ನಕಲಿ ಬಂಗಾರದ ಬಿಲ್ಲೆ ನೀಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 6.50 ಲಕ್ಷ ಮೌಲ್ಯದ ಸ್ವತ್ತು ವಶ
ದಾವಣಗೆರೆ: ನಕಲಿ ಬಂಗಾರದ ಬಿಲ್ಲೆ ನೀಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳಿಂದ ನಗದು, ಮೊಬೈಲ್ ಸೇರಿ 6.50 ಲಕ್ಷ ಮೌಲ್ಯದ ಸ್ವತ್ತುನ್ನು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಪೊಲೀಸರು ವಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ 1) ರುದ್ರಪ್ಪ @ ಕುಲ್ಡ ರುದ್ರ (55) ಕೂಲಿ ಕೆಲಸ ವಾಸ: ಚಿಕ್ಕಬ್ಬಿಗೆರೆ ಗ್ರಾಮ, ಚನ್ನಗಿರಿ ತಾಲ್ಲೂಕು, 2) ಗಂಗಪ್ಪ (65) ಕೂಲಿ ಕೆಲಸ ವಾಸ: ಮಾದೇನಹಳ್ಳಿ ಗ್ರಾಮ, ಚನ್ನಗಿರಿ ತಾಲ್ಲೂಕು ಇವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ 06 ಲಕ್ಷದ 50 ಸಾವಿರ ರೂಪಾಯಿ ನಗದು ಹಣ ಮತ್ತು 30 ಸಾವಿರ ಬೆಲೆಬಾಳುವ 2 ಮೊಬೈಲ್ ಸೇರಿ 6.50 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರ ಪತ್ತೆಗಾಗಿ ಡಿವೈಎಸ್‌ಪಿ ಸಂತೋಷ್ ಎಸ್ ಮತ್ತು ಸಂತೇಬೆನ್ನೂರು ವೃತ್ತದ ಸಿಪಿಐ ಮಹೇಶ್ ಮಾರ್ಗದರ್ಶನದಂತೆ ಸಂತೇಬೆನ್ನೂರು ಪಿ.ಎಸ್.ಐ ದೇವರಾಜ ನೇತೃತ್ವದಲ್ಲಿ ಹಾಗೂ ಸಿಬ್ಬಂದಿಗಳಾದ ಮೈಲಾರಪ್ಪ, ಎ.ಎಸ್.ಐ, ಉಮೇಶ ವಿಟಿ, ಕೊಟ್ರೇಶ, ದೊಡ್ಡೇಶಿ, ಆಂಜನೇಯ, ಮಂಜುನಾಥ, ಮತ್ತು ಜೀಪ್ ಚಾಲಕ ಸೋಮಶೇಖರ ಬೆಂಕಿಕೆರೆ ರವರನ್ನೊಳಗೊಂಡ ತಂಡವು ಸಂತೇಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕಸ್ತೂರ ಬಾ ಗ್ರಾಮದ ಜಮೀನಿನ ಬಳಿ ಕಲ್ಲಪ್ಪ ಕಾಡಪ್ಪ ಗುಂಜುಗಾವಿ ಮತ್ತು ಪ್ರಶಾಂತ ಎಂಬುವರಿಗೆ ಮನೆಯ ಪಾಯವನ್ನು ತೆಗೆಯುವಾಗ ಅಸಲಿ ಬಂಗಾರ ಸಿಕ್ಕಿರುತ್ತದೆ ಎಂದು ನಂಬಿಸಿ 08ಲಕ್ಷ ರೂ. ನಗದು ಹಣವನ್ನು ಪಡೆದುಕೊಂಡು ನಕಲಿ ಬಂಗಾರವನ್ನು ನೀಡಿ ಮೋಸ ಮಾಡಿದ್ದರು
ವಂಚನೆ ಪ್ರಕರಣಗಳ ಆರೋಪಿಗಳ ಪತ್ತೆ ಮತ್ತು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ದಾವಣಗೆರೆ ಎಸ್ಪಿ ಸಿ.ಬಿ. ರಿಷ್ಯಂತ್, ಮತ್ತು ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.
: