By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 26_11_2026

ಸುದ್ದಿ ಜಗಳೂರು

ಶುಕ್ರದೆಸೆ ಕನ್ನಡ ಪತ್ರಿಕೆ ಮತ್ತು ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಯುಕ್ತಾಶ್ರದಲ್ಲಿ ಇದೆ ನವೆಂಬರ್ 29 ರಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 71 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯಮಟ್ಟದ ಕವಿ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು‌ ಶುಕ್ರದೆಸೆ ಪತ್ರಿಕೆ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಅವರು ತಿಳಿಸಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯನ್ನುದ್ದೆಶಿಸಿ ಮಾತನಾಡಿದರು.
ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು. ಕವಿಗೋಷ್ಠಿ ಅದ್ಯಕ್ಷತೆಯನ್ನು ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ ವಹಿಸಲಿದ್ದಾರೆ. ಕವಿಗೋಷ್ಠಿಯ ಉಸ್ತುವಾರಿಯನ್ನು ಪಿ ಎಲ್ ಮಂಜುನಾಥ ಜಮ್ಮಾಪುರ ಕವಿಗಳು ನಿರ್ವಹಿಸಲಿದ್ದಾರೆ.
71 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಧಕರನ್ನ ಸನ್ಮಾನಿಸಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದ ‌.ಕನ್ನಡ ಹಾಡುಗಳ ಗಾಯನದ ನೇತೃತ್ವವನ್ನ ಕೆಚ್ಚೆನಹಳ್ಳಿ ವೃಷಬೇಂದ್ರ ಅವರ ತಂಡ ನಡೆಸಿಕೊಡಲಿದ್ದಾರೆ. ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರು 71 ನೇ ಕನ್ನಡ ರಾಜ್ಯೋತ್ಸವ .ಮತ್ತು ಶುಕ್ರದೆಸೆ ಪತ್ರಿಕೆ ಹಾಗೂ ಶುಕ್ರದೆಸೆ ಆನ್ ಲೈನ್ ಮೀಡಿಯಾದ 5 ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಗಾಟಿಸಲಿದ್ದಾರೆ.
ಬಸವನಕೋಟೆ ಎಂ.ಎಚ್ ಚೌಡಪ್ಪ ಮಾತನಾಡಿ ಜಗಳೂರು ತಾಲ್ಲೂಕು ಅತಿ ಹಿಂದುಳಿದ ಬರದ ತಾಲ್ಲೂಕು ಆಗಿದ್ದರು ಈ ಬಯಲು ಸೀಮೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಬರವಿಲ್ಲ ಜಗಳೂರು ಕಲೆ ಸಾಹಿತ್ಯ ಸಂಗೀತಕ್ಕೆ ಹೆಸರಾದ ಊರು ಆದ ಕಾರಣ ಶುಕ್ರದೆಸೆ ಪತ್ರಿಕೆ 5 ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ಹಬ್ಬವನ್ನು ಎಲ್ಲಾರು ಒಟ್ಟುಗೂಡಿ ಹಬ್ಬದಂತೆ ಅಚರಿಸೋಣ ಎಂದರು .

