ಜಗಳೂರು:ನಮ್ಮ ದೇಶದ ಧರ್ಮಗ್ರಂಥ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವೆ ನಮ್ಮ ಶ್ರೇಷ್ಠ ಧರ್ಮಾಗ್ರಂಥ ಎಂದು :ಶ್ರೀ ಬಸವನಾಗಿದೇವ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೀಸಲಾತಿ ಅನುಭವಿಸುವ ಎಲ್ಲಾ ವರ್ಗದ ಪ್ರತಿ ಮನೆಗಳಲ್ಲೂ ದೇಶದ ಶ್ರೇಷ್ಠ ಧರ್ಮಗ್ರಂಥ ಸಂವಿಧಾನ ಪರಿಪಾಲಿಸಿ ಎಂದು ಚಿತ್ರದುರ್ಗದ ಛಲವಾದಿ ಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ವೇದಿಕೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಾಚನ ನೀಡಿದರು.
ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದ ವ್ಯವಸ್ಥೆಯಲ್ಲಿ ಮತಾದಾನದ ಹಕ್ಕು ಪವಿತ್ರ ಹಕ್ಕು ಆಗಿದ್ದು ಚುನಾವಣೆ ಸಂದರ್ಭದಲ್ಲಿ ಮತದಾರರು ಮತ ಮಾರಾಟ ಮಾಡದಂತೆ ನಿಮ್ಮ ಹಕ್ಕನ್ನು ಯಾವುದೆ ಹಣ ಆಮಿಷಕ್ಕೆ ಬಲಿಯಾಗದೆ ಉತ್ತಮ ಅಭ್ಯರ್ಥಿಗೆ ಮತದಾನ ಮಾಡಿ ಭಾರತ‌ ದೇಶದ ಸಂವಿಧಾನದ ಪಾವಿತ್ರತೆ ಎತ್ತಿಹಿಡಿಯಬೇಕೆಂದು ಹೇಳಿದರು.

ಸಾತ್ವಿಕತೆ,ನಿಸ್ವಾರ್ಥ ರಾಜಕಾರಣಿಗಳು ಸಮಾಜ ಮುಖಿ ಇಚ್ಛಾಶಕ್ತಿ ಹೊಂದಿರುತ್ತಾರೆ.ನಾಲ್ಕು ದಶಕಗಳ ಹೊರಾಟ ಫಲವಾಗಿ ಜಗಳೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳ್ಳಲು ಕಾರಣೀಭೂತರಾದ
ಶಾಸಕ ಎಸ್.ವಿ.ರಾಮಚಂದ್ರ ಅವರ ಸೇವೆ ಅನನ್ಯವಾಗಿದೆ.
ಅಂಬೇಡ್ಕರ್ ವೃತ್ತದಲ್ಲಿರುವ 8 ಅಡಿ ಕಂಚಿನ ಅಂಬೇಡ್ಕರ್ ಪುತ್ಥಳಿಯನ್ನು ಶಾಸಕ ಎಸ್ ವಿ ರಾಮಚಂದ್ರರವರ ಅಮೃತ ಅಸ್ತದಿಂದ ಲೋಕರ್ಪಣೆಗೊಳಿಸಲಾಯಿತು ನಂತರ ವೇದಿಕೆ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು . ಜಗಳೂರು ವಿಧಾನ ಸಭಾ ಎಸ್ ಟಿ ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನನ್ನಾಗಿ ಆಯ್ಕೆಮಾಡಿದ ಪರಿಶಿಷ್ಠ ಸಮುದಾಗಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತಾ ಬಂದಿದ್ದೆವೆ. ಪರಿಶಿಷ್ಠ ಸಮುದಾಯಗಳ ಋಣ ತೀರಿಸಲು ಪಟ್ಟಣದಲ್ಲಿ ವಿಶ್ವಮಾನವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಹಾಗೂ ವಾಲ್ಮೀಕಿ ಭವನದ ಬಳಿ ಮಹರ್ಷಿ ವಾಲ್ಮೀಕಿ ಮಹಾನೀಯರ ಪ್ರತಿಮೆ ನಿರ್ಮಿಸಿದ ಪುಣ್ಯ ನನ್ನ ಭಾಗ್ಯ.ಮುಂದಿನ ದಿನಗಳಲ್ಲಿ ಭಕ್ತಿ ಭಂಡಾರಿ ಬಸವೇಶ್ವರ ಸೇರಿದಂತೆ ಕೆಲ ಮಹಾನೀಯರ ಪುತ್ಥಳಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಮೂರು ಮಹತ್ತರ ಯೋಜನೆಯಿಂದ ಜಗಳೂರು ಹಸಿರಾಗಲಿದೆ. ನೀರಾವರಿ ಯೋಜನೆಗಳಿಗೆ ಸರ್ಕಾರ
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಸಕಾರಗೊಂಡು ವಾರದೊಳಗೆ 4 ಕೆರೆಗಳು ಭರ್ತಿಯಾಗಲಿವೆ.ಭದ್ರಾಮೇಲ್ದಂಡೆ ಯೋಜನೆಗೆ ಮಾರ್ಚ್ 18 ರಂದು ಭೂಮಿ ಪೂಜೆ ನೆರವೇರಿಸಲಾಗುವುದು.₹482 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುವುದು ಬಿಜೆಪಿ ಆಡಳತಾವಧಿಯಲ್ಲಿ ಬರದನಾಡಿಗೆ ಮೂರು ಯೋಜನೆಗಳನ್ನು ಜಾರಿಗೊಳಿಸಿ ಈ ಬಾಗವನ್ನ ಹಸಿರು ನಾಡನ್ನಾಗಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
.

