ಜಗಳೂರು ಸುದ್ದಿ :-

ತಾಲ್ಲೂಕಿನ ‌ವ್ಯಾಸಗೊಂಡನಹಳ್ಳಿ‌ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲಾ ಮಕ್ಕಳಿಂದ  ಕನ್ನಡ ರಾಜ್ಯೋತ್ಸವದ  ಮೆರಗು  

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧

ಶಾಲಾ‌ಮಕ್ಕಳು ಕನ್ನಡ ಭಾವುಟ ಹಿಡಿದು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ೬೮ ನೇ ರಾಜ್ಯೋತ್ಸವ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಣೆಗೆ ಸಾಕ್ಷಿಯಾಗಿದ ದೃಶ್ಯ ಕಂಡು ಬಂದಿತು.

ಸರ್ಕಾರಿ ಪ್ರಾಥಮಿಕ  ಶಾಲಾ ಅಂಗಳದಲ್ಲಿ ಶಿಕ್ಷಕಿ ಶಶಿಕಲಾರವರಿಂದ ಧ್ವಜಾರೋಹಣ ನೇರವೇರಿಸಿ ಕಾರ್ಯಕ್ರಮದಲ್ಲಿ ಮಕ್ಕಳನ್ನು ‌ಕುರಿತು  ಮಾತನಾಡಿದರು.ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕ ರಾಜ್ಯ  ಎಂದು ನಾಮಕರಣ  ಮಾಡಿದ ಸವಿ ನೆನಪಿನ ನವೆಂಬರ್ ೧ ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ,  ಕರ್ನಾಟಕ ರಾಜ್ಯದಲ್ಲಿ ವಾರ್ಷಿಕವಾಗಿ ನವೆಂಬರ್ 1 ರಂದು ಆಚರಿಸಲಾಗುವ ಸಾರ್ವಜನಿಕ ರಜಾದಿನವಾಗಿದ್ದು .  1956 ರಲ್ಲಿ ಪ್ರಾಂತ್ಯವಾರು ಪ್ರದೇಶಗಳುನ್ನು  ಒಗ್ಗೂಡಿಸಿ ಕರ್ನಾಟಕ  ರಾಜ್ಯವನ್ನು ಏಕಿಕರಣಕ್ಕಾಗಿ ಶ್ರಮಿಸಿದ ಹಲವು ಮಹನೀಯರ ಹೋರಾಟದ ಪ್ರತಿಫಲ ಕನ್ನಡ ರಾಜ್ಯೋತ್ಸವ ಎಂದರು.

ಈ ವೇಳೆ ಶಾಲಾ ಎಸ್ ಡಿ ಎಂ ಸಿ. ಅಧ್ಯಕ್ಷ ಚೌಡೇಶಿ ಧ್ವಜವಂದನೆ ಸ್ವಿಕರಿಸಿ ಕನ್ನಡ ನಾಡು ನುಡಿ ಹಬ್ಬವನ್ನ ಪ್ರತಿ ಕನ್ನಡಿಗರ ಮನೆ ಮನಗಳಲ್ಲಿ ಸಂಭ್ರಮದಿಂದ ಆಚರಿಸುವ ಕನ್ನಡ ರಾಜ್ಯೋತ್ಸವ  ಈ ಬಾರಿ ೫೦ ರ ಸಂಭ್ರಮದ ನಾಡ ಹಬ್ಬವಾಗಿದೆ . 

ಕನ್ನಡ ನಾಡಿನ ಇತಿಹಾಸ ಪರಂಪರೆಯನ್ನು ವಿಧ್ಯಾರ್ಥಿಗಳು ತಿಳಿಯಬೇಕಾಗಿದೆ. ಮಕ್ಕಳು ಪಠ್ಯ ಪುಸ್ತಕ ಜೊತೆ ಜೊತೆಗೆ  ನಮ್ಮ ಪ್ರಾತ ಸ್ಮರಣೆಯರು ಕನ್ನಡಕ್ಕಾಗಿ ಮಾಡಿದ ಹೋರಾಟ ಹಾದಿ ಅಂತ್ಯವನ್ನ  ಶಿಕ್ಷಕರ ಮೂಲಕ ಸಾಮಾನ್ಯ ಜ್ಞಾನ ನಮಗೆ ಅತ್ಯವಶ್ಯಕ ಎಂದರು. ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚಾರಿ ಕನ್ನಡದ ಜೈಘೊಷಣೆಗಳು ಮೊಳಗಿಸಿದರು‌

 .

Leave a Reply

Your email address will not be published. Required fields are marked *

You missed

error: Content is protected !!