ನಿವೃತ್ತ ಮುಖ್ಯ ಶಿಕ್ಷಕರು ಆಲೂರು ಬಸವರಾಜಪ್ಪ ಮಾತನಾಡಿ ಜಗಳೂರುಜ್ಜನ ಕೊಡುಕುರಿಯ ನಾಡಿನಲ್ಲಿ ಸಾಹಿತ್ಯ .ಸಂಗೀತ ಕನ್ನಡ ರಾಜ್ಯೋತ್ಸವವನ್ನ ಮಾದ್ಯಮ ಕ್ಷೇತ್ರದಿಂದ ನಡೆಸುತ್ತಿರುವುದು ಒಂದು ಪುಣ್ಯದ ಕೆಲಸ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ
ಮಾಜಿ ಶಾಸಕ ಎಸ್ ವಿ ರಾಮಚಂದ್ರ ಮಾಜಿ ಶಾಸಕ ಎಚ್ ಪಿ. ರಾಜೇಶ್ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎಂ.ಎಚ್ ಬಸವರಾಜ್. ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ. ಕಾಂಗ್ರೆಸ್ ಎಸ್. ಟಿ ಘಟಕದ ರಾಜ್ಯ ಪ್ರಧಾನಕಾರ್ಯಧರ್ಶಿ . ಬಯಲು ಸೀಮೆ ಅಭಿವೃದ್ದಿ ಮಂಡಳಿ ನಿರ್ದೇಶಕರಾದ ಎಂ.ಡಿ‌ ಕೀರ್ತಿಕುಮಾರ್ .ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು . ಬಿಜೆಪಿ ಮುಖಂಡ ಎಂ.ಬಸವರಾಜ್ ನಿಬಗೂರು .ಕಾಂಗ್ರೆಸ್ ಯುವ ಮುಖಂಡ ಬರ್ಕತ್ ವಿವಿಧ ಗಣ್ಯರು‌ ಸೇರಿದಂತೆ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಲಿದ್ದಾರೆ ..

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಹಾಗೂ ಕಲಾಪೋಷಕರಾದ ಎಂ.ಎಚ್ ಚೌಡಪ್ಪ ಬಸವನಕೋಟೆ ಅವರು ವಹಿಸಲಿದ್ದಾರೆ .ವೇದಿಕೆಯಲ್ಲಿ ವಕೀಲರಾದ ಅರ್ ಒಬಳೇಶ್ .ಹೆಚ್ ಹನುಮಂತಪ್ಪ .ರುದ್ರೇಶ್.ಮರೆನಹಳ್ಳಿ ಬಸವರಾಜ್. ಕಾ.ನಿಪ. ಅದ್ಯಕ್ಷ ಲೋಕೇಶ್ ಐಹೊಳೆ .ಎಸ್.ಸಿ ಎಸ್.ಟಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹೆಚ್ ಬಸವರಾಜ್.ಕಸಾಪ ಪ್ರಧಾನಕಾರ್ಯಧರ್ಶಿ ಮಾರಪ್ಪನಾಯಕ.ಸಾಹಿತಿ ನಿಬಗೂರು ರಾಜಪ್ಪ ತಹಶೀಲ್ದಾರ್ ಗುರುಬಸವರಾಜ್.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ವೃತ್ತ ನೀರಿಕ್ಷಕರಾದ ಸಿದ್ದರಾಮಯ್ಯ ಪಪಂ ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ್ .ಚಳ್ಳಕೆರೆ ಹಿರಿಯ ಸಾಹಿತಿ ಕೊರ್ಲಕುಂಟೆ ತಿಪ್ಪೇಸ್ವಾಮಿ. ನಿವೃತ್ತ ಸಮಾಜ ಕಲ್ಯಾಣ ಇಲಾಖೆ‌ ಮಹೇಶ್ವರಪ್ಪ. ಹಿರಿಯ ದಸಂಸ ಹೋರಾಟಗಾರ ಡಿ ಎಸ್ ಎಸ್ ಶಂಭುಲಿಂಗಪ್ಪ .ಡಿ.ಸಿ ಮಲ್ಲಿಕಾರ್ಜನ್. ಪಪಂ ಮಾಜಿ ಅದ್ಯಕ್ಷ ನಾಗೇಂದ್ರರೆಡ್ಡಿ . ಸೇರಿದಂತೆ ಗಣ್ಯರು ಮುಖ್ಯಾತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನೂರುಕ್ಕೂ ಹೆಚ್ಚು ಯುವ‌ ಕವಿಗಳು ಕವಿಯತ್ರಿಯರು .ಹಿರಿಯ ಕವಿಗಳು .ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಭಾಷಾಭಿಮಾನಿಗಳು ಸ್ವಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು‌ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಕೊಂಡುಕುರಿ ಅರಣ್ಯ ವೀಕ್ಷಕ ಕೆ.ವಿ ಬಸವರಾಜ ಕೆಳಗೋಟೆ ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

You missed

error: Content is protected !!