Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಅಕ್ಟೋಬರ್ 19

ವೈದ್ಯರು ರೋಗಿಗಳ‌ಪಾಲಿಗೆ ಸಾಕ್ಷಾತ್ ದೈವಸ್ವರೂಪ:ಶಾಸಕ.ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ:ರೋಗಿಗಳ‌ ಪಾಲಿಗೆ ವೈದ್ಯರು ಸಾಕ್ಷಾತ್ ದೇವರುಗಳಿದ್ದಂತೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಸಾರ್ವಜನಿಕ‌ ಆಸ್ಪತ್ರೆಯ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳ,ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.

ಮನುಷ್ಯನಿಗೆ ಆರೋಗ್ಯ ರೇಖೆವಿಲ್ಲದಿದ್ದ ಮೇಲೆ ಅರ್ಥ ರೇಖೆ ಅಧಿಕವಾಗಿದ್ದರೇನು.ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತುನೀಡುವೆ.ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸದೆ ಕರ್ತವ್ಯದ್ರೋಹವೆಸಗಬೇಡಿ.ತಮಗೆ ಸದಾ ಸಹಕಾರವಿದೆ ಆಸ್ಪತ್ರೆಯಲ್ಲಿನ ಕುಂದು ಕೊರತೆಗಳನ್ನು ಮುಕ್ತವಾಗಿ ನನ್ನ ಬಳಿ ಚರ್ಚಿಸಬೇಕು.ಅಗತ್ಯ ಸೌಲಭ್ಯಗಳನ್ನು ಸರಕಾರದ ಗಮನಕ್ಕೆ ತರಲಾಗುವುದು.ಓಪಿಡಿ ಕರ್ತವ್ಯ ನಿರತ ವೈದ್ಯರನ್ನು ಓಟಿ ಕರ್ತವ್ಯಕ್ಕೆ‌ನಿಯೋಜಿಸಬೇಡಿ ಎಂದು ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಮ್ಮನಹಟ್ಟಿ ವೃದ್ದನ ಸಾವಿಗೆ ಸ್ಪಷ್ಟನೆ:ಇತ್ತೀಚೆಗೆ ಚಿಕ್ಕಮ್ಮನಹಟ್ಟಿ ಗ್ರಾಮದ ವೃದ್ದನ ಸಾವಿನ ಬಗ್ಗೆ ವೈದ್ಯರ ನಿರ್ಲಕ್ಷ್ಯ ಎಂದು ನಡೆಸಿದ ಪ್ರತಿಭಟನೆ ಕುರಿತು ಡಾ.ಸವಿತಾ ಅವರು ಪ್ರತಿಕ್ರಿಯಿಸಿ:ನಾನು ಓಪಿಡಿ ಕರ್ತವ್ಯದಲ್ಲಿದ್ದೆ ಹೊರರೋಗಿಯಾಗಿ ಆಗಮಿಸಿದ್ದರು.ಆಗ ನಾನು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ರೆಫರ್ ಮಾಡಿದ್ದೆವು ಆದರೆ ಹಠದಿಂದ ಇಲ್ಲೇ ಉಳಿದುಕೊಂಡರು ದಾಖಲಾಗಿರಲಿಲ್ಲ.ಸಮಯ ಸಕಾಲದಲ್ಲಿ ಹೋಗದೆ ವಿಳಂಬಮಾಡಿದ್ದರಿಂದ ಸಾವನ್ನಪ್ಪಿದರು.ಇದರಲ್ಲಿ ನಮ್ಮ‌ತಪ್ಪೇನು ಇಲ್ಲ ನನ್ನ ಮೇಲೆ ವಿನಾಕಾರಣ ಆರೋಪಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ನಂತರ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ವೈದ್ಯ‌ ವೃತ್ತಿ ವಿಶಿಷ್ಠವಾದದ್ದು.ಸಾವಿನಂಚಿನಲ್ಲಿರುವ ರೋಗಿಯನ್ನು ಬದುಕಿಸುವ ಆತ್ಮಸ್ಥೈರ್ಯ ತುಂಬುವ ಕಲೆ ನಿಮ್ಮಲ್ಲಿದೆ.ಕೆಲ‌ ವರ್ಷಗಳ ಹಿಂದೆ ನನ್ನ ಇಬ್ಬರು ಪುತ್ರರು ಆರೋಗ್ಯ ಸೇವೆಯಲ್ಲಿ ತೊಡಗಿದ್ದು ತೃಪ್ತಿ ತಂದಿದೆ.ವೃತ್ತಿ ಗೌರವದ ಬಗ್ಗೆ ಕೀಳಿರಿಮೆ‌‌ ಸಲ್ಲದು.ತಮ್ಮ ಸೇವೆಗೆ ಪ್ರತಿಫಲ ಸಿಗುತ್ತದೆ ಎಂದರು.

ಆಡಳಿತ ವೈದ್ಯಾಧಿಕಾರಿ ಷಣ್ಮುಕಪ್ಪ ಮಾತನಾಡಿ,ವೈದ್ಯರ ಕೊರತೆಯಿದ್ದು.ಇರುವವರನ್ನೇ ರಾತ್ರಿ,ಹಗಲು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.ಡಯಗ್ನೋಸ್ಟಿಕ್,ರೇಡಿಯಸ್,ಲ್ಯಾಬೋರೇಟರಿ ಯಂತ್ರೋಪಕರಣಗಳಿದ್ದು. ಟೆಕ್ನೀಷಿಯನ್ ಕೊರತೆಯಿದೆ.ಒಟ್ಟು 16 ಜನ ಡಾಕ್ಟರ್ ಗಳಿದ್ದು.ಇಬ್ಬರು ಡೆಂಟಿಸ್ಟ್ ಗಳು 30 ಜನ ಸ್ಟಾಫ್ ನರ್ಸ್ ಗಳಿದ್ದಾರೆ ಎಂದು ಮಾಹಿತಿ‌ನೀಡಿದ್ದಾರೆ.

ಸಂದರ್ಭದಲ್ಲಿ ಮಲೇರಿಯಾ ವೈದ್ಯಧಿಕಾರಿ ಡಾ.ನಟರಾಜ್,
ಟಿಎಚ್.ಓಡಾ.ವಿಶ್ವನಾಥ್,ಡಾ.ಸಂಜಯ್,ಡಾ.ಸವಿತಾ,ಡಾ,ಅಶ್ವಿನಿ,ಡಾ.ಜಗನ್ನಾಥ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್ ಸೇರಿದಂತೆಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!