ಪಟ್ಟಣದಲ್ಲಿ ₹25 ಲಕ್ಷ ವೆಚ್ಚದಲ್ಲಿ ಒನಕೆ ಓಬವ್ವ ಸಮುದಾಯಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ ಶಿಕ್ಷಣ ಸಂಘಟನೆ ಹೊರಾಟದ ಕಿಚ್ಚು ಹಚ್ಚಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ನಮಗೆ ಆದರ್ಶವಾಗಬೇಕಿದೆ.ಮೀಸಲು ಕ್ಷೇತ್ರದಲ್ಲಿ ನಾನು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿಯಾಗಿರುವೆ.ನನ್ನ ಪುತ್ರ ಐಎಎಸ್ ಅಧಿಕಾರಿಯಾಗಿರುವುದು ಸಂವಿಧಾನದ ಬಿಕ್ಷೆಯಿಂದ ಎಂದು ಸ್ಮರಿಸಿದರು.

ಮೀಸಲಾತಿ ವಿರೋಧಿಸುವವರು ಪ್ರಸಕ್ತವಾಗಿ ಮೀಸಲಾತಿ ಪಾತ್ರೆ ಹಿಡಿದು ಹೊರಟಿರುವುದು ಸಮಾಜಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಬದ್ದ ಹಕ್ಕುಗಳ ಸಾಕ್ಷೀಕರಿಸುತ್ತಿದೆ ಎಂದರು.

ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ,ದಶಕಗಳ ಕನಸಿನ ಬಾಬಾಸಾಹೇಬರ ಪುತ್ಥಳಿ ಪಟ್ಟಣದಲ್ಲಿ ಅನಾವರಣಗೊಳಿಸಲು ಸಹಕರಿಸಿದ ಶಾಸಕರಿಗೂ ಹಾಗೂ ಅಧಿಕಾರಿಗಳಿಗೆ ಸಹೋದರ ಸಮಾಜದ ಬಂಧುಗಳಿಗೆ ಅಬಿನಂದನೆ ಸಲ್ಲಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ . ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,.ಪಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್,ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ,ಸದಸ್ಯರಾದ ಲಲಿತಾ,ಮಂಜಮ್ಮ.ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ.ಬಿಜೆಪಿ ಘಟಕದ ತಾಲ್ಲೂಕು ಅಧ್ಯಕ್ಷರಾದ ಪಲ್ಲಾಗಟ್ಟೆ ಮಹೇಶ್.ಮಾಜಿ ಜಿಪಂ ಸದಸ್ಯರಾದ,ಸೊಕ್ಕೆ ನಾಗರಾಜ್, ಡಿಡಿ ನಾಗರಾಜ್.ಭೂ ನ್ಯಾಯ ಮಂಡಳಿ ಸದಸ್ಯ ಸತೀಶ್.ಹನುಮಂತಪ್ಪ,ಸಿದ್ದಪ್ಪ,ಸತೀಶ್,ವಕೀಲ ಸಂಘದ ಅಧ್ಯಕ್ಷ ಓಂಕಾರೇಶ್ವರಪ್ಪ,ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದಪ್ಪ,ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಿರಿಯ ಸಾಹಿತಿ,ಎನ್ ಟಿ ಎರ್ರಿಸ್ವಾಮಿ,ವಕೀಲರಾದ ಹನುಮಂತಪ್ಪ . ಶುಕ್ರದೆಸೆ ಪತ್ರಿಕೆ ಸಂಪಾದಕ ಹಾಗೂ ಬಿಳಿಚೋಡು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ,ರಾಜಪ್ಪ ವ್ಯಾಸಗೊಂಡನಹಳ್ಳಿ ,ಗೌರಿಪುರ ಕುಬೇರಪ್ಪ,ಚಂದ್ರಪ್ಪ.ಗೋಪುಲಾಪುರ ಮಹೇಶ್.ಕ್ಯಾಂಪ್ ಶಿವಣ್ಣ‌.ಮಲೆಮಾಚಿಕೆರೆ ಸತೀಶ್,ರಮೇಶ್,ಸೇರಿದಂತೆ ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!