ಪಟ್ಟಣದಲ್ಲಿ ಅನಧಿಕೃತವಾಗಿ ಆಳವಡಿಸುವ ಬಂಟಿಂಗ್ಸ್ ಬ್ಯಾನರ್ ಗಳಿಗೆ ಬ್ರೇಕ್. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಜಗಳೂರು ಪಟ್ಟಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಹೆಸರಿನಲ್ಲಿ ಪರವಾನಿಗಿಲ್ಲದೆ ಬಂಟಿಂಗ್ಸ್ ನಾಮಫಲಕ ಆಳವಡಿಸಿದರೆ ತೆರವು ಜಗಳೂರು ಪಟ್ಟಣದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಯಾವುದೇ ರಾಜಕೀಯ ಪಕ್ಷಗಳು ವಿವಿಧ ಸಂಸ್ಥೆಗಳು ಅನಧಿಕೃತವಾಗಿ ಬ್ಯಾನರ್ ಬಂಟಿಂಗ್ಸ್ ಆಳವಡಿಸುವಂತಿಲ್ಲ ಕಡ್ಡಾಯವಾಗಿ ನಮ್ಮ ಇಲಾಖೆಯಿಂದ ಪರವಾನಿಗೆ ಪಡೆದು ಶುಲ್ಕ ಪಾವತಿಸಿ ಆಳವಡಿಸುವಂತೆ ತಿಳಿಸಿದ್ದಾರೆ. ಸರ್ಕಾರದ ಪೌರ ಸಭೆಗಳ ಆಡಳಿತ ನೀಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.. ಅನಧಿಕೃತವಾಗಿ ಬೇಕಾ ಬಿಟ್ಟಿ ಬಂಟಿಂಗ್ಸ್ ಬ್ಯಾನರ್ ಗಳು ಆಳವಡಿಸಿದರೆ ಪಪಂ ಇಲಾಖೆಯಿಂದ ಯಾವುದೇ ಮುಲಾಜಿಲ್ಲದೆ ತೆರವುಗೋಳಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.