ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಪಕ್ಷ ನಿಷ್ಠೆ   ಸೇವಕ ಕಾಂಗ್ರೆಸ್ ಟಿಕೆಟ್ ನೀಡಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವೆ:ಕಲ್ಲೇಶ್ ರಾಜ್ ಪಟೇಲ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೮

ಜಗಳೂರು ಸುದ್ದಿ:ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠೆ ಸೇವೆಯ ಕಾರ್ಯಕರ್ತನಾಗಿದ್ದು ಈ ಬಾರಿ  ದಾವಣಗೆರೆ ಲೋಕಸಭಾ ಕ್ಷೇತ್ರದ  ಪ್ರಬಲ ಆಕಾಂಕ್ಷಿಯಾಗಿರುವೆ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದ ಪತ್ರಕರ್ತರೊಂದಿಗೆ    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ  ಸೇವೆ ಸಲ್ಲಿಸಿಕೊಂಡು ಬಂದಿರುವಂತ ನನಗೆ ಪಕ್ಷದಲ್ಲಿ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸುವೆ ಈ ಹಿಂದೆ  ಕಾಂಗ್ರೆಸ್ ವಿದ್ಯಾರ್ಥಿ ಘಟಕದಲ್ಲಿ ಕೆಲಸ ಮಾಡಿರುವೆ ,ತಾಲೂಕು ಉಸ್ತುವಾರಿ,ಕೆಪಿಸಿಸಿ ಸದಸ್ಯನಾಗಿರುವೆ.ಇಂದಿಗೂ ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ಹಲವಾರು ಕಾರ್ಯಕ್ರಮಗಳ ಯಶಸ್ವಿಗೆ ಪ್ರಾಮಾಣಿಕವಾಗಿ ಪಾಲ್ಗೊಂಡು ಕೇಂದ್ರದ ರಾಹುಲ್‌ ಗಾಂಧಿ ಭಾರತ್ ಜೊಡೋ ಯಾತ್ರೆಯಲ್ಲಿ  ಸಕ್ರಿಯವಾಗಿ ಭಾಗವಹಿಸಿರುವೆ ನನ್ನ ಪಕ್ಷ ನಿಷ್ಠೆ ,ಸೇವೆ,ಹಿರಿಯತನವನ್ನು ಗುರುತಿಸಲಿ ಹಾಗಾಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ  ನಾನು  ಆಕಾಂಕ್ಷಿಯಾಗಿರುವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಂತೆ  ಪಕ್ಷದ ನಿರ್ಣಯಕ್ಕೆ ಬದ್ದನಾಗಿರುವೆ.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ನಮ್ಮ ಸಿದ್ದಾಂತದಲ್ಲಿದ್ದಾರೆ  ಎಂದು ಹೇಳಿದರು.

ಬರ ಎದುರಿಸುವಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಆಡಳಿತ ವೈಫಲ್ಯ:ಜಿಲ್ಲೆಯ 6ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ.ಅಲ್ಲದೆ ಕೇಂದ್ರದಿಂದ ಅಶೋಕ ಕುಮಾರ್ ಅವರ ನೇತೃತ್ವದ ತಂಡ ತಾಲೂಕಿಗೆ ಆಗಮಿಸಿದಾಗ ಜಿಲ್ಲಾ ಸಂಸದರು ಭಾಗವಹಿಸಿಲ್ಲ.ವರದಿಯಂತೆ ಬರದಿಂದ ರಾಜ್ಯದಲ್ಲಿ   ₹37000 ಕೋಟಿ ನಷ್ಟವಾಗಿದೆ. ಶೇ.50 ಶೀಘ್ರ ಪರಿಹಾರಕ್ಕೆ  ಕೇಂದ್ರದಲ್ಲಿನ ಆಡಳಿತ ಬಿಜೆಪಿ ಸರಕಾರಕ್ಕೆ ಒತ್ತಡ ತಂದಿಲ್ಲ.ಬಿಜೆಪಿ ನೇತೃತ್ವದಲ್ಲಿ ಪ್ರಸಕ್ತವಾಗಿ ಬರ ಅಧ್ಯಯನ ಅಪ್ರಸ್ತುತ ಇದು ಅವರ ಆಡಳಿತ ವೈಫಲ್ಯಕ್ಕೆ‌ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಕೇಂದ್ರ ಕೃಷಿ  ಸಚಿವ ನರೇಂದ್ರ ಸಿಂಗ್ ಥೋಮ ಅವರು ಮಧ್ಯ ಪ್ರದೇಶದ ಧಿಮಾನಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಚರಾಜ್ಯ ಚುನಾವಣಾ ಗೆಲುವಿನ ಸಂಚಿನಲ್ಲಿದ್ದಾರೆ.ಈ ಮಧ್ಯೆ ಕರ್ನಾಟಕಕ್ಕೆ ಬರಪರಿಹಾರ ವಿಳಂಬವಾಗುತ್ತದೆ.ರೈತರ ಹೆಸರಿನಲ್ಲಿ ರಾಜಕಾರಣ ಮಾಡುವವರಿಂದ ರೈತರ ಬದುಕು ಕಂಗಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You missed

error: Content is protected !!