Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 27
ತಾಪಂ ಸಭಾಂಗಣದಲ್ಲಿ ಹಣ ಸ್ವಿಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಗಳೂರು ತಾಲ್ಲೂಕಿನ ಕೆಳಗೊಟೆ ಗ್ರಾಮದ ಬಸವನಗೌಡ ಎಂಬುವವರಿಗೆ ಸೇರಿದ ಮನೆ ಖಾತೆ ಇಸ್ವತ್ತು ಮಾಡಿಕೊಡಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಂದಿಲಿಂಗೇಶ ಸಾರಲಿಂಗಮಠ ಹಣದ ಬೇಡಿಕೆಯಿಟ್ಟಿದ್ದ
ಇಸ್ವತ್ತು ಮಾಡಿಕೊಡಲು 10 ಸಾವಿರ
. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ರಾಜು. ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಲೋಕಾಯುಕ್ತರು ಬಲೆ ಬೀಸಿದ್ದಾರೆ.
ತಾಪಂ ಇಲಾಖೆಯಲ್ಲಿ 10 ಸಾವಿರ ಹಣ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ
ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ವರ್ಗದವರು ದಾಳಿ ನಡೆಸಿ ಟ್ರ್ಯಾಪ್ ಮಾಡಿದ್ದಾರೆ .ಈ ಪ್ರಕರಣದಲ್ಲಿ ಗ್ರಾಪಂ ಸಿಬ್ಬಂದಿ ಡಾಟ್ ಎಂಟ್ರಿ ಆಪರೇಟರ್ ಅಜ್ಜಯ್ಯ ಎಂಬುವವರು ಸಹ ಆರೋಪಿಯಾಗಿದ್ದು ಈ ಇಬ್ಬರು ಸಿಬ್ಬಂದಿಗಳುನ್ನು ಲೋಕಾಯುಕ್ತ ಪೋಲಿಸರು ಟ್ರ್ಯಾಪ್ ಮಾಡಿ ಇಂದು ಪ್ರಕರಣ ದಾಖಲಿಸಿಕೊಂಡು ಬಂಧನ ಮಾಡಲಾಗಿದೆ.