ಬೆಂಗಳೂರಿನ ಕನ್ನಡ ಗಂಧ ಗ್ರಂಥಾಲಯ ಸಂಸ್ಥೆಯಿಂದ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಜನ್ಮಶತಮಾನೋತ್ಸವ ಅಂಗವಾಗಿ 2025_26 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಪುಸ್ತಕ ಬಹುಮಾನಕ್ಕಾಗಿ ಜಗಳೂರಿನ ಹಿರಿಯ ಸಾಹಿತಿ ಎನ್ ಟಿ.ಎರ್ರಿಸ್ವಾಮಿ ಕೃತಿಗಳಾದ ಸಾಧನೆಗೆ ಹಾದಿ ನೂರು ಲೇಖನಗಳ ಅವರ ಜೇನ ಹನಿ ಎಂಬ ಕವನ ಸಂಕಲನ ಕ್ಕೆ ದ್ವೀತಿಯ ಬಹುಮಾನಗಳು ಲಬಿಸಿದೆ.
ಎನ್ ಟಿ ಎರ್ರಿಸ್ವಾಮಿ ಅವರು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದವರಾಗಿದ್ದು ಜಗಳೂರು ಪಟ್ಟಣದಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಕೇನರಾ ಬ್ಯಾಂಕಿನಲ್ಲಿ ವಿಭಾಗಿ ವ್ಯವಸ್ಥಾಪಕರಾಗಿ ದಾವಣಗೆರೆ ಲೀಡ್ ಬ್ಯಾಂಕ್ ಮ್ಯಾನಜರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುತ್ತಾರೆ. ಶ್ರೀಯುತರು ಕರ್ತವ್ಯದ ಜೊತೆಗೆ ಕಥೆ .ಕವನ ಕಾವ್ಯ ಇನ್ನಿತರೆ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೆಯಾದ ಛಾಪು ಮೂಡಿಸಿದ್ದಾರೆ.
ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಸುಮಾರು 42 ಕೃತಿ ರಚಿಸಿದ್ದು ಅದರಲ್ಲಿ 32 ಕೃತಿಗಳು ಪ್ರಕಟಣೆಗೊಂಡಿವೆ.ಇವುಗಳಲ್ಲಿ ಹಲವು ಕೃತಿಗಳಿಗೆ ಪ್ರಶಸ್ತಿ ಲಭಿಸಿವೆ .
ಶ್ರೀಯುತರು ಸಕ್ರಿಯ ಸಾಹಿತ್ಯ ಚಟುವಟಿಕೆಯೊಂದಿಗೆ ಸದಾ ಅಸನ್ಮುಖಿಯಾಗೊರುತ್ತಾರೆ. ಇವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯು ಸಹ ಆಯ್ಕೆ ಮಾಡಿ ಗೌರವಿಸಲಾಗಿದೆ.
ಶುಕ್ರದೆಸೆ ಕನ್ನಡ ಪತ್ರಿಕೆ ಮತ್ತು ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ 71 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 5 ನೇ ವರ್ಷದ ಪತ್ರಿಕೆ ವಾರ್ಷಿಕೋತ್ಸವ ರಾಜ್ಯಮಟ್ಟದ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ದಿನಾಂಕ ನವೆಂಬರ 29 ರಂದು ಜಗಳೂರು ತಾಪಂ ಸಭಾಂಗಣದಲ್ಲಿ . ಜರುಗಲಿರುವ ಅದ್ದೂರಿ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯಮಟ್ಟದ ಕವಿ ಗೋಷ್ಠಿ ಮತ್ತು




