ರಾಜ್ಯ ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು ಸಂಘದ ವತಿಯಿಂದ ೬೮ ನೇ ಕನ್ನಡ ರಾಜ್ಯೋತ್ಸವ ಹಬ್ಬ ಆಚರಣೆ ಶ್ಲಾಘನೀಯ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲ್
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೧
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ೬೮ ನೇ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಕನ್ನಡ ಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲ್ ರವರು ಪುಷ್ಪಾರ್ಚನೆ ಮಾಡಿ ಕನ್ನಡ ನಾಡು ನುಡಿ ನಮ್ಮ ಉಸಿರಾಗಿದ್ದು ಹೆಸರಾಯಿತು ಕರ್ನಾಟಕ ಉಸಿರಾಗಲಿ ಎಂಬ ಘೋಷವಾಖ್ಯೆದೊಂದಿಗೆ ಇಂದಿಗೆ ಕರ್ನಾಟಕ ಉದಯವಾಗಿ ೫೦ ವರ್ಷ ಸಂದಿವೆ ನಮ್ಮ ಘನ ಸರ್ಕಾರ ಆದೇಶದಂತೆ ಕಛೇರಿಗಳಲ್ಲಿ ಸೇರಿದಂತೆ ಕರ್ನಾಟಕದ ಪ್ರತಿ ಮನೆ ಮನಗಳಲ್ಲಿ ನಾಡ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸುತ್ತಿದ್ದೆವೆ ಎಂದು ಶುಭಾ ಹಾರೈಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ.ಪಿ ಪಾಲಯ್ಯ ರವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು ನಮ್ಮ ಕನ್ನಡ ಭಾಷೆಗೆ ೨೦೦೦ ಸಾವಿರ ವರ್ಷಗಳ ಇತಿಹಾಸವಿದ್ದು ರನ್ನ ಪಂಪ ಆದಿಕವಿ ಮಹರ್ಷಿ ವಾಲ್ಮೀಕಿ ರಂತ ಅನೇಕ ಕವಿಗಳು .ಋಷಿಮುನಿಗಳು.ಚಿಂತಕರು ಕಲಾವಿದರು .ಜನಪದೀಯರಿಂದ ಕನ್ನಡ ಭಾಷೆ ಸಂಸ್ಕೃತಿ ಪರಂಪರೆ.ಆಚರಣೆ ಪ್ರತೀಕವಾಗಿದೆ.ಇದೀಗ ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಾಡ ಹಬ್ಬ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಮತ್ತೂಷ್ಟು ಸಮಾಜಮುಖಿ ಕಾರ್ಯಗಳೊಂದಿಗೆ ಮಾದರಿ ಸಂಘಟನೆಯಾಗಿ ಬೆಳೆಯಿಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾದ್ಯಕ್ಷ ದೊಡ್ಡಬೊಮ್ಮನಹಳ್ಳಿ ಸಿ.ಬಸವರಾಜ್, ರಾಜ್ಯಾಧ್ಯಕ್ಷ ಹನುಮಂತಾಪುರ ಹೆಚ್.ಆರ್. ಬಸವರಾಜ್, ಪ್ರಧಾನ ಕಾರ್ಯದರ್ಶಿ ಚಿಕ್ಕಮ್ಮನಹಟ್ಟಿ ಓ.ಮಂಜಣ್ಣ, ಉಪಾಧ್ಯಕ್ಷ ವ್ಯಾಸಗೊಂಡನಹಳ್ಳಿ ಎಂ.ರಾಜಪ್ಪ, ಹೆಚ್.ಎಂ.ಹೊಳೆ ಧನ್ಯಕುಮಾರ್, ಖಜಾಂಚಿ ಪಾಲನಾಯಕನಕೋಟೆ ಬಿ.ಓ.ಮಾರುತಿ, ಸಹ ಕಾರ್ಯದರ್ಶಿ ಮರೇನಹಳ್ಳಿ ಬಾಬು, ಎ.ಕೆ.ಮಾರಪ್ಪ, ಸಂಘಟನಾ ಕಾರ್ಯದರ್ಶಿ ಸಿದ್ದಮ್ಮನಹಳ್ಳಿ ಬಸವರಾಜ್, ಮಾದಿಹಳ್ಳಿ ಮಂಜುನಾಥ್, ಕಾನೂನು ಸಲಹೆಗಾರರಾದ ಗೋಗುದ್ದು ತಿಪ್ಪೇಸ್ವಾಮಿ, ಸಿ.ಎಂ.ಹೊಳೆ ಸಂದೀಪ್, ಸೊಕ್ಕೆ ಜಗದೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.