತೊಬ್ಬರಿಗೆ ಕೇಡು ಬಯಸದ ಉಸಿರಿರುವ ತನಕ ಅನ್ಯರಿಗೆ ಸಹಕಾರಿಯಾಗುವಂತ ಸಮಾಜ ನಮ್ಮದಾಗಲಿ ಎಂದು ಆಶಿಸಿದರು..
ದೆಹಲಿಯಿಂದ ಪ್ರಧಾನಿ ಮೋದಿಜಿ ಅವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶದಂತೆ ನಮ್ಮ ಮಣ್ಣು ನನ್ನ ದೇಶ ಅಭಿಯಾನದಡಿ ರಾಷ್ಟ್ರವ್ಯಾಪಿ ನಡೆಯುವ ಅಮೃತ ಕಳಸಯಾತ್ರೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ್ ಸಯ್ಯದ್ ಖಲೀಮ್ ಉಲ್ ಮಾತನಾಡಿ,ಭವಿಷ್ಯದಲ್ಲಿ ಈಗಿನ ವಿದ್ಯಾರ್ಥಿಗಳೆ ದೇಶದ ಪ್ರಜೆಗಳು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ದೇಶದಲ್ಲಿ ಅದ್ವಿತೀಯ ಕೀರ್ತಿ ಪತಾಕಿ ಹಾರಿಸಬೇಕು.ಮಣ್ಣಿನ ಮಹತ್ವ ಅರಿತುಕೊಂಡು ಪ್ರಕೃತಿ ಸಂಪತ್ತು ಉಳಿಸಿ ಬೆಳೆಸುವಂತೆ ಕಿವಿ ಮಾತು ಹೇಳಿದರು..
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ ಪ್ರಸ್ತುತದಲ್ಲಿ ಮಣ್ಣಿನ ಸಂರಕ್ಷಣೆ ಕ್ಷೀಣಿಸಿ ಫಲವತ್ತತೆಯಿಲ್ಲದೆ ರೈತನ ಭೂಮಿಗಳು ಮರುಭೂಮಿಯಂತಾಗುವಂತ ಪರಿಸ್ಥಿತಿ ಎದುರಾಗಿದೆ. ಯುವ ಸಮೂಹ ಸಮಾಜದಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ.
ಸಂದರ್ಭದಲ್ಲಿ ಶಾಸಕ ಪತ್ನಿ ತಿಪ್ಪಮ್ಮ ದೇವೇಂದ್ರಪ್ಪ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ್,ಮಹೇಶ್,ಇಓ ಕರಿಬಸಪ್ಪ,ಬಾಲಸುಬ್ರಮಣ್ಯ,ಎಇಇ ಶಿವಕುಮಾರ್,ಪ.ಪಂ ನಾಮನಿರ್ದೇಶಿತ ಸದಸ್ಯರಾದ ಗೋಸಾಯಿ,ಶಾಂತಕುಮಾರ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜೇಶ್ವರಿ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ,ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ,ಆರೋಗ್ಯ ನಿರೀಕ್ಷಕ ಖಿಫಾಯತ್,ಸೇರಿದಂತೆ ಇದ್ದರು.